More

    ಇಂಜಿನಿಯರಿಂಗ್ ವಿದ್ಯಾರ್ಥಿಗಳು ಜೀವಶಾಸ್ತ್ರವನ್ನು ಓದಬೇಕು: ಈ ಶೈಕ್ಷಣಿಕ ವರ್ಷದಿಂದಲೇ ಜಾರಿ

    ಬೆಂಗಳೂರು: ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಇನ್ನು ಮುಂದೆ ತಾಂತ್ರಿಕ ಕೋರ್ಸ್‌ಗಳ ಜತೆಗೆ ‘ಜೀವಶಾಸ’ ವನ್ನು ಒಂದು ವಿಷಯವಾಗಿ ಅಭ್ಯಾಸ ನಡೆಸಬೇಕಿದೆ.

    ಹೌದು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ಈ ಶೈಕ್ಷಣಿಕ ವರ್ಷದಿಂದಲೇ ವಿದ್ಯಾರ್ಥಿಗಳಿಗೆ ಜೀವಶಾಸವನ್ನು ಬೋಧನೆ ಕಡ್ಡಾಯ ಮಾಡಿದೆ. ಜೀವಶಾಸ್ತ್ರದ ಜ್ಞಾನವನ್ನು ವಿದ್ಯಾರ್ಥಿಗಳಿಗೆ ನೀಡುವ ಉದ್ದೇಶದಿಂದ ‘ಬಯೋಲಜಿ ಆಫ್​ ಇಂಜಿನಿಯರ್ಸ್‌’ ಎಂಬ ವಿಷಯವನ್ನು 4ನೇ ಸೆಮಿಸ್ಟರ್‌ಗೆ ಸೇರ್ಪಡೆ ಮಾಡುತ್ತಿದೆ.

    ಕರೊನಾದಂತಹ ವೇಳೆಯಲ್ಲಿ ಎಷ್ಟು ವೈದ್ಯರು ಮತ್ತು ಇಂಜಿನಿಯರ್‌ಗಳು ಯಾವ ರೀತಿಯಲ್ಲಿ ಕೆಲಸ ಮಾಡಿದ್ದರೆ ಎಂಬುದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ವೈದ್ಯಕೀಯ ಜ್ಞಾನ ಕೂಡ ಮುಖ್ಯ ಎಂಬುದನ್ನು ಅರಿತು ನಾವು ಕೋರ್ಸ್ ಆರಂಭಿಸಿದ್ದೇವೆ ಎಂದು ವಿವಿಯ ಅಧಿಕಾರಿಗಳು ತಿಳಿಸಿದ್ದಾರೆ.

    ಉದ್ಯೋವಕಾಶ: ವೈದ್ಯಕೀಯ ಉತ್ಪನ್ನಗಳ ಉತ್ಪಾದನೆಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪಾತ್ರ ಅತ್ಯವಶ್ಯಕವಾಗಿದೆ. ಈ ಕ್ಷೇತ್ರದಲ್ಲಿ ಉದ್ಯೋಗವಕಾಶಗಳು ಸಹ ಹೆಚ್ಚಿವೆ. ಇಂದು ಕೃತಕ ಬುದ್ಧಿ ಮತ್ತೆ ತಂತ್ರಜ್ಞಾನವನ್ನು ಸಾಕಷ್ಟು ವೈದ್ಯಕೀಯ ಶಸ ಚಿಕಿತ್ಸೆಯಲ್ಲಿ ಬಳಕೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ವೈದ್ಯಕೀಯ ಜ್ಞಾನ ಸಿಕ್ಕಾಗ ಮತ್ತಷ್ಟು ಉತ್ತಮವಾದ ಉತ್ಪನ್ನಗಳನ್ನು ರೂಪಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಬಹುದಾಗಿದೆ. ಈ ಹಿನ್ನೆಲೆಯಲ್ಲಿ ಕೋರ್ಸ್ ಪರಿಚಯಿಸುತ್ತಿದೆ ಎಂದು ವಿವಿ ವಿಷಯ ತಜ್ಞರು ತಿಳಿಸಿದ್ದಾರೆ.

    ಕೈಗಾರಿಕೋದ್ಯಮಿಗಳಿಂದಲೇ ಪಠ್ಯಕ್ರಮವನ್ನು ವಿವಿ ಸಿದ್ಧಪಡಿಸಿದೆ. ಈ ಉದ್ಯಮಿಗಳೇ ವಿದ್ಯಾರ್ಥಿಗಳಿಗೆ ತರಗತಿಯನ್ನು ತೆಗೆದುಕೊಳ್ಳಲಿದ್ದಾರೆ. ಅಲ್ಲದೆ, ಹೊರಗಡೆಯಿಂದಲೂ ವಿಷಯ ತಜ್ಞರನ್ನು ಕರೆಯಿಸಿ ಬೋಧನೆ ಮಾಡಿಸಲಿದೆ.

    ವಿದ್ಯಾರ್ಥಿಗಳಿಗೆ ವಿಜ್ಞಾನದ ಅರಿವು ಇರಬೇಕು. ತಂತ್ರಜ್ಞಾನದ ಜತೆಗೆ ವಿಜ್ಞಾನ ಸಮೀಕರಿಸಿದಾಗ ಉತ್ತಮ ಉತ್ಪನ್ನಗಳನ್ನು ರೂಪಿಸಲು ಸಾಧ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಜೀವಶಾಸವನ್ನು ಪರಿಚಯಿಸಲಾಗುತ್ತಿದೆ.

    | ಕರಿಸಿದ್ದಪ್ಪ, ಕುಲಪತಿ, ವಿಟಿಯು

    ಇರಲಾರದೇ ಇರುವೆ ಬಿಟ್ಟುಕೊಳ್ಳೋದು ಅಂದ್ರೆ ಇದೇ! ಆರ್ಯನ್​ ಖಾನ್​ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡವನಿಗೆ ಶಾಕ್​

    ಫೋರ್ಬ್ಸ್ ಪಟ್ಟಿಯಲ್ಲಿ ನಟಿ ರಶ್ಮಿಕಾ ಮಂದಣ್ಣ ಹವಾ

    ಕನ್ನಡಿಗನ ಡಬ್ಬಿಂಗ್; ರಾಜ್ಯೋತ್ಸವಕ್ಕೆ ಚಿತ್ರ ಬಿಡುಗಡೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts