More

    ಡಾ.ಕೋರೆ ಕೈಯಲ್ಲಿ ಕೆಎಲ್​ಇ ಸಂಸ್ಥೆ ಸುಭದ್ರ: ಸಿಎಂ ಬಸವರಾಜ ಬೊಮ್ಮಾಯಿ ಶ್ಲಾಘನೆ

    ಬೆಳಗಾವಿ: ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಸರ್ಕಾರಗಳು ಮಾಡದಿರುವ ಕೆಲಸಗಳನ್ನು ಕೆಎಲ್​ಇ ಸಂಸ್ಥೆಯ ಮೂಲಕ ಡಾ. ಪ್ರಭಾಕರ ಕೋರೆ ಮಾಡುತ್ತಿದ್ದಾರೆ. ಈ ಸಂಸ್ಥೆಗಾಗಿ ಜೀವನ ಮೀಸಲಿಟ್ಟು ಹಗಲಿರುಳು ಶ್ರಮಿಸುತ್ತಿರುವ ಅವರ ಕೈಯಲ್ಲಿ ಸಂಸ್ಥೆ ಸುರಕ್ಷಿತ, ಭದ್ರವಾಗಿ ಬೆಳೆದು ನಿಂತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

    ಬೆಳಗಾವಿ ನಗರದ ಜೆಎನ್​ಎಂಸಿ ಆವರಣದ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದ ಕೆಎಲ್​ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರ 75ನೇ ಜನ್ಮದಿನದ ನಿಮಿತ್ತ ಅಭಿನಂದನಾ ಸಮಿತಿ ಹಮ್ಮಿಕೊಂಡಿದ್ದ ಅಮೃತಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಡಾ. ಪ್ರಭಾಕರ ಕೋರೆ ಅವತ್ತು ಕೆಎಲ್​ಇ ಸಂಸ್ಥೆಗಾಗಿ ಹಾಕಿರುವ ಶ್ರಮ, ಹೋರಾಟವನ್ನು ರಾಜಕೀಯ ಕ್ಷೇತ್ರದಲ್ಲಿ ಹಾಕಿದ್ದರೆ ಇವತ್ತು ಒಳ್ಳೆಯ ಸ್ಥಾನದಲ್ಲಿರುತ್ತಿದ್ದರು. ಆದರೆ, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿನ ಸಾಧನೆಯ ಮೂಲಕ ಜನರ ಮನಸ್ಸಿನಲ್ಲಿ ಉಳಿಸಿಕೊಂಡಿದ್ದಾರೆ. ಬಡವರಿಗೆ ಉಚಿತ ಆರೋಗ್ಯ, ಶಿಕ್ಷಣ ನೀಡುವ ಮೂಲಕ ಸಮಾಜ ಸುಧಾರಣೆಗೆ ಅಡಿಪಾಯ ಹಾಕಿ ಸಂಸ್ಥೆಯನ್ನು ಹೆಮ್ಮರವಾಗಿ ಬೆಳಸಿರುವುದು ವಿಸ್ಮಯ ಎಂದರು.

    ಪ್ರತಿಯೊಬ್ಬರಿಗೂ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಸರ್ಪ¤ಗಳು ಆರಂಭಿಸಿರುವ ಕೆಎಲ್​ಇ ಸಂಸ್ಥೆಯನ್ನು ಡಾ. ಪ್ರಭಾರ ಕೋರೆ ಟೀಕೆ, ಟಿಪ್ಪಣೆ, ಕೋರ್ಟ್, ಕಚೇರಿಗಳಲ್ಲಿ ಹೋರಾಟ ಸೇರಿ ಎಲ್ಲ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಿ ಬೆಳೆಸಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಂಸ್ಥೆ ಕಟ್ಟಿ ಬೆಳಸುತ್ತಿರುವ ರೀತಿಯ ಎಲ್ಲರಿಗೂ ಮಾದರಿಯಾಗಿದೆ. ಅಲ್ಲದೆ, ಕೆಎಲ್​ಇ ಸಂಸ್ಥೆಯ ಸಾಧನೆ ಅನುಸರಿಸಿ ಇತರ ಶಿಕ್ಷಣ ಸಂಸ್ಥೆಗಳೂ ಬೆಳೆಯುತ್ತಿವೆ. ಸದಾ ಸಂಸ್ಥೆಯ ಬಗ್ಗೆ ಚಿಂತಿಸುವ ವ್ಯಕ್ತಿ ಡಾ.ಪ್ರಭಾಕರ ಕೋರೆ ಕರ್ನಾಟಕದ ಹೆಮ್ಮಯ ಪುತ್ರರಾಗಿದ್ದಾರೆ ಎಂದು ಬಣ್ಣಿಸಿದರು.

    ಡಾ. ಕೋರೆ ಮುಟ್ಟಿದ್ದೆಲ್ಲ ಚಿನ್ನ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಸಮಾಜದಲ್ಲಿ ಕೆಲವು ಜನರನ್ನು ನೋಡಿದ ತಕ್ಷಣವೇ ಉತ್ಸಾಹ ಬರುತ್ತದೆ. ಅವರಂತೆ ಸಾಧನೆ ಮಾಡಲು ಹುಮ್ಮಸ್ಸು ಬರುತ್ತದೆ. ಆ ವ್ಯಕ್ತಿಗಳ ಸಾಲಿನಲ್ಲಿ ಡಾ. ಪ್ರಭಾಕರ ಕೋರೆ ನಿಲ್ಲುತ್ತಾರೆ. ಕೆಎಲ್​ಇ ಸಂಸ್ಥೆಯನ್ನು ಬೆಳೆಸಿರುವುದು ಅದಕ್ಕೆ ಸಾಕ್ಷಿ. ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಕೆಎಲ್​ಇ ಸಂಸ್ಥೆಯ ಮೂಲಕ ಡಾ. ಪ್ರಭಾಕರ ಕೋರೆ ಅವರು ಮಾಡಿರುವ ಸಾಧನೆಯನ್ನು ಸುವರ್ಣಾಕ್ಷರದಲ್ಲಿ ಬರೆದಿಡಬೇಕು. ಡಾ.ಕೋರೆ ಅವರು ಕೆಎಲ್​ಇ ಸಂಸ್ಥೆಯ ಶಿಕ್ಷಣದ ದೇವಾಲಯಕ್ಕೆ ಚಿನ್ನದ ಕಲಶವಿಟ್ಟು ಬೆಳಸಿದ್ದಾರೆ. ಕೋರೆ ಅವರು ಮುಟ್ಟಿದ್ದೆಲ್ಲ ಚಿನ್ನವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಡಾ.ಕೋರೆಯಿಂದ ಜನಾಂದೋಲನ: ಕೇಂದ್ರ ಶಿಕ್ಷಣ, ಕೌಶಲ ಅಭಿವೃದ್ಧಿ ಸಚಿವ ಧಮೇಂದ್ರ ಪ್ರಧಾನ್ ಮಾತನಾಡಿ, ಬಸವಣ್ಣ, ಕಿತ್ತೂರು ರಾಣಿ ಚನ್ನಮ್ಮಳ ವೀರಭೂಮಿಯಲ್ಲಿ ಡಾ.ಕೋರೆ ಅಮೃತಮಹೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ. ಡಾ.ಕೋರೆ ಅವರು ಶಿಕ್ಷಣ, ಆರೋಗ್ಯ, ರಾಜಕೀಯ, ಸಾಮಾಜಿಕ, ಸಾಹಿತ್ಯ ಸೇರಿ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಶಿಕ್ಷಣದಿಂದ ಮಾತ್ರ ಸಮಾಜ ಸುಧಾರಣೆ ಸಾಧ್ಯ ಎಂದು 12ನೇ ಶತಮಾನದಲ್ಲಿ ಬಸವಣ್ಣವರು ಸಂದೇಶ ನೀಡಿದ್ದರು. ಅದನ್ನು ಕೆಎಲ್​ಇ ಸಂಸ್ಥೆ ಮಾಡಿ ತೋರಿಸಿದೆ ಎಂದರು.

    ಶಿಕ್ಷಣ ರಥಯಾತ್ರೆ ಮುಂದುವರಿಯಲಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ದೇಶವು 75ನೇ ಸ್ವಾತಂತ್ರ್ಯ ಆಚರಿಸುವ ಜತೆಗೆ ಡಾ. ಪ್ರಭಾಕರ ಕೋರೆ ಅವರು ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಹೆಮ್ಮೆಯ ವಿಷಯ. ಸದಾಕಾಲ ಕೆಎಲ್​ಇ ಸಂಸ್ಥೆಗಾಗಿ ನಿರಂತರ ಶ್ರಮ ವಹಿಸುತ್ತಿದ್ದಾರೆ. ಡಾ.ಕೋರೆ ಅವರು ಗುಣಮಟ್ಟದ ವಿಷಯದಲ್ಲಿ ರಾಜಿ ಇಲ್ಲ. ಅವರೊಬ್ಬ ನಿಖರ, ಹಾಸ್ಯಪ್ರಜ್ಞೆಯುಳ್ಳ ವ್ಯಕ್ತಿ. ದೊಡ್ಡವರೊಂದಿಗೆ ದೊಡ್ಡವರಾಗಿ ಸಣ್ಣವರೊಂದಿಗೆ ಸಣ್ಣವರಾಗಿ ಯುವಕರೊಂದಿಗೆ ಯುವಕರಂತೆ ಕೆಲಸ ಮಾಡುವ ಕೋರೆ ಅವರು ಸಮಾಜಕ್ಕೆ ಮಾದರಿ ವ್ಯಕ್ತಿ. ಅವರ ಶಿಕ್ಷಣ ರಥಯಾತ್ರೆ ನಿರಂತರವಾಗಿ ಮುಂದುವರಿಯಲಿ ಎಂದು ಶುಭ ಹಾರೈಸಿದರು. ಕೆಎಲ್​ಇ ಸಂಸ್ಥೆಯ ನಿರ್ದೇಶಕ ಮಹಾಂತೇಶ ಕವಟಗಿಮಠ ಪ್ರಾಸ್ತಾವಿಕ ಮಾತನಾಡಿ, 1916ರಲ್ಲಿ ಸಪ್ತ ಋಷಿಗಳು ಆರಂಭಿಸಿದ ಕೆಎಲ್​ಇ ಸಂಸ್ಥೆಯನ್ನು 80ರ ದಶಕದಲ್ಲಿ ವೇಗವಾಗಿ ಬೆಳಸಿಸಿದ ಕೀರ್ತಿ ಡಾ. ಪ್ರಭಾಕರ ಕೋರೆ ಅವರಿಗೆ ಸಲ್ಲುತ್ತದೆ. ಇವತ್ತು ನೂರಾರು ಶಿಕ್ಷಣ ಸಂಸ್ಥೆಗಳಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಕಲಿ ಯುತ್ತಿರುವುವುದರ ಹಿಂದೆ ಕೋರೆ ಅವರ ಪರಿಶ್ರಮ ಅಡಗಿದೆ ಎಂದರು.

    ಡಾ.ಕೋರೆ ಕೈಯಲ್ಲಿ ಕೆಎಲ್​ಇ ಸಂಸ್ಥೆ ಸುಭದ್ರ: ಸಿಎಂ ಬಸವರಾಜ ಬೊಮ್ಮಾಯಿ ಶ್ಲಾಘನೆ
    ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಕೆಎಲ್​ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ‘ಅನನ್ಯ ಸಾಧಕ’ ಅಭಿನಂದನ ಗ್ರಂಥವನ್ನು ಸಿಎಂ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡಿದರು. ಕೇಂದ್ರ ಸಚಿವರಾದ ಧಮೇಂದ್ರ ಪ್ರಧಾನ್, ಪ್ರಲ್ಹಾದ ಜೋಶಿ, ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ ಶೆಟ್ಟರ್, ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಶ್ರೀಮತಿ ಆಶಾ ಕೋರೆ, ಮಹಾಂತೇಶ ಕವಟಗಿಮಠ ಇತರರು ಇದ್ದರು.

    ಮುಜರಾಯಿ ಸಚಿವೆ ಜೊಲ್ಲೆ, ಶಿಕ್ಷಣ ಸಚಿವ ವಿ.ನಾಗೇಶ, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ, ಬೃಹತ್ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಸಂಸದರಾದ ಅಣ್ಣಾಸಾಹೇಬ ಜೊಲ್ಲೆ, ಮಂಗಲ ಅಂಗಡಿ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಯುವ ಧುರೀಣ ಅಮಿತ್ ಕೋರೆ, ಡಾ.ಪ್ರೀತಿ ದೊಡವಾಡ, ಎಂ.ಸಿ.ಉದಾಸಿ, ಜಿ.ಎಂ.ಸಿದ್ಧೇಶ್ವರ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಅನಿಲ ಬೆನಕೆ, ಅಭಯ ಪಾಟೀಲ, ಮಹಾದೇವಪ್ಪ ಯಾದವಾಡ, ದುರ್ಯೋಧನ ಐಹೊಳೆ, ಕೆಎಲ್​ಇ ಅಧ್ಯಕ್ಷ ಹಾಗೂ ಶಾಸಕ ಮಹಾಂತೇಶ ಕೌಜಲಗಿ, ಮಹಾರಾಷ್ಟ್ರದ ಕಂದಾಯ ಸಚಿವ ರಾಧಾಕೃಷ್ಣ ವಿಖೆಪಾಟೀಲ, ಸೊಲ್ಲಾಪುರ ಸಂಸದ ಜಯಸಿದ್ದೇಶ್ವರ ಸ್ವಾಮೀಜಿ ಹಾಗೂ ಗೋವಾ, ಮಹಾರಾಷ್ಟ್ರದ ಶಾಸಕರು ಇತರರಿದ್ದರು.

    ಉತ್ತಮ ಕೆಲಸಕ್ಕೆ ಪಕ್ಷ, ಜಾತಿ, ಭಾಷೆ ಅಡ್ಡಿಯಾಗದು: ಕೆಎಲ್​ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಮಾತನಾಡಿ, ಈ ದಿನ ಜೀವನದ ಮಹತ್ವದ ಕ್ಷಣ. ವಯಸ್ಸು 75 ಆಗಿದ್ದರೂ ಮನಸ್ಸಿನಿಂದ 57ರಂತೆ ಇದ್ದೇನೆ. ನನ್ನ ಸಾಧನೆ, ಬೆಳವಣಿಗೆ ಹಿಂದೆ ತಂದೆ-ತಾಯಿ, ಸಹೋದರ ಸೇರಿ ವೀರಶೈವ ಲಿಂಗಾಯತ ಸಮಾಜ ಬೆನ್ನೆಗೆ ನಿಂತು ಸಹಕರಿಸಿದ್ದಾರೆ. ಶಿಕ್ಷಣ ಪ್ರಸಾರಕ್ಕಾಗಿ ಜೀವನ ಮುಡುಪಿಟ್ಟು ಹೋರಾಟ ಮಾಡಿಕೊಂಡು ಬಂದಿದ್ದೇನೆ. ಸಣ್ಣ ವಯಸ್ಸಿನಲ್ಲಿ ತೀರಿಕೊಂಡ ಸಹೋದರರಿಬ್ಬರ ಸಾವಿನ ನೋವು ಆರೋಗ್ಯ ಕ್ಷೇತ್ರವನ್ನು ಇನ್ನಷ್ಟು ಬಲಪಡಿಸುಲು ಕಾರಣವಾಯಿತು ಎಂದರು. ಜಗತ್ತಿನಲ್ಲಿ ಬರುವ ಎಲ್ಲ ಹೊಸತನಗಳು ಮರುದಿನ ಕೆಎಲ್​ಇ ಆಸ್ಪತ್ರೆಯಲ್ಲಿ ನೋಡಬಹುದು. ಇದೆಲ್ಲ ಕೇವಲ ಕೋರೆ ಅವರಿಂದಷ್ಟೇ ಆಗಿದ್ದಲ್ಲ. ಕೆಎಲ್​ಇ ಸಂಸ್ಥೆಯ ಸಮಸ್ತ ಸಿಬ್ಬಂದಿಯಿಂದಾಗಿದೆ. ಉತ್ತಮ ಕೆಲಸ ಮಾಡಿದರೆ ಪಕ್ಷ ಬೇಕಾಗುವುದಿಲ್ಲ. ಜಾತಿ, ಧರ್ಮ ಅಡ್ಡಿ ಆಗುವುದಿಲ್ಲ ಎಂದರು.

    2 ವರ್ಷಗಳಿಂದ ಬೇರೆ ಇದ್ದ ದಂಪತಿ, 2 ದಿನಗಳ ಹಿಂದೆ ಮತ್ತೆ ಬಂದ ಪತಿ: ಪತ್ನಿಗೆ ಚುಚ್ಚಿ ಚುಚ್ಚಿ ಹಲ್ಲೆ!

    ವಿಮಾನದಲ್ಲಿ ನೀಡಿದ್ದ ಆಹಾರದಲ್ಲಿ ಜಿರಳೆ!; ಸೋಷಿಯಲ್ ಮೀಡಿಯಾ ಪೋಸ್ಟ್​ ತೇಜೋವಧೆಯ ಹುನ್ನಾರವೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts