More

    ಷಣ್ಮುಖ​ ಜಸ್ವಂತ್ ಮುಖವಾಡ ಬಯಲು: ಇನ್​ಸ್ಟಾಗ್ರಾಂ ಲೈವ್​ನಲ್ಲಿ ಕಣ್ಣೀರಧಾರೆ ಹರಿಸಿದ ನಟಿ ದೀಪ್ತಿ ಸುನೈನಾ!​

    ಹೈದರಾಬಾದ್​: ಶಾನು ಅಲಿಯಾಸ್​ ಷಣ್ಮುಖ​ ಜಸ್ವಂತ್​ ಹಾಗೂ ದೀಪ್ತಿ ಸುನೈನಾ ತೆಲುಗು ಯೂಟ್ಯೂಬ್​ ಸರ್ಕಲ್​ನಲ್ಲಿ ಫೇಮಸ್ ಆಗಿರುವ ಮುದ್ದಾದ ಜೋಡಿಗಳು. ಇಬ್ಬರು ಪರಸ್ಪರ ಪ್ರೀತಿಸುತ್ತಿರುವುದು ಜಗಜ್ಜಾಹೀರಾಗಿತ್ತು. ಅದನ್ನು ಸ್ವತಃ ಷಣ್ಮುಖ್​ ಹಾಗೂ ದೀಪ್ತಿ ಕೂಡ ಹೇಳಿಕೊಂಡಿದ್ದರು. ಆದರೆ, ಬಿಗ್​ಬಾಸ್​ ಸೀಸನ್​ 5 ಇಬ್ಬರ ಪ್ರೀತಿಗೆ ಹುಳಿ ಹಿಂಡಿದ್ದು, ಹೊಸ ವರ್ಷದಂದೇ ದೀಪ್ತಿ ತಮ್ಮ ಪ್ರೀತಿಗೆ ಅಧಿಕೃತವಾಗಿ ಬ್ರೇಕಪ್​ ಹೇಳಿದ್ದಾರೆ. ಇದೀಗ ಇನ್​ಸ್ಟಾಗ್ರಾಂ ಲೈವ್​ನಲ್ಲಿ ಲವ್​ ಲೈಫ್​ ಬಗ್ಗೆ ಮಾತನಾಡುವಾಗ ದೀಪ್ತಿ ಕಣ್ಣೀರಧಾರೆ ಹರಿಸಿದ್ದಾರೆ.

    ಷಣ್ಮುಖ​ ಜಸ್ವಂತ್ ಮುಖವಾಡ ಬಯಲು: ಇನ್​ಸ್ಟಾಗ್ರಾಂ ಲೈವ್​ನಲ್ಲಿ ಕಣ್ಣೀರಧಾರೆ ಹರಿಸಿದ ನಟಿ ದೀಪ್ತಿ ಸುನೈನಾ!​

    ಬ್ರೇಕಪ್​ಗೆ ಕಾರಣವೇನು ಎಂದು ನೆಟ್ಟಿಗರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ದೀಪ್ತಿ, ನಾನು ನನ್ನ ವೃತ್ತಿ ಜೀವನದಲ್ಲಿ ಏನಾದರೊಂದು ಸಾಧನೆ ಮಾಡಲು ಬಯಸಿದ್ದೇನೆ. ಇದುವರೆಗೂ ನಾನು ನನ್ನ ಬಗ್ಗೆ ಯೋಚಿಸಿಯೇ ಇರಲಿಲ್ಲ. ನನ್ನ ವೃತ್ತಿ ಜೀವನದ ಬಗ್ಗೆ ನಿರ್ಲಕ್ಷ್ಯ ಹೊಂದಿದ್ದೆ. ಆದರೆ, ನನ್ನನ್ನು ನಾನು ಹೆಚ್ಚು ಪ್ರೀತಿಸಬೇಕು ಅಂದುಕೊಂಡಿದ್ದೇನೆ ಎಂದು ಹೇಳಿದರು. ಹೀಗೆ ಹೇಳುವಾಗ ಗದ್ಗದಿತರಾದ ದೀಪ್ತಿ ನೋವು ತಾಳಲಾರದೇ ಕಣ್ಣೀರಧಾರೆಯನ್ನು ಹರಿಸಿದರು.

    ದೀಪ್ತಿ ಕಣ್ಣೀರಾಕುವುದನ್ನು ನೋಡಿದ ನೆಟ್ಟಿಗರು ಧೈರ್ಯವಾಗಿರಿ ಎಂದು ಹೇಳಿದರು. ಅಲ್ಲದೆ, ನಿಮ್ಮ ವೃತ್ತಿ ಜೀವನದಲ್ಲಿ ಖಂಡಿತ ಯಶಸ್ಸು ಸಿಗುತ್ತದೆ. ಆಗಿದ್ದನ್ನೆಲ್ಲ ಮರೆತು ಬಿಡಿ, ಮುಂದೆ ಖಂಡಿತ ಒಳ್ಳೆಯದಾಗಲಿದೆ ಎಂದು ಸಾಂತ್ವಾನದ ಮಾತುಗಳನ್ನು ಆಡಿದರು.

    ಷಣ್ಮುಖ​ ಜಸ್ವಂತ್ ಮುಖವಾಡ ಬಯಲು: ಇನ್​ಸ್ಟಾಗ್ರಾಂ ಲೈವ್​ನಲ್ಲಿ ಕಣ್ಣೀರಧಾರೆ ಹರಿಸಿದ ನಟಿ ದೀಪ್ತಿ ಸುನೈನಾ!​

    ದೀಪ್ತಿ ಬ್ರೇಕಪ್​ ಪೋಸ್ಟ್​
    ಹೊಸ ವರ್ಷದಂದೇ ದೀಪ್ತಿ ತಮ್ಮ ಪ್ರೀತಿಗೆ ಎಳ್ಳು ನೀರು ಬಿಟ್ಟಿದ್ದಾರೆ. ತಮ್ಮ ಇನ್​ಸ್ಟಾಗ್ರಾಂನಲ್ಲಿ ಲವ್​ ಬ್ರೇಕಪ್​ ಬಗ್ಗೆ ದೀಪ್ತಿ ಬರೆದುಕೊಂಡಿದ್ದರು. ಎಲ್ಲ ನನ್ನ ಪ್ರೀತಿಯ ಹಿತೈಷಿಗಳು ಹಾಗೂ ಗೆಳೆಯ/ಗೆಳತಿಯರೇ… ಸಾಕಷ್ಟು ಯೋಚಿಸಿದ ಬಳಿಕ ನಾನೊಂದು ನಿರ್ಧಾರಕ್ಕೆ ಬಂದಿದ್ದೇನೆ. ನಾನು ಮತ್ತು ಶಾನು ಪರಸ್ಪರ ನಿರ್ಧಾರ ಮಾಡಿದ್ದು, ನಮ್ಮಿಬ್ಬರ ವೈಯಕ್ತಿಕ ಜೀವನದಲ್ಲಿ ಬೇರೆ ಬೇರೆಯಾಗಿ ಮುಂದುವರಿಯಲಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ನಮ್ಮ ದಾರಿಯಲ್ಲಿ ನಾವು ಸಾಗಲಿದ್ದೇವೆ. ಈ ಐದು ವರ್ಷಗಳಲ್ಲಿ ಸಾಕಷ್ಟು ಸಮಯ ಸಂತೋಷವಾಗಿ ಕಳೆದಿದ್ದೇವೆ. ಆದರೆ, ನಮ್ಮ ಎದುರಾಳಿಗಳ ವಿರುದ್ಧ ವ್ಯವಹರಿಸುವುದು ಕೂಡ ಕಷ್ಟವಾಗಿದೆ. ಇದಕ್ಕೆಲ್ಲ ಕೊನೆಯಾಡಲು ನಾವಿಬ್ಬರು ನಿರ್ಧರಿಸಿದ್ದು, ಇನ್ಮುಂದೆ ನಮ್ಮಿಬ್ಬರ ನಡುವೆ ಯಾವುದೇ ಸಂಬಂಧವಿರುವುದಿಲ್ಲ ಎಂದಿದ್ದಾರೆ.

    ಪ್ರೇಮಿಗಳ ನಡುವೆ ಏನಾಯಿತು?
    ಶಾನು ಮತ್ತು ದೀಪ್ತಿ ನಡುವೆ ಬ್ರೇಕಪ್ ಆಗಿದೆ ಎಂಬ ವಿಚಾರ ಈ ಹಿಂದೆಯೇ ಬೆಳಕಿಗೆ ಬಂದಿತ್ತು. ಬಿಗ್​ಬಾಸ್​ನಲ್ಲಿ ಶಾನು ಕ್ಯಾಪ್ಟನ್​ ಆದ ನಂತರ ನೆಡೆದ ಎಪಿಸೋಡ್​ನಲ್ಲಿ ಪ್ರತಿಸ್ಪರ್ಧಿ ಸಿರಿ ಅವರು ಶಾನು ಹಣೆಗೆ ಮುತ್ತಿಟ್ಟಿದ್ದರು. ಅಲ್ಲದೆ, ಒಂದು ರಾತ್ರಿ ಇಬ್ಬರು ಮಾತನಾಡುತ್ತಿರುವಾಗ ಸಿರಿ, ಶಾನು ಎದೆಯ ಮೇಲೆ ಮಲಗಿದ್ದರು. ಇದು ತುಂಬಾ ಸಲುಗೆ ಇರುವಂತೆ ತೋರುತ್ತಿತ್ತು. ಇದನ್ನು ನೋಡಿದ ದೀಪ್ತಿ ತುಂಬಾ ಕೋಪಗೊಂಡಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿತ್ತು. ಶಾನು ಮತ್ತು ಸಿರಿ ತುಂಬಾ ಸಲುಗೆಯಿಂದ ಇರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ದೀಪ್ತಿಗೆ ಬೇಸರ ತರಿಸಿದೆ. ಹೀಗಾಗಿ ದೀಪ್ತಿ ತನ್ನ ಇನ್​ಸ್ಟಾಗ್ರಾಂ ಫಾಲೋವರ್ಸ್​ ಲೀಸ್ಟ್​ನಿಂದ ಶಾನು ಅನ್ನು ಅನ್​​ ಫಾಲೋ ಮಾಡಿರುವ ವಿಚಾರವೂ ಬೆಳಕಿಗೆ ಬಂದಿತ್ತು. ಬಿಗ್​ಬಾಸ್​ನಿಂದ ಹೊರಬಂದ ನಂತರವೂ ಶಾನು ಮತ್ತು ದೀಪ್ತಿ ಅಂತರ ಕಾಯ್ದುಕೊಂಡಿದ್ದರು. ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಅನುಮಾನ ಸೃಷ್ಟಿಯಾಗಿತ್ತು. ಇದೀಗ ದೀಪ್ತಿ ಅಧಿಕೃತವಾಗಿ ಲವ್​ ಬ್ರೇಕಪ್​ ಮಾಡಿಕೊಳ್ಳುವ ಮೂಲಕ ಅನುಮಾನವನ್ನು ನಿಜವಾಗಿಸಿದ್ದಾರೆ.

    ಷಣ್ಮುಖ​ ಜಸ್ವಂತ್ ಮುಖವಾಡ ಬಯಲು: ಇನ್​ಸ್ಟಾಗ್ರಾಂ ಲೈವ್​ನಲ್ಲಿ ಕಣ್ಣೀರಧಾರೆ ಹರಿಸಿದ ನಟಿ ದೀಪ್ತಿ ಸುನೈನಾ!​

    ಇತ್ತ ಸಿರಿಗೂ ಮೊದಲೇ ಬಾಯ್​ಫ್ರೆಂಡ್​ ಇದ್ದಾನೆ. ಆತನ ಹೆಸರು ಶ್ರೀಹಾನ್​. ಇದೀಗ ಆತ ತನ್ನ ಮೊಬೈಲ್​ನಲ್ಲಿದ್ದ ಸಿರಿ ಫೋಟೋಗಳನ್ನೆಲ್ಲ ಡಿಲೀಟ್​ ಮಾಡಿದ್ದಾನೆಂದು ತಿಳಿದುಬಂದಿದೆ. ಶಾನು ಜತೆಗಿನ ಸಿರಿ ಸಂಬಂಧದಿಂದ ಅಸಮಾಧಾನಗೊಂಡಿರುವ ಶ್ರೀಹಾನ್​ ಆಕೆಯೊಂದಿಗೆ ಮಾತು ಬಿಟ್ಟಿದ್ದಾರೆ. ಅಲ್ಲದೆ, ಆಕೆಯಿಂದ ಅಂತರ ಕಾಯ್ದುಕೊಂಡಿದ್ದಾರೆ ಎಂಬ ಸುದ್ದಿಯು ಹರಿದಾಡುತ್ತಿದೆ. ಒಟ್ಟಾರೆ, ಬಿಗ್​ಬಾಸ್​ ಶೋ ಮುಗಿಸಿಕೊಂಡು ಬಂದ ಮೇಲೆ ಇಬ್ಬರ ಪ್ರೀತಿಯಲ್ಲಿ ಬಿರುಗಾಳಿ ಎದ್ದಿದ್ದು, ಒಂದು ಪ್ರೀತಿ ಬ್ರೇಕ್​ ಆಗಿದೆ. (ಏಜೆನ್ಸೀಸ್​)

    ಬಿಗ್​ಬಾಸ್​ ಮನೆಯೊಳಗೆ ರೋಮ್ಯಾನ್ಸ್​! ಫೇಮಸ್​ ಯೂಟ್ಯೂಬರ್​ ಪ್ರೀತಿಗೆ ಗುಡ್​ ಬೈ ಹೇಳಿದ ನಟಿ ದೀಪ್ತಿ

    ಸೋಶಿಯಲ್​ ಮೀಡಿಯಾ ಸೆನ್ಸೇಷನ್​ ದೀಪ್ತಿ ಸುನೈನಾ ಪ್ರೇಮ್​ ಕಹಾನಿ ಬಯಲು: ಯೂಟ್ಯೂಬರ್​ ಜತೆ ದೀಪ್ತಿ ಪ್ಯಾರ್!​

    ಬಿಗ್​ಬಾಸ್​ನಿಂದ ಹೊರಬಂದ ಬೆನ್ನಲ್ಲೇ ಪ್ರೇಯಸಿ ದೀಪ್ತಿ ಸುನೈನಾಗೆ ಶಾಕ್​ ಕೊಟ್ಟ ಷಣ್ಮುಖ​ ಜಸ್ವಂತ್!​

    ಬಿಗ್​ಬಾಸ್​ಗೆ ಹೋಗಿದ್ದೇ ತಪ್ಪಾಯ್ತಾ? ಎರಡು ಪ್ರೇಮ ಪ್ರಕರಣಗಳ ನಡುವೆ ಬತ್ತಿ ಇಟ್ಟ ಬಿಗ್​ಬಾಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts