More

    ಹಂದಿ ಹೃದಯ ಕಸಿಗೆ ಒಳಗಾಗಿದ್ದ ಮೊದಲ ವ್ಯಕ್ತಿ ಆಪರೇಷನ್​ ನಡೆದ 2 ತಿಂಗಳ ಬಳಿಕ ಸಾವು!

    ವಾಷಿಂಗ್ಟನ್​: ಜಗತ್ತಿನಲ್ಲೇ ಮೊದಲ ಬಾರಿಗೆ ತಳೀಯವಾಗಿ ಮಾರ್ಪಡಿಸಿದ ಹಂದಿ ಹೃದಯ ಕಸಿಗೆ ಒಳಗಾಗಿದ್ದ 57 ವರ್ಷದ ವ್ಯಕ್ತಿ, ಐತಿಹಾಸಿಕ ಶಸ್ತ್ರಚಿಕಿತ್ಸೆ ನಡೆದ ಎರಡು ತಿಂಗಳ ಬಳಿಕ ಮೃತಪಟ್ಟಿದ್ದಾರೆ.

    ಈ ಐತಿಹಾಸಿಕ ಶಸ್ತ್ರಚಿಕಿತ್ಸೆಯಿಂದ ಅಡ್ಡ-ಜಾತಿಯ ಅಂಗಾಂಗ ದಾನದ ಪ್ರಗತಿಯಾಗಿ ಮುಂದಿನ ದಿನಗಳಲ್ಲಿ ಮಾನವ ಅಂಗಗಳ ದೀರ್ಘಕಾಲದ ಕೊರತೆಯನ್ನು ಪರಿಹರಿಸಬಹುದು ಎಂಬ ಭರವಸೆಯನ್ನು ಹುಟ್ಟುಹಾಕಿತ್ತು. ಆದರೆ, ಇದೀಗ ಆಪರೇಷನ್​ಗೆ ಒಳಗಾದ ವ್ಯಕ್ತಿ ಮೃತಪಟ್ಟಿರುವುದು ಭರವಸೆಯು ಮಂಕಾದಂತಾಗಿದೆ.

    ಡೇವಿಡ್ ಬೆನೆಟ್ (57) ಎಂಬ ರೋಗಿಯು ಕಳೆದ ಜನವರಿ 7ರಂದು ಹಂದಿ ಹೃದಯ ಕಸಿಗೆ ಒಳಗಾಗಿದ್ದರು. ಇವರು ಮಾರ್ಚ್​ 8 ರಂದು ಮೃತಪಟ್ಟಿದ್ದಾರೆಂದು ಈ ಹಿಂದೆ ಶಸ್ತ್ರಚಿಕಿತ್ಸೆ ನಡೆಸಿದ್ದ ಮೇರಿಲ್ಯಾಂಡ್​ ಮೆಡಿಕಲ್​ ಸ್ಕೂಲ್​ ಯೂನಿವರ್ಸಿಟಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

    ಕೆಲವು ದಿನಗಳ ಹಿಂದೆ ಬೆನೆಟ್​ ಅವರ ಆರೋಗ್ಯ ತೀವ್ರ ಹದಗೆಟ್ಟಿತ್ತು. ಆ ಬಳಿಕವಷ್ಟೇ ಹಂದಿ ಹೃದಯ ಅಳವಡಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು. ಶಸ್ತ್ರಚಿಕಿತ್ಸೆ ನಡೆದ ಬಳಿಕ ಹೊಸ ಅಂಗ ಯಾವ ರೀತಿ ಕಾರ್ಯನಿರ್ವಹಿಸಲಿದೆ ಎಂದು ತಿಳಿದುಕೊಳ್ಳಲು ಹತ್ತಿರದಿಂದ ರೋಗಿಯ ಮೇಲ್ವಿಚಾರಣೆ ಕೂಡ ಮಾಡಲಾಗುತ್ತಿತ್ತು. ಸರ್ಜರಿ ಬಳಿಕ ಹಲವು ದಿನಗಳವರೆಗೆ ಬೆನೆಟ್​ ಆರೋಗ್ಯವಾಗಿಯೇ ಇದ್ದರು. ಯಾವುದೇ ರೋಗ ಲಕ್ಷಣಗಳು ಆರಂಭದಲ್ಲಿ ಕಂಡುಬಂದಿರಲಿಲ್ಲ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ತಿಳಿಸಿದೆ.

    ಬೆನೆಟ್​ ಅವರು ತಾವೊಬ್ಬ ಧೈರ್ಯಶಾಲಿ ಮತ್ತು ಉದಾತ್ತ ರೋಗಿಯೆಂದು ಸಾಬೀತುಪಡಿಸಿದರು. ಬಹಳ ಧೈರ್ಯದಿಂದಲೇ ಈ ಶಸ್ತ್ರಚಿಕಿತ್ಸೆಗೆ ಒಪ್ಪಿದ ಬೆನೆಟ್​ ಸಾವಿನ ಕೊನೆಯವರೆಗೂ ಹೋರಾಡಿದರು. ನಾವು ಅವರ ಕುಟುಂಬಕ್ಕೆ ನಮ್ಮ ಪ್ರಾಮಾಣಿಕ ಸಂತಾಪವನ್ನು ವ್ಯಕ್ತಪಡಿಸುತ್ತೇವೆ ಎಂದು ಕಾರ್ಯವಿಧಾನವನ್ನು ಮುನ್ನಡೆಸಿದ ಶಸ್ತ್ರಚಿಕಿತ್ಸಕ ಬಾರ್ಟ್ಲಿ ಗ್ರಿಫಿತ್ ಹೇಳಿದರು.

    ಮೇರಿಲ್ಯಾಂಡ್​ ನಿವಾಸಿಯಾಗಿದ್ದ ಬೆನೆಲ್​ ಹೃದಯ-ಶ್ವಾಸಕೋಶದ ಬೈಪಾಸ್ ಮೆಷಿನ್​ ಸಮಸ್ಯೆಯಿಂದ ಕಳೆದ ಹಲವು ತಿಂಗಳುಗಳಿಂದ ಹಾಸಿಗೆ ಹಿಡಿದಿದ್ದರು. ಈ ಕಸಿಯನ್ನು ಮಾಡಿ. ನಾನು ಬದುಕಲು ಬಯಸಿದ್ದೇನೆ. ಇದೇ ನನ್ನ ಕೊನೆಯ ಅವಕಾಶ ಎಂದು ಬೆನೆಟ್​ ಸರ್ಜರಿಗೂ ಮುನ್ನ ದಿನ ಕೊನೆಯ ಹೇಳಿಕೆ ನೀಡಿದ್ದರು. ನಾನು ಚೇತರಿಸಿಕೊಂಡ ನಂತರ ಹಾಸಿಗೆಯಿಂದ ಹೊರಬರಲು ಎದುರು ನೋಡುತ್ತಿದ್ದೇನೆ ಎಂದಿದ್ದರು. ಆದರೆ, ಈಗ ಇಹಲೋಕವನ್ನೇ ತ್ಯಜಿಸಿದ್ದಾರೆ. (ಏಜೆನ್ಸೀಸ್​)

    ಪರಿವರ್ತನೆಗೆ ಈ ವಿಡಿಯೋ ನೋಡಿ ಎಂದು ಒಳ ಉಡುಪುಗಳನ್ನು ಪ್ರದರ್ಶಿಸಿದ ನಟಿ ಯಶಿಕಾ! ವಿಡಿಯೋ ವೈರಲ್​​

    ಕೇಜ್ರಿವಾಲ್​ ಪ್ರಧಾನಿ ಆಗಲಿದ್ದಾರೆ: ಪಂಜಾಬ್​ನಲ್ಲಿ ಎಎಪಿ ಭರ್ಜರಿ ಮುನ್ನಡೆ ಬೆನ್ನಲ್ಲೇ ಕೇಳಿಬಂತು ಭವಿಷ್ಯ

    ಮತಎಣಿಕೆಗೂ ಮುನ್ನ ರಾಜ್ಯಪಾಲರ ಬಳಿ ಸಮಯ ಕೇಳಿ ಇದೀಗ ಮುಖಭಂಗ ಅನುಭವಿಸಿದ ಕಾಂಗ್ರೆಸ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts