More

    ಮಗುವಿಗಾಗಿ ಮಗಳನ್ನೇ ಮದುವೆಯಾದನಾ 75ರ ವೃದ್ಧ!? ವೈರಲ್​ ಫೋಟೋ ಕುರಿತ ಅಸಲಿ ಕಹಾನಿ ಇಲ್ಲಿದೆ

    ಹೈದರಾಬಾದ್​: ಮಗುವನ್ನು ಪಡೆಯುವ ಸಲುವಾಗಿ 75 ವರ್ಷದ ವೃದ್ಧ ತನ್ನ 15 ವರ್ಷದ ಮಗಳನ್ನೇ ಮದುವೆ ಆಗಿದ್ದಾನೆಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವೃದ್ಧ ಮತ್ತು ಹುಡುಗಿಯ ಫೋಟೋ ಕೂಡ ವೈರಲ್​ ಆಗಿದೆ. ಆದರೆ, ಇದು ಸುಳ್ಳು ಎಂಬುದು ಫ್ಯಾಕ್ಟ್​ಚೆಕ್​ನಿಂದ ಬಯಲಾಗಿದೆ.

    ಅನೇಕ ಫೇಸ್​ಬುಕ್​ ಬಳಕೆದಾರರು ಫೋಟೋವನ್ನು ಶೇರ್​ ಮಾಡಿಕೊಂಡಿದ್ದು, ಅದರಲ್ಲಿ ಬರೆದಿರುವಂತೆ ವೃದ್ಧ 15 ವರ್ಷದ ತನ್ನ ಮಗಳನ್ನು ಮಗು ಪಡೆಯುವುದಕ್ಕಾಗಿ ಮದುವೆ ಆಗಿದ್ದಾನೆ ಎಂದು ಹೇಳಲಾಗಿದೆ. ಇದು ಎಷ್ಟ ಸತ್ಯ ಎಂದು ತಿಳಿಯಲು ನ್ಯೂಸ್​ ಮೀಟರ್​ ವೆಬ್​ಸೈಟ್​ ಫ್ಯಾಕ್ಟ್​ಚೆಕ್​ ನಡೆದಿದೆ. ವೈರಲ್​ ಫೋಟೋವನ್ನು ಗೂಗಲ್​ ರಿವರ್ಸ್​ ಸರ್ಚ್​ ಇಂಜಿನ್​ನಲ್ಲಿ ನೋಡಿದಾಗ ಇದಕ್ಕೆ ಸಂಬಂಧಿಸಿದ ಸುದ್ದಿಯೊಂದು ಇಂಡಿಯಾ ಟುಡೆ ವೆಬ್​ಸೈಟ್​ನಲ್ಲಿ 2017ರ ಆಗಸ್ಟ್​ 18ರಂದು “ಅಪ್ರಾಪ್ತೆಯನ್ನು ಮದುವೆಯಾದ ಶೇಕ್​” ಎಂಬ ಶೀರ್ಷಿಕೆಯೊಂದಿಗೆ ಪ್ರಕಟವಾಗಿದೆ. ಅಮೀನಾ ಪ್ರಕರಣದ 26 ವರ್ಷಗಳ ನಂತರವೂ ಈ ಅಭ್ಯಾಸ ಮುಂದುವರಿದಿದೆ ಎಂದು ಹೇಳಲಾಗಿದೆ.

    ಇದನ್ನೂ ಓದಿರಿ: ಜು.20ಕ್ಕೆ ದ್ವಿತೀಯ ಪಿಯು ಫಲಿತಾಂಶ ಪ್ರಕಟ; ಪರೀಕ್ಷಾ ನೋಂದಣಿ ಸಂಖ್ಯೆ ಇಲ್ಲದೆ ರಿಸಲ್ಟ್ ನೋಡೋದು ಹೇಗೆ?

    ಇಂಡಿಯಾ ಟುಡೇ ವರದಿ ಪ್ರಕಾರ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಮೇನಕಾ ಗಾಂಧಿ ಅವರು ಅಂದು ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದ ಸುಷ್ಮಾ ಸ್ವರಾಜ್​ ಬಳಿ ಒಮನ್​ನಲ್ಲಿರುವ ಹೈದರಾಬಾದ್​ ಹುಡುಗಿಯನ್ನು ರಕ್ಷಿಸುವಂತೆ ಮನವಿ ಮಾಡಿಕೊಂಡಿದ್ದರು. ನಮ್ಮ ಸಮ್ಮತಿ ಇಲ್ಲದೆ ಮಗಳನ್ನು 65 ವರ್ಷದ ಒಮನ್​ ಮೂಲದ ವೃದ್ಧನಿಗೆ ಮದುವೆ ಮಾಡಿಕೊಡಲಾಗಿದೆ ಎಂದು ಪಾಲಕರು ಆರೋಪಿಸಿದ್ದರು.

    ಹೈದರಾಬಾದ್​ನ ನವಾಬ್​ ಸಾಹೇಬ್​ ಕುಂತಾ ಏರಿಯಾದ ಸಯೀದ್​ ಉನ್ನಿಶಾ ಫಲಕುಮಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆಕೆಯ ಮಗಳು ಕರೆ ಮಾಡಿ ಪತಿ ಶೇಕ್​ ಅಹ್ಮದ್​ ದೈಹಿಕವಾಗಿ ಕಿರುಕುಳ ನೀಡುತ್ತಾರೆ. ನನ್ನನ್ನು ವಾಪಸ್ಸು ಭಾರತಕ್ಕೆ ಕರೆಸಿಕೊಳ್ಳಿ ಎಂದು ಮಗಳು ಕೇಳಿಕೊಂಡ ಬಳಿಕ ಆಕೆಯ ತಾಯಿ ಸಯೀದ್​ ಉನ್ನಿಶಾ ದೂರು ನೀಡಿರುತ್ತಾರೆ. ಒಮನ್​ ರಾಜಧಾನಿ ಮಸ್ಕತ್​ನಲ್ಲಿ ಸಂತ್ರಸ್ತೆ ಚಿತ್ರಹಿಂಸೆ ಅನುಭವಿಸುತ್ತಿರುತ್ತಾಳೆ.

    ಸಯೀದ್​ ಅವರ ನಾದಿನಿ ಗೌಸಿಯಾ ಮಗಳನ್ನು ಒಮನ್​ ಪ್ರಜೆಗೆ ರಂಜಾನ್​ ಹಬ್ಬಕ್ಕೂ ಮುನ್ನವೇ ಮದುವೆ ಮಾಡಿಕೊಟ್ಟಿರುತ್ತಾರೆ. ಇದಕ್ಕೆ ಗೌಸಿಯಾ ಗಂಡನ ಸಾಥ್​ ಕೂಡ ಇರುತ್ತದೆ. ಆದರೆ, ಈ ಬಗ್ಗೆ ಸಯೀದ್​ಗೆ ತಿಳಿಸಿರುವುದಿಲ್ಲ. ಮಗಳು ಹೇಳಿದ ಮೇಲೆಯೇ ಆ ಬಗ್ಗೆ ಗೊತ್ತಾಗುತ್ತದೆ. ತನ್ನ ಮಗಳನ್ನು ಆ ವ್ಯಕ್ತಿಯೊಂದಿಗೆ ಮದುವೆಯಾಗಲು ನನಗೆ ಇಷ್ಟವಿರಲಿಲ್ಲ ಎಂದು ಸಯೀದಾ ಹೇಳಿಕೊಂಡಿದ್ದಾದೆ. ಆದರೆ ಸಿಕಂದರ್ ಮತ್ತು ಗೌಸಿಯಾ ತನ್ನ ಮಗಳು ಮಸ್ಕತ್‌ನಲ್ಲಿ ಐಷಾರಾಮಿ ಜೀವನವನ್ನು ನಡೆಸುತ್ತಾರೆ ಎಂದು ಮನವರಿಕೆ ಮಾಡಿಕೊಟ್ಟರು ಮತ್ತು ವರನ ಜೀವನಶೈಲಿಯ ಬಗ್ಗೆ ಕೆಲವು ವೀಡಿಯೊಗಳನ್ನು ತೋರಿಸಿದರು ಎಂದು ಇಂಡಿಯಾ ಟುಡೇ ವರದಿಯಲ್ಲಿ ಪ್ರಕಟವಾಗಿದೆ.

    ಇದನ್ನೂ ಓದಿರಿ: ಗಾಂಧಿ-ತಿಲಕರ ವಿರುದ್ಧ ಬಳಕೆಯಾದ ಕಾನೂನು ಈಗೇಕೆ?: ದೇಶದ್ರೋಹ ಕಾಯ್ದೆ ದುರ್ಬಳಕೆ ವಿರುದ್ಧ ಸುಪ್ರೀಂಕೋರ್ಟ್ ಗರಂ

    ಹೀಗಾಗಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ಫೋಟೋ ಮತ್ತು ಆ ಬಗ್ಗೆ ಹೇಳಿರುವ ಮಾತು ಸುಳ್ಳು ಎಂಬುದು ಫ್ಯಾಕ್ಟ್​ಚೆಕ್​ನಿಂದ ಬಯಲಾಗಿದೆ. ಆಕೆಯ ವೃದ್ಧನ ಮಗಳಲ್ಲ, ಬದಲಾಗಿ ಹೈದರಬಾದ್​ ಮೂಲಕ ಹುಡುಗಿಯಾಗಿದ್ದು ಬಲವಂತವಾಗಿ ಒಮನ್​ಗೆ ಮದುವೆ ಮಾಡಿಕೊಡಲಾಗಿದೆ. (ಏಜೆನ್ಸೀಸ್​)

    ಬಾಲಕನನ್ನು ಕಾಪಾಡಲು ಹೋಗಿ ಬಾವಿಗೆ ಬಿದ್ದ 30 ಮಂದಿ: ಎಲ್ಲರೂ ಸೇಫ್​..!

    ಪೆಟ್ರೋಲ್​-ಡೀಸೆಲ್​ ದರವನ್ನು ಏಕೆ ಕಡಿತಗೊಳಿಸಲಾಗದು?: ನೀತಿ ಆಯೋಗದ ಸಿಇಒ ಹೇಳಿದ್ದು ಹೀಗೆ

    ಅತಿಥಿಯಾದ ಹರ್ಷಿಕಾ ಪೂಣಚ್ಚ; ಕಟ್ಲೆ ಬಳಗಕ್ಕೆ ಸೇರ್ಪಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts