More

    ಮದ್ವೆಯಾದ ಎರಡೇ ವರ್ಷದಲ್ಲಿ ಗಂಡ ನಾಪತ್ತೆ: ಮತ್ತೊಂದು ಮದ್ವೆಯಾದವಳಿಗೆ 12 ವರ್ಷದ ಬಳಿಕ ಶಾಕ್​!

    ಪಟನಾ: ಬರೋಬ್ಬರಿ 12 ವರ್ಷಗಳ ಹಿಂದೆ ಕಾಣೆಯಾಗಿದ್ದ ವ್ಯಕ್ತಿಗಾಗಿ ಆತನ ಕುಟುಂಬ ಸಾಕಷ್ಟು ಹುಡುಕಾಡಿತ್ತು. ಎಷ್ಟೇ ಪ್ರಯತ್ನ ಪಟ್ಟರು ಆತನ ಸುಳಿವು ಸಿಗದಿದ್ದಾಗ, ಒಂದು ನಿರ್ಧಾರಕ್ಕೆ ಬಂದ ಕುಟುಂಬ, ಆತ ಮೃತಪಟ್ಟಿದ್ದಾನೆಂದು ಭಾವಿಸಿ ಅಂತಿಮ ವಿಧಿ ವಿಧಾನಗಳನ್ನು ಕೂಡ ನೆರವೇರಿಸಿದ್ದರು. ಆದರೆ, ಅದೇ ವ್ಯಕ್ತಿ ಇದೀಗ ಪಾಕಿಸ್ತಾನ ಜೈಲೊಂದರಲ್ಲಿ ಪತ್ತೆಯಾಗಿದ್ದಾನೆ.

    12 ವರ್ಷಗಳ ಬಳಿಕ ಪತ್ತೆಯಾಗಿರುವ ವ್ಯಕ್ತಿಯನ್ನು ಬಿಹಾರದ ಬುಕ್ಸರ್​ ಜಿಲ್ಲೆಯ ನಿವಾಸಿ ಛವಿ ಕುಮಾರ್ ಎಂದು ಗುರುತಿಸಲಾಗಿದೆ​. ಈತ ಮಾನಸಿಕವಾಗಿ ಅಸ್ವಸ್ಥ ಎಂದು ಹೇಳಲಾಗಿದೆ. ಛವಿ ಬಗ್ಗೆ ಬಗ್ಗೆ ಹೇಳಿಕೆ ಪಡೆದುಕೊಳ್ಳಲು ಪಾಕ್​ ಜೈಲು ಅಧಿಕಾರಿಗಳು ನಿರಂತರವಾಗಿ ಭಾರತೀಯ ವಿದೇಶಾಂಗ ಸಚಿವಾಲಯವನ್ನು ಸಂಪರ್ಕಿಸುತ್ತಿದ್ದರು. ಬಳಿಕ ಛವಿಯ ಗುರುತನ್ನು ಹೋಲಿಸಿ ನೋಡುವಂತೆ ವಿದೇಶಾಂಗ ಸಚಿವಾಲಯ ಬಿಹಾರ ಪೊಲೀಸ್​ ವಿಶೇಷ ವಿಭಾಗಕ್ಕೆ ಪತ್ರ ಬರೆದಿತ್ತು. ಬಳಿಕ ಆ ಮಾಹಿತಿ ಬುಕ್ಸರ್​ ಜಿಲ್ಲೆ ಪೊಲೀಸ್​ ವರಿಷ್ಠಾಧಿಕಾರಿ ಕಚೇರಿಗೆ ತಲುಪಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ.

    ಛವಿ ಬಗ್ಗೆ ಮಾಹಿತಿ ನೀಡುವಂತೆ ಜಿಲ್ಲಾ ಪೊಲೀಸರನ್ನು ಕೇಳಿದಾಗ ಆತ ಬುಕ್ಸರ್​ ಜಿಲ್ಲೆಯ ಮುಫಾಸ್ಸಿಲ್​ ಪೊಲೀಸ್​ ಠಾಣಾನ ವ್ಯಾಪ್ತಿಯಲ್ಲಿ ಬರುವ ಖಿಲಾಫತ್​ಪುರ್​ ಮೂಲದವನು ಎಂಬ ಮಾಹಿತಿ ದೊರಕಿದೆ. ಬಳಿಕ ಗ್ರಾಮಕ್ಕೆ ತೆರಳಿ ವಿಚಾರಿಸಿದಾಗ 12 ವರ್ಷಗಳ ಹಿಂದೆ ಗ್ರಾಮದಲ್ಲಿ ಓರ್ವ ನಾಪತ್ತೆಯಾಗಿದ್ದ ಎಂಬ ಸುದ್ದಿಯನ್ನು ಗ್ರಾಮಸ್ಥರು ತಿಳಿಸಿದ್ದಾರೆ. ಇದಾದ ಬಳಿಕ ಛವಿ ಮನೆಗೆ ಹೋದ ಅಧಿಕಾರಿಗಳು ಆತನ ತಾಯಿಗೆ ಛವಿ ಫೋಟೋವನ್ನು ತೋರಿಸಿದಾಗ ಆತನ ಗುರುತು ಹಿಡಿದಿದ್ದಾರೆ.

    ಛವಿ ಓರ್ವ ಮಾನಸಿಕ ಅಸ್ವಸ್ಥ. ಮದುವೆಯಾದ ಎರಡೇ ವರ್ಷದಲ್ಲಿ ಅಂದರೆ, 2009ರಲ್ಲಿ ನಾಪತ್ತೆಯಾಗಿದ್ದ. ಆಗ ಆತನಿಗೆ 23 ವರ್ಷ ವಯಸ್ಸಾಗಿತ್ತು. ಆತ ಮರಳಿ ಬಾರದಿದ್ದನ್ನು ನೋಡಿ ಆತ ಮೃತಪಟ್ಟಿರಬಹುದೆಂದು ತಿಳಿದು ಅಂತಿಮ ವಿಧಿ ವಿಧಾನ ನೆರವೇರಿಸಿದ್ದೆವು ಎಂದಿರುವ ಛವಿ ತಾಯಿ, ತನ್ನ ಮಗನನ್ನು ಮರಳಿ ಮನೆಗೆ ಕರೆಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

    ಇನ್ನು ಗಂಡ ಮರಳಿ ಬಾರದಿರುವುದನ್ನು ನೋಡಿ ಛವಿ ಪತ್ನಿ ಮತ್ತೊಂದು ಮದುವೆಯಾಗಿದ್ದು, ಇದೀಗ ಗಂಡ ಇನ್ನು ಜೀವಂತ ಇದ್ದಾನೆ ಎಂಬುದನ್ನು ಕೇಳಿ ಅಚ್ಚರಿಯ ಜತೆಗೆ ಶಾಕ್​ ಕೂಡ ಆಗಿದೆ. (ಏಜೆನ್ಸೀಸ್​)

    ಮುಂದಿನ ಭಾಗದಲ್ಲಿ ಹೊಸ ಅಧ್ಯಾಯ: ಆನ ಸಿನಿಮಾ ವಿಮರ್ಶೆ

    ರೇಪ್ ವಿವಾದ ಕ್ಷಮೆಯ ಉಪಶಮನ: ದೇಶ ವ್ಯಾಪಿಸಿದ ರಮೇಶ್​ಕುಮಾರ್ ಅತ್ಯಾಚಾರ ಅಪಹಾಸ್ಯ ವೃತ್ತಾಂತ; ಲೋಕಸಭೆಯಲ್ಲೂ ಬಿರುಗಾಳಿ..

    ಪುನೀತ್ ನೆನಪಲ್ಲಿ ಕರುನಾಡ ರತ್ನ; ಭಾನುವಾರ ರಾತ್ರಿ 7.30ಕ್ಕೆ ಕಾರ್ಯಕ್ರಮ ಪ್ರಸಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts