More

    ಮತಎಣಿಕೆಗೂ ಮುನ್ನ ರಾಜ್ಯಪಾಲರ ಬಳಿ ಸಮಯ ಕೇಳಿ ಇದೀಗ ಮುಖಭಂಗ ಅನುಭವಿಸಿದ ಕಾಂಗ್ರೆಸ್​!

    ಪಣಜಿ: ಮತಎಣಿಕೆಗೂ ಮುನ್ನ ಗೆದ್ದೆ ಗೆಲ್ಲುತ್ತೇವೆಂಬ ಅತಿಯಾದ ಆತ್ಮ ವಿಶ್ವಾಸ ಹೊಂದಿದ್ದ ಗೋವಾ ಕಾಂಗ್ರೆಸ್​ಗೆ ಇದೀಗ ಭಾರೀ ನಿರಾಸೆ ಆಗಿದೆ. ಗೆಲ್ಲುವ ವಿಶ್ವಾಸದಲ್ಲೇ ಮಧ್ಯಾಹ್ನದ ನಂತರ ರಾಜ್ಯಪಾಲರ ಭೇಟಿಗೆ ಕಾಂಗ್ರೆಸ್​ ಸಮಯ ಕೇಳಿತ್ತು. ಆದರೀಗ ಕಾಂಗ್ರೆಸ್​ ಲೆಕ್ಕಾಚಾರಗಳೆಲ್ಲ ಉಲ್ಟಾಪಲ್ಟಾ ಆಗಿದೆ.

    ಕಾಂಗ್ರೆಸ್​ ಮೂಲಗಳು ಹೇಳುವ ಪ್ರಕಾರ ರಾಜ್ಯಪಾಲ ಪಿ.ಎಸ್​. ಶ್ರೀಧರನ್ ಪಿಳ್ಳೈ​ ಅವರ ಭೇಟಿಗೆ ಮಧ್ಯಾಹ್ನ ಮೂರು ಗಂಟೆಗೆ ಕಾಂಗ್ರೆಸ್​ ಸಮಯ ಕೇಳಿತ್ತು. ಆದರೆ, ಈವರೆಗೂ ಯಾವುದೇ ಸಮಯ ನೀಡಿಲ್ಲ ಎಂದು ತಿಳಿದುಬಂದಿದೆ. ನಾವು ಬಹುಮತದ ವಿಶ್ವಾಸ ಹೊಂದಿದ್ದೇವೆ ಮತ್ತು 2017 ರ ಚುನಾವಣೆಯಲ್ಲಿ ಮಾಡಿದ ತಪ್ಪುಗಳಿಂದ ಪಾಠ ಕಲಿಯಲು ಪಕ್ಷವು ಮುಂಚಿತವಾಗಿ ರಾಜ್ಯಪಾಲರ ಸಮಯ ಕೇಳಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿತ್ತು.

    2017ರಲ್ಲಿ ಕಾಂಗ್ರೆಸ್​ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಮೈತ್ರಿ ಮಾಡಿಕೊಳ್ಳಲು ವಿಳಂಬವಾದ ಕಾರಣ ಸರ್ಕಾರ ರಚಿಸುವಲ್ಲಿ ವಿಫಲವಾಯಿತು. ಬಿಜೆಪಿ ಕಡಿಮೆ ಸ್ಥಾನಗಳಲ್ಲಿ ಜಯ ಸಾಧಿಸಿದರೂ ಸಣ್ಣ ಎಂಜಿಪಿ ಪಕ್ಷ ಮತ್ತು ಪಕ್ಷೇತರ ಅಭ್ಯರ್ಥಿಗಳ ನೆರವಿನಿಂದ ಅಧಿಕಾರದ ಚುಕ್ಕಾಣಿ ಹಿಡಿದಿತ್ತು.

    ಆದರೆ, ಈ ಬಾರಿ ಆ ತಪ್ಪುಗಳು ಮತ್ತೆ ಮರುಕಳಿಸಬಾರದೆಂಬ ಉದ್ದೇಶದಿಂದ ಈ ಬಾರಿ, ಹೆಚ್ಚು ಕ್ರಿಯಾಶೀಲವಾಗಿದ್ದ ಕಾಂಗ್ರೆಸ್ ಪಿ ಚಿದಂಬರಂ ಮತ್ತು ಡಿಕೆ ಶಿವಕುಮಾರ್ ಅವರನ್ನು ಗೋವಾ ರಾಜ್ಯಕ್ಕೆ ಕಳುಹಿಸಿತ್ತು. ತಮಗೆ ಸರಳ ಬಹುಮತ ಸಿಗಲಿದೆ ಎಂಬ ಭರವಸೆ ಹೊಂದಿದ್ದ ಕಾಂಗ್ರೆಸ್​ಗೆ ಇದೀಗ ಭಾರೀ ಮುಖಭಂಗವಾಗಿದೆ.

    ಒಟ್ಟು 40 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ಗೋವಾದಲ್ಲಿ ಗದ್ದುಗೆ ಏರಲು ಮ್ಯಾಜಿಕ್​ ನಂಬರ್​ 21 ಸ್ಥಾನಗಳು ಬೇಕಿದೆ. ಸದ್ಯ ಬಿಜೆಪಿ ಮ್ಯಾಜಿಕ್​ ನಂಬರ್​ ದಾಟಿದ್ದು, ಅಧಿಕಾರದ ಗದ್ದುಗೆ ಏರುವತ್ತ ದಾಪುಗಾಲು ಇಟ್ಟಿದೆ. (ಏಜೆನ್ಸೀಸ್​)

    ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ..

    ಯಾರಿಗೆ ಪಂಚರಾಜ್ಯ?; ತಜ್ಞರ ವಿಶ್ಲೇಷಣೆ ಒಳಗೊಂಡ ಫಲಿತಾಂಶದ ಕ್ಷಣ ಕ್ಷಣ ಮಾಹಿತಿಯ ನೇರಪ್ರಸಾರ ಇಲ್ಲಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts