More

    ಮುಂದಿನ ಭಾಗದಲ್ಲಿ ಹೊಸ ಅಧ್ಯಾಯ: ಆನ ಸಿನಿಮಾ ವಿಮರ್ಶೆ

    • ಚಿತ್ರ: ಆನ
    • ನಿರ್ಮಾಣ: ಪೂಜಾ ವಸಂತ್ ಕುಮಾರ್
    • ನಿರ್ದೇಶನ: ಮನೋಜ್ ಪಿ ನಡುಲಮನೆ
    • ತಾರಾಗಣ: ಅದಿತಿ ಪ್ರಭುದೇವ, ಸುನೀಲ್ ಪುರಾಣಿಕ್ ಮುಂತಾದವರು

    | ಚೇತನ್ ನಾಡಿಗೇರ್

    ಜೂನ್ 2020

    ಕರೊನಾದಿಂದ ಇಡೀ ದೇಶವೇ ಲಾಕ್​ಡೌನ್ ಆಗಿದ್ದ ಕಾಲ. ಇಂತಹ ಸಂದರ್ಭದಲ್ಲಿ ಕೆಲಸ ಕಳೆದುಕೊಂಡ ನಾಲ್ವರು, ಜೀವನ ನಡೆಸುವುದಕ್ಕೆ ದರೋಡೆಗೆ ಇಳಿಯುತ್ತಾರೆ. ಒಂಟಿಯಾಗಿ ಓಡಾಡುತ್ತಿರುವವರ ಮೊಬೈಲ್, ಪರ್ಸ್ ಕದ್ದು ಅದರಿಂದ ಜೀವನ ಮಾಡುತ್ತಿರುತ್ತಾರೆ. ಇನ್ನೆಷ್ಟು ದಿನ ಇದೇ ರೀತಿ ಬದುಕುವುದು? ಈ ಪ್ರಶ್ನೆ ಬಂದಾಗ ಅವರೊಂದು ಸ್ಕೆಚ್ ಹಾಕುತ್ತಾರೆ. ಒಬ್ಬ ಗಣಿಧಣಿಯ ಮಗಳನ್ನು ಕಿಡ್ನಾಪ್ ಮಾಡಿ, 10 ಕೋಟಿ ರೂ ಬೇಡಿಕೆ ಇಟ್ಟು, ಅದರಿಂದ ಬರುವ ಹಣವನ್ನು ಹಂಚಿಕೊಂಡು ನೆಮ್ಮದಿಯಾಗಿ ಜೀವನ ಮಾಡುವುದಕ್ಕೆ ತೀರ್ವನಿಸುತ್ತಾರೆ. ಮಾಸ್ಟರ್ ಪ್ಲಾನ್ ಹಾಕಿ, ಆ ಹುಡುಗಿಯನ್ನು ಕಿಡ್ನಾಪ್ ಸಹ ಮಾಡುತ್ತಾರೆ. ನಿಗೂಢವಾದ ಸ್ಥಳದಲ್ಲಿ ಅವಳನ್ನೂ ಬಚ್ಚಿಟ್ಟು, ಅವರೂ ಭೂಗತರಾಗುತ್ತಾರೆ. ಅಲ್ಲಿಂದ ಅವರಿಗೆ ಚಿತ್ರವಿಚಿತ್ರ ಅನುಭವಗಳಾಗುವುದಕ್ಕೆ ಶುರುವಾಗುತ್ತದೆ. ಇಷ್ಟಕ್ಕೂ ಕಿಡ್ನಾಪ್ ಆದ ಯುವತಿ ಯಾರು?

    ‘ಆನ’, ಕನ್ನಡದ ಮೊದಲ ಸೂಪರ್ ಹೀರೋ ಚಿತ್ರ ಎಂದೇ ಪ್ರಚಾರ ಮಾಡಿದ್ದರು ಚಿತ್ರತಂಡದವರು. ಆದರೆ, ಕಥೆ ಕೇಳಿದರೆ ಹಾರರ್ ಶೈಲಿಯಲ್ಲಿದೆ. ಇಷ್ಟಕ್ಕೂ ಚಿತ್ರವು ಹಾರರ್ ಚಿತ್ರವೋ ಅಥವಾ ಸೂಪರ್ ಹೀರೋ ಚಿತ್ರವೋ ಎಂಬ ಪ್ರಶ್ನೆ ಸಹಜ. ಇದಕ್ಕೆ ಉತ್ತರ ಹೇಳುವುದು ಅಷ್ಟು ಸುಲಭವಲ್ಲ. ಏಕೆಂದರೆ, ಚಿತ್ರದಲ್ಲಿ ಈ ಎರಡೂ ಅಂಶಗಳಿವೆ. ಜತೆಗೆ, ಮಾಟ-ಮಂತ್ರವೂ ಇದೆ. ಸಾಲದ್ದಕ್ಕೆ 30ರ ದಶಕದ ಫ್ಲಾಶ್​ಬ್ಯಾಕ್ ಸಹ ಇದೆ. ಇಷ್ಟೆಲ್ಲ ಅಂಶಗಳು ಇರುವುದರಿಂದಲೇ, ಈ ಚಿತ್ರವನ್ನು ಯಾವ ಶೈಲಿಗೆ ಸೇರಿಸಬೇಕು ಎಂದು ಗೊಂದಲವಾಗುತ್ತದೆ.

    ಬಹುಶಃ ‘ಆನ’ ಚಿತ್ರದ ದೊಡ್ಡ ಮೈನಸ್ ಪಾಯಿಂಟ್ ಇದೇ ಎಂದರೆ ತಪ್ಪಿಲ್ಲ. ಚಿತ್ರದ ಮೊದಲಾರ್ಧ ಮುಗಿಯುವುದೇ ಗೊತ್ತಾಗದಷ್ಟು ವೇಗವಾಗಿದೆ ಮೂಡಿಬಂದಿದೆ. ಆ ನಂತರ ಚಿತ್ರ ಜಟಿಲವಾಗುತ್ತಾ ಹೋಗುತ್ತದೆ. ಒಂದು ಹಂತದಲ್ಲಿ ಏನಾಗುತ್ತಿದೆ ಎಂದು ಗೊತ್ತಾಗದಂತೆ ಆಗುತ್ತದೆ. ಅಂತಿಮವಾಗಿ ಸ್ಪಷ್ಟತೆ ಸಿಗುವಷ್ಟರಲ್ಲಿ ಚಿತ್ರವೇ ಮುಗಿದು ಹೋಗಿರುತ್ತದೆ. ಹಾಗೆ ನೋಡಿದರೆ, ಇದೊಂದು ಪ್ರೀಕ್ವೆಲ್ ಎಂದಷ್ಟೇ ಹೇಳಬಹುದು. ಏಕೆಂದರೆ, ಅಸಲಿ ಕಥೆ ಶುರುವಾಗವುದೇನಿದ್ದರೂ ಮುಂದಿನ ಭಾಗದಲ್ಲಷ್ಟೇ. ಹಾಗಂತ ಮುಂದಿನ ಭಾಗ ಬರುವುದು ಯಾವಾಗ? ಗೊತ್ತಿಲ್ಲ. ಈ ಚಿತ್ರವಂತೂ, ‘ಆಕೆ ಬಂದಿದ್ದಾಯ್ತು. ಇಲ್ಲಿಂದ ಅವಳ ಅಧ್ಯಾಯ ಶುರು …’ ಎಂಬ ಸಂದೇಶದೊಂದಿಗೆ ಮುಗಿಯುವುದರಿಂದ, ‘ಆನ 2’ ಬರುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.

    ಅಂದು ನಿಧಿ ಸುಬ್ಬಯ್ಯ, ಇಂದು ಆವಂತಿಕಾ ಶೆಟ್ಟಿ; ಇಬ್ಬರದ್ದೂ ಬಹುತೇಕ ಒಂದೇ ಥರ ಬೇಸರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts