More

    ಜು.20ಕ್ಕೆ ದ್ವಿತೀಯ ಪಿಯು ಫಲಿತಾಂಶ ಪ್ರಕಟ; ಪರೀಕ್ಷಾ ನೋಂದಣಿ ಸಂಖ್ಯೆ ಇಲ್ಲದೆ ರಿಸಲ್ಟ್ ನೋಡೋದು ಹೇಗೆ?

    ಬೆಂಗಳೂರು: 2021ರ ದ್ವಿತೀಯ ಪಿಯುಸಿ ಫಲಿತಾಂಶವನ್ನು ಜು.20 ಪ್ರಕಟವಾಗಲಿದೆ. ಈ ವರ್ಷ ದ್ವಿತೀಯ ಪಿಯು ಪರೀಕ್ಷೆಯನ್ನು ನಡೆಸದೆ, ಮುಂದಿನ ತರಗತಿಗೆ ಪ್ರಮೋಟ್ ಮಾಡಲಾಗಿದ್ದು, ಗ್ರೇಡಿಂಗ್ ಬದಲು ಪ್ರತಿ ವರ್ಷದಂತೆ ಅಂಕ ಆಧಾರಿತ ಫಲಿತಾಂಶವನ್ನೇ ನೀಡಲಾಗುವುದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರಾದ ಸ್ನೇಹಲ್ ತಿಳಿಸಿದ್ದಾರೆ.

    ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು ಜು.20ರಂದು ಈ ಬಾರಿಯ ಫಲಿತಾಂಶ ನೀಡಲು ತೀರ್ಮಾನಿಸಲಾಗಿದೆ. ಇಲಾಖೆಯ ವೆಬ್‌ಸೈಟ್‌ನಲ್ಲೇ ಫಲಿತಾಂಶ ಪ್ರಕಟಿಸಲಾಗುವುದು. ಪ್ರತಿ ವರ್ಷ ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ನೋಂದಣಿ ಸಂಖ್ಯೆ ಆಧರಿಸಿ ವೆಬ್‌ಸೈಟ್‌ನಲ್ಲಿ ಫಲಿತಾಂಶ ಪಡೆಯುತ್ತಿದ್ದರು. ಆದರೆ, ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯೇ ನಡೆಯದ ಕಾರಣ ವಿದ್ಯಾರ್ಥಿಗಳ ಬಳಿ ಪರೀಕ್ಷಾ ನೋಂದಣಿ ಸಂಖ್ಯೆ ಸದ್ಯಕ್ಕೆ ಇಲ್ಲ. ಆದರೆ, ಪ್ರಸ್ತುತ ಇಲಾಖೆಯು ಪ್ರತಿ ವಿದ್ಯಾರ್ಥಿಗೂ ಪ್ರತ್ಯೇಕ ನೋಂದಣಿ ಸಂಖ್ಯೆ ಸೃಜಿಸಿದ್ದು, ಅದನ್ನು ಇಲಾಖಾ ವೆಬ್‌ಸೈಟ್ ಮೂಲಕವೇ ಪಡೆದುಕೊಳ್ಳಲು ಶುಕ್ರವಾರದಿಂದ ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದರು.

    ಈ ಸಂಬಂಧ ಇಲಾಖಾ ವೆಬ್‌ಸೈಟ್‌ನಲ್ಲಿ ‘know my registration number’ ಎಂಬ ಲಿಂಕ್ ಅನ್ನು ನೀಡಿ ಅದರ ಮೂಲಕ ಪ್ರತಿ ವಿದ್ಯಾರ್ಥಿಯೂ ತಮ್ಮ ನೋಂದಣಿ ಸಂಖ್ಯೆ ಪಡೆದುಕೊಳ್ಳಬಹುದು. ಈ ಸಂಬಂಧ ವಿದ್ಯಾರ್ಥಿಗಳ ಮೊಬೈಲ್, ಇ ಮೇಲ್‌ಗೆ ಕೂಡ ಲಿಂಕ್ ಅನ್ನು ಕಳಿಸಲಾಗುವುದು ಎಂದು ನಿರ್ದೇಶಕರು ತಿಳಿಸಿದ್ದಾರೆ.

    ಆಗಸ್ಟ್ ಅಂತ್ಯಕ್ಕೆ ಕರೊನಾ ಮೂರನೇ ಅಲೆ! ಎರಡನೇ ಅಲೆಯಷ್ಟು ಭಯಾನಕವಾಗಿರುವುದಿಲ್ಲ ಎಂದ ಐಸಿಎಂಆರ್

    ಬೆವರು ಬರಬಾರದೆಂದು ಆಪರೇಷನ್ ಮಾಡಿಸಿಕೊಂಡ ಮಾಡೆಲ್! 23 ವರ್ಷಕ್ಕೇ ಅಂತ್ಯವಾಯಿತು ಬದುಕು!

    ಮಹಿಳೆಯರು ಒಬ್ಬಂಟಿಯಾಗಿ ಸುತ್ತಾಡುವಂತಿಲ್ಲ, ಗಂಡಸರು ಗಡ್ಡ ತೆಗೆಯುವಂತಿಲ್ಲ! ಹೇಗಿರಲಿದೆ ಗೊತ್ತಾ ಅಫ್ಘಾನ್​ನಲ್ಲಿ ತಾಲಿಬಾನ್ ಆಡಳಿತ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts