More

    ಅಮಾನ್ಯೀಕರಣ ನೋಟುಗಳನ್ನು ಕಲರ್​ ಜೆರಾಕ್ಸ್​ ಮಾಡಿ ಬದಲಾವಣೆ ಮಾಡ್ತಿದ್ದ ಖತರ್ನಾಕ್​ ಗ್ಯಾಂಗ್​ ಬಂಧನ

    ಬೆಂಗಳೂರು: ನಕಲಿ ನೋಟುಗಳನ್ನು ಜೆರಾಕ್ಸ್​ ಮಾಡಿ ವಂಚನೆ ಮಾಡುತ್ತಿದ್ದ ಖತರ್ನಾಕ್​ ಗ್ಯಾಂಗ್​ ಅನ್ನು ನಗರದ ಗೋವಿಂದಪುರ ಠಾಣೆಯ ಪೊಲೀಸರು ಮಂಗಳವಾರ (ಅ.26) ಬಂಧಿಸಿದ್ದಾರೆ.

    ಮಂಜುನಾಥ್ ಹಾಗೂ ದಯಾನಂದ ಎಂಬುವರು ಸೇರಿ ಒಟ್ಟು ಏಳು ಮಂದಿಯನ್ನು ಬಂಧಿಸಲಾಗಿದ್ದು, 6 ಕೋಟಿ ರೂ. ಮೌಲ್ಯದ ನಕಲಿ ನೋಟುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ನಿಷೇಧಿತ 1000 ಹಾಗೂ 500 ರೂಪಾಯಿಯ ಮುಖ ಬೆಲೆಯ ನೋಟುಗಳನ್ನು ಜೆರಾಕ್ಸ್ ಮಾಡಿ ವಂಚನೆಗೆ ಆರೋಪಿಗಳು ಯತ್ನಿಸುತ್ತಿದ್ದರು. ನಿಷೇಧಿತ ನೋಟುಗಳ ಬದಲಾವಣೆ ಮಾಡುತ್ತೇವೆಂದು ನಂಬಿಸಿ ಮೋಸ ಮಾಡಿದ್ದಾರೆಂದು ತಿಳಿದುಬಂದಿದೆ.

    75 ಲಕ್ಷ ನಿಷೇಧಿತ ಅಸಲಿ ನೋಟುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೊದಲಿಗೆ 35 ಲಕ್ಷ ನಿಷೇಧಿತ ನೋಟುಗಳನ್ನು ತಂದು ಬ್ಲಾಕ್ ಅಂಡ್ ವೈಟ್ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಖಚಿತ ಮಾಹಿತಿ ಆಧರಿಸಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆ ವೇಳೆ 1 ಸಾವಿರ ಹಾಗೂ 500 ಮುಖಬೆಲೆಯ 70 ಲಕ್ಷ ನಿಷೇಧಿತ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ.

    ಬಳಿಕ ಆರೋಪಿಗಳ ವಿಚಾರಣೆ ನಡೆಸಿದಾಗ ಮತ್ತಷ್ಟು ಮಾಹಿತಿ ಬಹಿರಂಗವಾಗಿದೆ. ಕಾಸರಗೋಡಿನಲ್ಲಿ ಬಾಕಿ ಹಣ ಇದೆ ಎಂದು ಆರೋಪಿಗಳ ಹೇಳಿಕೆ ಆಧರಿಸಿ ಕಾಸರಗೋಡಿಗೆ ಹೋದಾಗ ಅಲ್ಲಿ 6 ಕೋಟಿ ಜೆರಾಕ್ಸ್ ನೋಟುಗಳು ಪತ್ತೆಯಾಗಿವೆ. ಅಲ್ಲದೇ 16 ಮೂಟೆ ಪೇಪರ್​ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಒಟ್ಟು 80 ಲಕ್ಷ ರೂ. ಮೌಲ್ಯದ ಅಮಾನ್ಯೀಕರಣಗೊಂಡಿರುವ ಅಸಲಿ ನೋಟುಗಳು ಮತ್ತು 5 ಕೋಟಿ ಮೌಲ್ಯದ ಕಲರ್ ಝರಾಕ್ಸ್ ಮಾಡಿರುವ ನಕಲಿ ನೋಟುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಆರೋಪಿಗಳು ಅಮಾನ್ಯೀಕರಣಗೊಂಡ ನೋಟುಗಳನ್ನು ಇಟ್ಟುಕೊಂಡಿದ್ದರು. “ನಾವು ಹಳೆ ನೋಟು ಕೊಡ್ತಿವಿ ಕಡಿಮೆ ಪರ್ಸಂಟ್ ಲೆಕ್ಕದಲ್ಲಿ ಹೊಸ ನೋಟು ಕೊಡಿ” ಅಂತ ಡೀಲ್ ಮಾಡುತ್ತಿದ್ದರು.

    ಯಾರು ಹಳೇ ನೋಟು ಪಡೆದು, ಹೊಸ ನೋಟು ಕೊಡ್ತಾರೋ ಅಂತವರಿಗೆ ಆರೋಪಿಗಳು ಗಾಳ ಹಾಕುತ್ತಿದ್ದರು. ಈ ವೇಳೆ ಮಾಹಿತಿ ಪಡೆದು ಪೊಲೀಸರು ದಾಳಿ ನಡೆಸಿದ್ದ ಪೊಲೀಸರಿಗೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಹಳೆ ನೋಟು ಕೊಡುವಾಗ, ಅದರ ಜತೆ ಜೆರಾಕ್ಸ್ ಇಟ್ಟು ಆರೋಪಿಗಳು ವಂಚನೆಗೆ ಪ್ಲಾನ್ ಮಾಡುತ್ತಿದ್ದರು. ಈ ಸಂಬಂಧ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ರೇಪ್‌ ಕೇಸ್‌ನಿಂದ ಎಸ್ಕೇಪ್‌ ಅಗಿದ್ದ ಶಾಸಕನ ಪುತ್ರ ಸಿಕ್ಕಿಬಿದ್ದ- ಪೊಲೀಸರ ಜತೆ ನಡೆದಿತ್ತು ಅಪ್ಪನ ರಹಸ್ಯ ಮಾತುಕತೆ!

    ಶಿಕ್ಷಕರು ಮತ್ತು ಪೊಲೀಸರ ನಡುವೆ ಘರ್ಷಣೆ: 23 ಜನರಿಗೆ ಗಾಯ

    ತಂದೆ ಮಾತಿಗೆ ನೊಂದು ರೈಲಿನಡಿ ಕೂತು, ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಬಾಲಕನ ರಕ್ಷಣೆ..!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts