More

    ಅಕ್ರಮ ಮಣ್ಣು ಗಣಿಗಾರಿಕೆಗೆ ಇಬ್ಬರು ಅಪ್ರಾಪ್ತರು ಬಲಿ: ಕ್ವಾರಿಯಲ್ಲಿ ಈಜಲು ಹೋಗಿ ನೀರುಪಾಲು

    ಗದಗ: ಅಕ್ರಮ ಮಣ್ಣು ಗಣಿಗಾರಿಕೆಗೆ ಇಬ್ಬರು ಅಪ್ರಾಪ್ತರು ಬಲಿಯಾಗಿರುವ ಘಟನೆ ಗದಗ ತಾಲೂಕಿನ ಶ್ಯಾಗೋಟಿ ಗ್ರಾಮದಲ್ಲಿ ನಡೆದಿದೆ.

    ಮಣ್ಣು ತೆಗೆದಿದ್ದ ಬೃಹತ್ ಕ್ವಾರಿಯಲ್ಲಿ ಅಪ್ರಾಪ್ತರು ಈಜಲು ಹೋಗಿದ್ದರು. ಈ ವೇಳೆ ಇಬ್ಬರು ನೀರುಪಾಲಾಗಿದ್ದು, ಕಳೆದ 20 ಗಂಟೆಯಿಂದ ಎಷ್ಟೇ ಹುಡುಕಾಟ ನಡೆಸುತ್ತಿದ್ದರೂ ಇಬ್ಬರ ಶವ ಪತ್ತೆಯಾಗಿಲ್ಲ.

    ಮೃತರನ್ನು ಬಸವರಾಜ್ (17) ಮತ್ತು ಈರಣ್ಣ ಎಂದು ಗರುತಿಸಲಾಗಿದೆ. ಅಗ್ನಿಶಾಮಕ ಸಿಬ್ಬಂದಿ ಕಾಟಾಚಾರಕ್ಕೆ ಬೋಟ್ ಮೇಲಿಂದಲೇ ಶವ ಹುಡುಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೊಂಡದಲ್ಲಿ ಇಳಿದು ಶವಶೋಧಕ್ಕೆ ಸಿಬ್ಬಂದಿ ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

    ಕೆಟ್ಟು ಹೋದ ಬೋಟ್​ನಿಂದ ಕಾಟಾಚಾರಕ್ಕೆ ಶವ ಹುಡುಕಾಡುತ್ತಿದ್ದಾರೆ ಎಂದು ಅಗ್ನಿಶಾಮಕ ಸಿಬ್ಬಂದಿಯ ಬೇಜವಾಬ್ದಾರಿತನಕ್ಕೆ ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ಮಕ್ಕಳನ್ನು ಕಳೆದುಕೊಂಡ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

    ಅಕ್ರಮ ಮಣ್ಣು ಗಣಿಗಾರಿಕೆಗೆ ಕಡಿವಾಣ ಹಾಕದಿದ್ದಕ್ಕೆ ದುರಂತ ಸಂಭವಿಸಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. (ದಿಗ್ವಿಜಯ ನ್ಯೂಸ್​)

    ಬೈಕ್​ ಸವಾರನ ಮೇಲೆ ಧುತ್ತನೇ ಬಂದೆರಗಿ ಪ್ರಾಣ ಹೊತ್ತೊಯ್ದ ಜವರಾಯ: ಗುಂಡಿಗೆ ಗಟ್ಟಿ ಇದ್ರಷ್ಟೇ ಈ ವಿಡಿಯೋ ನೋಡಿ

    ಎಚ್​ಡಿಕೆಗೆ ಟಕ್ಕರ್​ ಕೊಟ್ಟ ಸಿಪಿವೈ: ಕೊನೆಗೂ ತಹಸೀಲ್ದಾರ್​ ಎತ್ತಂಗಡಿ, ಕೊನೇ ಕ್ಷಣದವರೆಗೂ ಗೌಪ್ಯವಾಗಿದ್ದ ಆದೇಶ

    ಬೆತ್ತಲೆಯಾಗಿ ಕಾಣಿಸಿಕೊಂಡರಾ ಆಂಡ್ರಿಯಾ ಜರೆಮಿಯ? ಟೀಸರ್​ ಬಿಡುಗಡೆ ಬೆನ್ನಲ್ಲೇ ಬಿಸಿ ಬಿಸಿ ಚರ್ಚೆ ಶುರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts