More

    ಹಾಸನದಲ್ಲಿ ಭೀಕರ ರಸ್ತೆ ಅಪಘಾತ: ಐವರು ಮಕ್ಕಳು ಸೇರಿ 9 ಮಂದಿ ಸಾವು, ಊರಿನ ಸಮೀಪವೇ ನಡೆಯಿತು ದುರಂತ

    ಹಾಸನ: ತಡರಾತ್ರಿ ಸಾರಿಗೆ ಬಸ್​, ಟೆಂಪೊ ಟ್ರಾವೆಲರ್​ ಹಾಗೂ ಹಾಲಿನ ಟ್ಯಾಂಕರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತವೊಂದರಲ್ಲಿ ಮಕ್ಕಳು ಸೇರಿ 9 ಮಂದಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

    ಈ ಘಟನೆ ಅರಸೀಕೆರೆ ತಾಲೂಕಿನ ಬಾಣವಾರ ಹೋಬಳಿಯಲ್ಲಿರುವ ಅರಸೀಕೆರೆ-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ನಾಲ್ವರು ಮಕ್ಕಳು ಸೇರಿದಂತೆ 9 ಮಂದಿ ದುರಂತ ಸಾವಿಗೀಡಾಗಿದ್ದಾರೆ. ಮೃತರನ್ನು ಲೀಲಾವತಿ (50), ಚೈತ್ರಾ (33), ಸಮರ್ಥ (10), ಡಿಂಪಿ (12), ತನ್ಮಯ್ (10), ಧ್ರುವ (2), ವಂದನಾ (20), ದೊಡ್ಡಯ್ಯ (60) ಹಾಗೂ ಭಾರತಿ (50) ಎಂದು ಗುರುತಿಸಲಾಗಿದೆ.

    ಹಾಲಿನ ಟ್ಯಾಂಕರ್, KSRTC ಬಸ್ ಮತ್ತು ಟೆಂಪೋ ಟ್ರಾವೆಲ್ಲರ್​​ ನಡುವೆ ಅಪಘಾತ ಸಂಭವಿಸಿದೆ. ಎಡ ಬದಿಯಿಂದ ಬರಬೇಕಿದ್ದ ಹಾಲಿನ ಟ್ಯಾಂಕರ್ ಬಲ ಬದಿಯಿಂದ ಬಂದಿರುವುದೇ ಅಪಘಾತಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. ಚತುಷ್ಪಥ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದ ಕಾರಣ ಡಿವಿಯೇಷನ್ ಪಡೆಯದೆ ಹಾಲಿನ ಟ್ಯಾಂಕರ್ ಆಗಮಿಸಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

    ಟಿಟಿ ವಾಹನದಲ್ಲಿದ್ದವರು ಅರಸೀಕೆರೆ ತಾಲೂಕಿನ, ಬಾಣವಾರ ಹೋಬಳಿಯ ಹಳ್ಳಿಕೆರೆ ಗ್ರಾಮದವರು. ಧರ್ಮಸ್ಥಳದಿಂದ ಹಾಸನಕ್ಕೆ ತೆರಳಿ, ಅಲ್ಲಿ ಹಾಸನಾಂಬೆಯ ದರ್ಶನ ಪಡೆದು ತಮ್ಮ ಊರಾದ ಹಳ್ಳಿಕೆರೆಗೆ ತೆರಳುತ್ತಿದ್ದರು. ಇನ್ನೇನು ಹಳ್ಳಿಕೆರೆಗೆ ಹೋಗಿ ಮನೆ ಸೇರುವ ತವಕದಲ್ಲಿದ್ದವರು ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ 10 ಮಂದಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಮತ್ತು ಮೃತದೇಹಗಳನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

    ಘಟನಾ ಸ್ಥಳಕ್ಕೆ ಬಾಣಾವರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅರಸಿಕೆರೆ ಶಾಸಕ ಶಿವಲಿಂಗೇಗೌಡ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳನ್ನು ಆರೋಗ್ಯ ವಿಚಾರಿಸಿ, ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್​)

    ಬಾಲಿವುಡ್​ನಲ್ಲಿ ಜನರಿಗಿವೆ ಮೂರು ಮುಖಗಳು: ನಟಿ ನರ್ಗಿಸ್ ಫಕ್ರಿ

    ಮೂರನೇ ಬಾರಿ, ಡ್ರ್ಯಾಗನ್ ಸವಾರಿ; ಜಿನ್​ಪಿಂಗ್​ಗೆ ಮತ್ತೆ ಕೆಂಪು ಪಕ್ಷದ ನಾಯಕತ್ವ

    ಡಾ.ಕೋರೆ ಕೈಯಲ್ಲಿ ಕೆಎಲ್​ಇ ಸಂಸ್ಥೆ ಸುಭದ್ರ: ಸಿಎಂ ಬಸವರಾಜ ಬೊಮ್ಮಾಯಿ ಶ್ಲಾಘನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts