More

    ನಿಮ್ಮಿಂದಲೇ ರಷ್ಯಾಗೆ ಗ್ರೀನ್​ ಸಿಗ್ನಲ್​ ಸಿಕ್ಕಿದ್ದು… ನ್ಯಾಟೋ ವಿರುದ್ಧವೇ ತಿರುಗಿಬಿದ್ದ ಯೂಕ್ರೇನ್​ ಅಧ್ಯಕ್ಷ!

    ಕೀಯೆವ್​/ಮಾಸ್ಕೋ: ಯೂಕ್ರೇನ್​ ಅಧ್ಯಕ್ಷ ವೊ0ಲೊಡಿಮಿರ್​ ಝೆಲೆನ್ಸ್ಕಿ ನಾರ್ಥ್​ ಅಟ್ಲಾಂಟಿಕ್ ಟ್ರೀಟಿ ಆರ್ಗನೈಜೆಶನ್​ (ನ್ಯಾಟೋ) ವಿರುದ್ಧವೇ ಹರಿಹಾಯ್ದಿದ್ದಾರೆ. ಯೂಕ್ರೇನ್​ ಮೇಲೆ ಹಾರಾಟ ನಿಷಿದ್ಧ ವಲಯವನ್ನು ಸ್ಥಾಪಿಸಬೇಕೆಂಬ ಮನವಿಯನ್ನು ನ್ಯಾಟೋ ತಿರಸ್ಕರಿಸಿದ್ದಕ್ಕೆ ಝೆಲೆನ್ಸ್ಕಿ ಆಕ್ರೋಶ ಹೊರಹಾಕಿದ್ದಾರೆ.

    ಟೆಲಿವೈಸ್ಡ್​ ಸಂದೇಶ ರವಾನಿಸಿದ ಝೆಲೆನ್ಸ್ಕಿ, ಯೂಕ್ರೇನ್​ನ ನಗರ ಮತ್ತು ಗ್ರಾಮಗಳ ಮೇಲೆ ಇನ್ನಷ್ಟು ಬಾಂಬ್​ ಹಾಕಲು ನ್ಯಾಟೋ ನಿರ್ಧಾರವೂ ರಷ್ಯಾ ಹಸಿರು ನಿಶಾನೆ ನೀಡಿದಂತಾಯಿತು ಎಂದು ಬೇಸರ ಹೊರಹಾಕಿದರು.

    ಇಂದು ನ್ಯಾಟೋ ಶೃಂಗಸಭೆ ಇತ್ತು. ಅದೊಂದು ದುರ್ಬಲ ಸಭೆ, ಗೊಂದಲಮಯ ಸಭೆ ಮತ್ತು ಯುರೋಪಿನ ಸ್ವಾತಂತ್ರ್ಯದ ಹೋರಾಟವನ್ನು ಮೊದಲ ಗುರಿ ಎಂದು ಎಲ್ಲರೂ ಪರಿಗಣಿಸುವುದಿಲ್ಲ ಎಂಬುದು ಸ್ಪಷ್ಟವಾದ ಶೃಂಗಸಭೆಯಾಗಿತ್ತು ಎಂದು ಝೆಲೆನ್ಸ್ಕಿ ಅಸಮಾಧಾನ ಹೊರಹಾಕಿದರು.

    ಯೂಕ್ರೇನ್​ ಮೇಲಿನ ಹಾರಾಟ ನಿಷಿದ್ಧ ವಲಯ ಸ್ಥಾಪಿಸಬೇಕೆಂಬ ನಮ್ಮ ಮನವಿಯನ್ನು ತಿರಸ್ಕರಿಸುವ ಮೂಲಕ ಯೂಕ್ರೇನ್​ನ ನಗರಗಳು ಮತ್ತು ಗ್ರಾಮಗಳ ಮೇಲೆ ರಷ್ಯಾ ಮತ್ತಷ್ಟು ಬಾಂಬ್​ ಸ್ಫೋಟ ಮಾಡಲು ನ್ಯಾಟೋ ಮೈತ್ರಿಕೂಟದ ನಾಯಕರು ಹಸಿರು ನಿಶಾನೆ ತೋರಿದ್ದಾರೆ. ಇದಕ್ಕೂ ಮೊದಲು ಫೆ. 24 ರಂದು ರಷ್ಯಾ ಭೂಮಿ, ಸಮುದ್ರ ಮತ್ತು ವಾಯುಮಾರ್ಗದ ಮೂಲಕ ದೇಶವನ್ನು ಆಕ್ರಮಿಸಿದ ನಂತರ ಝೆಲೆನ್ಸ್ಕಿ ಅವರು ಯೂಕ್ರೇನ್ ಮೇಲೆ ಹಾರಾಟ ನಿಷೇಧ ವಲಯವನ್ನು ಸ್ಥಾಪಿಸಲು ನ್ಯಾಟೋಗೆ ಮನವಿ ಮಾಡಿದ್ದರು. ಆದರೆ, ಅಮೆರಿಕ ನೇತೃತ್ವದ ನ್ಯಾಟೋ ಮೈತ್ರಿಕೂಟ ಯೂಕ್ರೇನ್​ ಮನವಿಯನ್ನು ತಿರಸ್ಕರಿಸಿತು.

    ನಮ್ಮದು ರಕ್ಷಣಾತ್ಮಕ ಮೈತ್ರಿ. ನಾವು ಯಾವುದೇ ಸಂಘರ್ಷವನ್ನು ಬಯಸುವುದಿಲ್ಲ. ಆದರೆ ನಮಗೆ ಸಂಘರ್ಷ ಬಂದರೆ ನಾವು ಸಿದ್ಧರಿದ್ದೇವೆ ಎಂದು ಅವರು ಹೇಳಿದರು. ಹಿಂದಿನ ಸೋವಿಯತ್ ಗಣರಾಜ್ಯವಾದ ಉಕ್ರೇನ್, ಈ ಹಿಂದೆ ಯುರೋಪಿಯನ್ ಯೂನಿಯನ್ ಮತ್ತು ನ್ಯಾಟೋಗೆ ಸೇರುವ ಇಚ್ಛೆಯನ್ನು ವ್ಯಕ್ತಪಡಿಸಿದೆ. ಆದರೆ, ಇದು ರಷ್ಯಾ ಹೇಳುವ ಕ್ರಮಗಳು ಮತ್ತು ಅದರ ಭದ್ರತೆ ಹಾಗೂ ಪ್ರಭಾವಕ್ಕೆ ಧಕ್ಕೆ ತರುತ್ತವೆ.

    ಅಂದಹಾಗೆ ಹಾರಟ ನಿಷಿದ್ಧ ವಲಯ ಎನ್ನುವುದು ಮಿಲಿಟರಿ ಅಧಿಕಾರದಿಂದ ಸ್ಥಾಪಿಸಲ್ಪಟ್ಟ ಪ್ರದೇಶವಾಗಿದ್ದು, ಅದರ ಮೇಲೆ ಕೆಲವು ವಿಮಾನಗಳನ್ನು ಹಾರಲು ಅನುಮತಿಸಲಾಗುವುದಿಲ್ಲ. ಯುದ್ಧದಂತಹ ಸನ್ನಿವೇಶಗಳಲ್ಲಿ ಶತ್ರುಗಳಿಂದ ರಕ್ಷಿಸಿಕೊಳ್ಳಲು ಇದನ್ನು ಹೇರಲಾಗುತ್ತದೆ. (ಏಜೆನ್ಸೀಸ್​)

    ರಾಧೆ ಶ್ಯಾಮ್​ ಚಿತ್ರದಲ್ಲಿ ನಟಿ ಪೂಜಾ ಹೆಗ್ಡೆ ಜತೆ ಕಿಸ್ಸಿಂಗ್​ ಸೀನ್​: ಅಚ್ಚರಿಯ ಹೇಳಿಕೆ ನೀಡಿದ ನಟ ಪ್ರಭಾಸ್​!

    ಯುದ್ಧ ಬೇಡ ಎಂದು ಸಾಮೂಹಿಕ ರಾಜೀನಾಮೆ ನೀಡಿದ ರಷ್ಯಾದ ಟಿವಿ ರೇನ್​ ಚಾನೆಲ್​ ಸಿಬ್ಬಂದಿ..!

    ಮಗನನ್ನು ಕರೆತರಲು 1400 ಬೈಕ್​ ಓಡಿಸಿದ್ದ ಅಮ್ಮ ಮತ್ತೆ ಸುದ್ದಿಯಲ್ಲಿ! ಆಗ ಕರೊನಾ, ಈಗ ಯೂಕ್ರೇನ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts