More

    ಹನಿಮೂನ್​ ವೇಳೆ ಬೆನ್ನು ಹುಷಾರು! ದೀಪಕ್​ ಚಹರ್​ಗೆ ಎಚ್ಚರಿಕೆ ನೀಡಿದ ಸಹೋದರಿ ಮಾಲತಿ

    ಚೆನ್ನೈ: ಟೀಮ್​ ಇಂಡಿಯಾದ ಆಟಗಾರ ಹಾಗೂ ಚೆನ್ನೈ ಸೂಪರ್​​ ಕಿಂಗ್ಸ್​​ ತಂಡದ ಸ್ಟಾರ್​ ಆಟಗಾರ ದೀಪಕ್​ ಚಹರ್ ತನ್ನ ಪ್ರೇಮ ನಿವೇದನೆಯಿಂದಲೇ ಐಪಿಎಲ್​ನಲ್ಲಿ ಭಾರೀ ಸುದ್ದಿಯಾಗಿದ್ದಾರೆ. ಐಪಿಎಲ್​ ಪಂದ್ಯದ ವೇಳೆ ಚಹರ್​​ ಅವರು ತಮ್ಮ ಗೆಳತಿ ಜಯಾ ಭಾರದ್ವಜ್​ ಅವರಿಗೆ ಲವ್​ ಪ್ರಪೋಸ್​ ಮಾಡುವ ಮೂಲಕ ಎಲ್ಲರ ಹುಬ್ಬೇರಿಸಿದ್ದರು. ಅಭಿಮಾನಿಗಳು ಕೂಡ ಚಹರ್​ ಪ್ರೀತಿಯನ್ನು ಸಂಭ್ರಮಿಸಿದ್ದರು.

    ​ಜಯಾ ಅವರು ವಿಐಪಿ ಸ್ಟ್ಯಾಂಡ್​ನಲ್ಲಿ ನಿಂತು ಪಂದ್ಯ ವೀಕ್ಷಣೆ ಮಾಡುವಾಗ ಸರ್ಪ್ರೈಸ್​ ಆಗಿ ಭೇಟಿ ನೀಡಿದ್ದ ಚಹರ್​ ರಿಂಗ್​ ಕೊಟ್ಟು ಪ್ರೇಮ ನಿವೇದನೆ ಮಾಡಿಕೊಂಡಿದ್ದರು. ಜಯಾ ಕೂಡ ತುಂಬಾ ಖುಷಿಪಟ್ಟಿದ್ದರು. ಈ ಭಾವನಾತ್ಮಕ ಸನ್ನಿವೇಶಕ್ಕೆ ಕ್ರಿಕೆಟ್​ ಬಳಗವೂ ಕೂಡ ಫಿದಾ ಆಗಿ, ಚಹರ್​ ಮತ್ತು ಜಯಾಗೆ ಅಭಿನಂದೆನಗಳನ್ನು ಸಲ್ಲಿಸಿದ್ದರು.

    ಅಂದಹಾಗೆ ಚಹರ್​ ಮತ್ತು ಜಯಾ ಇದೇ ಜೂನ್​ 1ರಂದು ಸಪ್ತಪದಿ ತುಳಿದಿದ್ದು, ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ಚಹರ್​ ಅವರು ಹನಿಮೂನ್​ಗೆ ತೆರಳಿದ್ದು, ಈ ಬಗ್ಗೆ ಚಹರ್​ ಅವರನ್ನು ಸ್ವತಃ ಅವರ ಸಹೋದರಿ ಹಾಗೂ ರೂಪದರ್ಶಿಯಾಗಿರುವ ಮಾಲತಿ ಚಹರ್​ ಟ್ರೋಲ್​ ಮಾಡಿದ್ದಾರೆ. ಚಹರ್​ ಹನಿಮೂನ್​ ಕುರಿತು ಮಾಲತಿ ಮಾಡಿರುವ ಕಾಮೆಂಟ್​ ಎಲ್ಲರ ಹುಬ್ಬೇರಿಸಿದೆ.

    ಅಭಿನಂದನೆ ಸಲ್ಲಿಸುವ ಪೋಸ್ಟ್​​ ಮೂಲಕ ಮಾಲತಿ ಅವರು ಚಹರ್​ ಕಾಲೆಳೆದಿದ್ದಾರೆ. ತುಂಬಾ ಸಂತೋಷದ ವೈವಾಹಿಕ ಜೀವನ ನಿಮ್ಮದಾಗಿರಲಿ ಸಹೋದರ. ಹನಿಮೂನ್ ವೇಳೆ ನಿನ್ನ ಬೆನ್ನು ಹುಷಾರು. ಏಕೆಂದರೆ ಮುಂದೆ ವಿಶ್ವಕಪ್​ ಪಂದ್ಯವಿದೆ ಎಂದು ಬರೆಯುವ ಮೂಲಕ ಮಾಲತಿ ಸಹೋದರನ ಕಾಲೆಳೆದಿದ್ದಾರೆ. ​

    ಗಾಯದ ಕಾರಣ ಚಹರ್ ಕಳೆದ ಋತುವಿನ ಐಪಿಎಲ್‌ನಿಂದ ಹೊರಗುಳಿದಿದ್ದರು. ಬೆನ್ನುನೋವಿನ ಕಾರಣ ಚಹರ್ ಚೆನ್ನೈ ಪರ ಫೀಲ್ಡಿಂಗ್ ಮಾಡಲು ಸಾಧ್ಯವಾಗಲಿಲ್ಲ. ಈ ವರ್ಷ ಟ್ವೆಂಟಿ-20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ನಡೆಯಲಿದ್ದು, ಅದಕ್ಕೆ ಚಹರ್​ ತರಬೇತಿ ನಡೆಸಬೇಕಿದೆ. (ಏಜೆನ್ಸೀಸ್​)

    ನಾವೆಲ್ಲರೂ ಒಂದೇ ಚಿತ್ರರಂಗದವರು; ದಕ್ಷಿಣ-ಉತ್ತರ ಅಂತೇನೂ ಇಲ್ಲ ಎಂದ ಖಿಲಾಡಿ..

    ಮೂರು ವಾರ ನಿರ್ಣಾಯಕ: ರಾಜ್ಯದಲ್ಲಿ ಕೋವಿಡ್ ನಾಲ್ಕನೇ ಅಲೆ ಸಂಭಾವ್ಯತೆ..

    ಎವರೆಸ್ಟ್ ಆರೋಹಣ, ಶತಮಾನದ ಪಯಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts