ಅತಿಥಿಯಾದ ಹರ್ಷಿಕಾ ಪೂಣಚ್ಚ; ಕಟ್ಲೆ ಬಳಗಕ್ಕೆ ಸೇರ್ಪಡೆ

ಹರ್ಷಿಕಾ ಪೂಣಚ್ಚ ಈಗಾಗಲೇ ಹಲವು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಕನ್ನಡದ ಜತೆಗೆ ಪರಭಾಷೆಯ ಸಿನಿಮಾಗಳಲ್ಲಿಯೂ ಅವರಿಗೆ ಹೆಚ್ಚೆಚ್ಚು ಅವಕಾಶಗಳು ಸಿಗುತ್ತಿವೆ. ಈ ನಡುವೆ ‘ಕಟ್ಲೆ’ ಚಿತ್ರದಲ್ಲಿ ವಿಶೇಷ ಪಾತ್ರವೊಂದರಲ್ಲಿ ಹರ್ಷಿಕಾ ನಟಿಸಿದ್ದಾರೆ. ಅಂದಹಾಗೆ, 80ಕ್ಕೂ ಅಧಿಕ ಸಿನಿಮಾಗಳಲ್ಲಿ ಹಾಸ್ಯನಟನಾಗಿ ನಟಿಸಿರುವ ಕೆಂಪೇಗೌಡ ‘ಕಟ್ಲೆ’ ಸಿನಿಮಾದಲ್ಲಿ ನಾಯಕನಾಗಿದ್ದಾರೆ. ಅಮೃತಾ ನಾಯಕಿಯಾಗಿದ್ದಾರೆ. ಈ ಬಳಗಕ್ಕೆ ಹರ್ಷಿಕಾ ಸಹ ಸೇರ್ಪಡೆಯಾಗಿದ್ದು, ತಮ್ಮ ಪಾತ್ರದ ಶೂಟಿಂಗ್ ಸಹ ಮುಗಿಸಿದ್ದಾರೆ. ‘ಇದೊಂದು ವಿಶೇಷವಾದ ಪಾತ್ರ. ಇಡೀ ಸಿನಿಮಾಕ್ಕೆ ತಿರುವು ನೀಡುವಂಥ ಪಾತ್ರ’ ಎಂಬುದು ಹರ್ಷಿಕಾ ಮಾತು. … Continue reading ಅತಿಥಿಯಾದ ಹರ್ಷಿಕಾ ಪೂಣಚ್ಚ; ಕಟ್ಲೆ ಬಳಗಕ್ಕೆ ಸೇರ್ಪಡೆ