More

    ನಾವೆಲ್ಲರೂ ಒಂದೇ ಚಿತ್ರರಂಗದವರು; ದಕ್ಷಿಣ-ಉತ್ತರ ಅಂತೇನೂ ಇಲ್ಲ ಎಂದ ಖಿಲಾಡಿ..

    ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ‘ಸಾಮ್ರಾಟ್ ಪೃಥ್ವಿರಾಜ್’ ಮೊನ್ನೆ ಶುಕ್ರವಾರ ಜಗತ್ತಿನಾದ್ಯಂತ ಬಿಡುಗಡೆ ಆಗಿದೆ. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತರೂ ದಕ್ಷಿಣ ಭಾರತ ಹಾಗೂ ವಿದೇಶಗಳಲ್ಲಿ ಕಮಲ್ ಹಾಸನ್ ನಟಿಸಿರುವ ‘ವಿಕ್ರಮ್ ಹಾಗೂ ಸಂದೀಪ್ ಉನ್ನಿಕೃಷ್ಣನ್ ಜೀವನಾಧಾರಿತ ಸಿನಿಮಾ, ಅಡಿವಿ ಶೇಷ್ ನಟಿಸಿರುವ ‘ಮೇಜರ್’ ಚಿತ್ರಗಳು ಬಾಕ್ಸಾಫೀಸ್​ನಲ್ಲಿ ಸವಾಲು ಹಾಕಿವೆ. ಮೂಲಗಳ ಪ್ರಕಾರ ‘ಸಾಮ್ರಾಟ್ ಪೃಥ್ವಿರಾಜ್’ ಮೊದಲ ದಿನದ ಗಳಿಕೆ 10.70 ಕೋಟಿ ರೂ. ಆಗಿದ್ದು, ಮತ್ತೊಂದೆಡೆ ‘ವಿಕ್ರಮ್ ಕಲೆಕ್ಷನ್ ಬರೋಬ್ಬರಿ 32 ಕೋಟಿ ರೂ. ದಾಟಿದೆ. ಹಾಗೆಯೇ ‘ಮೇಜರ್’ ಚಿತ್ರಕ್ಕೂ ಸುಮಾರು 10ರಿಂದ 12 ಕೋಟಿ ರೂ. ಹರಿದು ಬಂದಿದೆ ಎನ್ನಲಾಗಿದೆ.

    ಅರಬ್ ರಾಷ್ಟ್ರಗಳಲ್ಲಿ ಬ್ಯಾನ್: ಮತ್ತೊಂದೆಡೆ ಹಿಂದಿ ಸಿನಿಮಾಗಳಿಗೆ ಅತಿಹೆಚ್ಚು ಅಭಿಮಾನಿಗಳಿರುವ ಕೆಲವು ಅರಬ್ ರಾಷ್ಟ್ರಗಳಲ್ಲಿ ಅಲ್ಲಿನ ಸರಕಾರಗಳು ‘ಸಾಮ್ರಾಟ್ ಪೃಥ್ವಿರಾಜ್‘ ಚಿತ್ರದ ಮೇಲೆ ನಿರ್ಬಂಧ ಹೇರಿವೆ ಎನ್ನಲಾಗಿದೆ. ಓಮನ್ ಮತ್ತು ಕುವೈತ್ ದೇಶಗಳಲ್ಲಿ, ಸಿನಿಮಾ ತೆರೆಗೆ ಬರಲು ಕೇವಲ ಒಂದು ದಿನ ಇರುವಾಗ ಬ್ಯಾನ್ ಹೇರಲಾಗಿದೆ. ಹೀಗಾಗಿಯೇ ಚಿತ್ರದ ಗಳಿಕೆಗೆ ಕೊಂಚ ಹಿನ್ನಡೆಯಾಗಿದೆ. ಮತ್ತೊಂದೆಡೆ ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶ ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ ನೀಡಲಾಗಿದೆ.

    ದಕ್ಷಿಣದ ಸಿನಿಮಾಗಳಲ್ಲಿ ನಟಿಸುವಾಸೆ: ಇನ್ನು, ಉತ್ತರ ವರ್ಸಸ್ ದಕ್ಷಿಣ ಚಿತ್ರರಂಗಗಳ ಕುರಿತಾದ ಚರ್ಚೆಯ ಬಗ್ಗೆ ಮಾತನಾಡಿರುವ ನಟ ಅಕ್ಷಯ್ ಕುಮಾರ್, ‘ಚಿತ್ರರಂಗಗಳ ನಡುವೆ ಡಿವೈಡ್ ಅಂಡ್ ರೂಲ್ ಪಾಲಿಸಿ ತರಬೇಡಿ. ದಕ್ಷಿಣದ ಸಿನಿಮಾಗಳು, ಉತ್ತರದ ಸಿನಿಮಾಗಳು ಅಂತೇನೂ ಇಲ್ಲ. ನಾವೆಲ್ಲರೂ ಒಂದೇ ಚಿತ್ರರಂಗಕ್ಕೆ ಸೇರಿದವರು. ಎಲ್ಲ ಚಿತ್ರರಂಗಗಳವರೂ ಒಂದೇ ಸಿನಿಮಾದಲ್ಲಿ ಕೆಲಸ ಮಾಡುವ ಸಮಯ ಈಗ ಬಂದಿದೆ. ಅಲ್ಲು ಅರ್ಜುನ್ ನನ್ನ ಚಿತ್ರದಲ್ಲಿ ನಟಿಸಲಿ ಅಂತ ಇಷ್ಟಪಡುತ್ತೇನೆ. ಹಾಗೆಯೇ ನಾನೂ ದಕ್ಷಿಣದ ಬೇರೆ ನಟರ ಸಿನಿಮಾಗಳಲ್ಲಿ ನಟಿಸುತ್ತೇನೆ’ ಎಂದಿದ್ದಾರೆ.

    – ಏಜೆನ್ಸೀಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts