More

    ಬಾಲಿವುಡ್​ನಲ್ಲಿ ಜನರಿಗಿವೆ ಮೂರು ಮುಖಗಳು: ನಟಿ ನರ್ಗಿಸ್ ಫಕ್ರಿ

    ಅಮೆರಿಕಾ ಮೂಲದ ಬಾಲಿವುಡ್ ನಟಿ ನರ್ಗಿಸ್ ಫಕ್ರಿ, 2011ರಲ್ಲಿ ‘ರಾಕ್​ಸ್ಟಾರ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಬಳಿಕ ‘ಮದ್ರಾಸ್ ಕೆಫೆ’, ‘ಮೈ ತೇರಾ ಹೀರೋ’, ‘ಹೌಸ್​ಫುಲ್ 3’, ‘ತೋರಬಾಜ್’ ಸೇರಿದಂತೆ ಹತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಬೇರೆ ನಟಿಯರಿಗೆ ಹೋಲಿಸಿದರೆ ಅವರಿಗೆ ಸಿಕ್ಕ ಅವಕಾಶಗಳು, ನಟಿಸಿದ ಸಿನಿಮಾಗಳು ಕಡಿಮೆಯೇ. ಹಾಗಂತ ಅವರಿಗೆ ತೆರೆಯ ಮೇಲೆ ನಟಿಸಲು ಬರುವುದಿಲ್ಲ ಅಂತಲ್ಲ. ‘ಬದಲಾಗಿ ನಿಜ ಜೀವನದಲ್ಲಿ ನಟಿಸಲಿಲ್ಲ ಅಂತ ಅವಕಾಶಗಳು ಸಿಗಲಿಲ್ಲ’ ಎಂದು ನರ್ಗಿಸ್ ಹೇಳಿಕೊಂಡಿದ್ದಾರೆ.

    ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಮಾತನಾಡಿದ ನರ್ಗಿಸ್, ‘ಹೊಸ ಸಂಪ್ರದಾಯಗಳಿಗೆ, ಹೊಸ ಜಾಗ, ಜನರ ನಡುವೆ ಹೇಗೆ ಬೆರೆಯುವುದು ಹಾಗೂ ಪಳಗುವುದು ಅಂತ ನನಗೆ ಗೊತ್ತಿರಲಿಲ್ಲ. ನನ್ನ ನೇರ ಮಾತುಗಳು ನನಗೆ ಮುಳುವಾಗಲಿವೆ ಎಂದು ಹಿಂದೆಯೇ ಸಾಕಷ್ಟು ಮಂದಿ ಹೇಳಿದ್ದರು. ನನಗಿಷ್ಟವಿಲ್ಲದಿದ್ದರೂ ಕೆಲವರ ಜತೆ ಮಾತನಾಡಬೇಕು ಅಂದರೆ ನನ್ನಿಂದ ಅದು ಸಾಧ್ಯವಿಲ್ಲ. ಏನೂ ಗೊತ್ತಿಲ್ಲದವಳಂತೆ ವರ್ತಿಸುವುದು ನನಗೆ ಬರುವುದಿಲ್ಲ. ಬಾಲಿವುಡ್​ನಲ್ಲಿ ಜನರಿಗೆ ಮೂರು ಮುಖಗಳಿವೆ. ಒಂದು ವ್ಯವಹಾರಕ್ಕೆ, ಮತ್ತೊಂದು ಸೃಜನಶೀಲ ಮುಖ, ಇನ್ನೊಂದು ವೈಯಕ್ತಿಕ’ ಎಂದು ಹೇಳಿಕೊಂಡಿದ್ದಾರೆ.

    ಅಲ್ಲದೇ ಎಂಟು ವರ್ಷಗಳ ಕಾಲ ಹಗಲು ರಾತ್ರಿಯೆನ್ನದಂತೆ ಆರೋಗ್ಯ, ಕುಟುಂಬದತ್ತ ಗಮನ ಹರಿಸದೇ ಕೆಲಸ ಮಾಡಿದ ಕಾರಣ ನರ್ಗಿಸ್​ಗೆ ಆರೋಗ್ಯ ಸಮಸ್ಯೆಗಳು ಎದುರಾದವಂತೆ. ‘ಆಗ ನಾನು ಖಿನ್ನತೆಗೆ ಒಳಗಾಗಿದ್ದೆ. ನಾನು ಬದುಕುತ್ತಿದ್ದ ರೀತಿ ನನಗೇ ಖುಷಿ ಕೊಡುತ್ತಿರಲಿಲ್ಲ. ಆಗ ನನಗೆ ನಾನೇ ಯಾಕೆ ಹೀಗೆ ಎಂದು ಪ್ರಶ್ನಿಸಿಕೊಂಡೆ. ನಂತರ ಎರಡು ವರ್ಷಗಳ ಬ್ರೇಕ್ ಪಡೆದು ಅಮೆರಿಕಾದಲ್ಲಿ ವಿಪಾಸನಾ ಧ್ಯಾನಕ್ಕೆ ಸೇರಿಕೊಂಡೆ’ ಎಂದು ಹೇಳಿಕೊಳ್ಳುತ್ತಾರೆ ನರ್ಗಿಸ್ ಫಕ್ರಿ. ಸದ್ಯ ಅವರು ತೆಲುಗಿನಲ್ಲಿ ಪವನ್ ಕಲ್ಯಾಣ್ ನಾಯಕನಾಗಿರುವ ‘ಹರಿಹರ ವೀರಮಲ್ಲು’ ಚಿತ್ರದಲ್ಲಿ ನಟಿಸುತ್ತಿದ್ದಾರೆ. –ಏಜೆನ್ಸೀಸ್

    2 ವರ್ಷಗಳಿಂದ ಬೇರೆ ಇದ್ದ ದಂಪತಿ, 2 ದಿನಗಳ ಹಿಂದೆ ಮತ್ತೆ ಬಂದ ಪತಿ: ಪತ್ನಿಗೆ ಚುಚ್ಚಿ ಚುಚ್ಚಿ ಹಲ್ಲೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts