More

    ಸರಳತೆಯ ಸಿರಿಯಲ್ಲಿ ಕುವೆಂಪು ವಿರಾಜಮಾನ

    ಅರಕೇರಾ: ವರಕವಿ ದ.ರಾ.ಬೇಂದ್ರೆ ಅವರಿಂದ ಕುವೆಂಪು ಯುಗದ ಕವಿ ಜಗದ ಕವಿ ಎಂದೆನಿಸಿಕೊಂಡಿದ್ದರು ಎಂದು ಎಫ್‌ಡಿಸಿ ಶರಣಯ್ಯ ಸ್ವಾಮಿ ಹೇಳಿದರು.

    ಇದನ್ನೂ ಓದಿ: ರಾಷ್ಟ್ರಕವಿ ಕುವೆಂಪು ಸಾಹಿತ್ಯ ಲೋಕದ ಧ್ರುವತಾರೆ

    ಪಟ್ಟಣದ ತಹಸಿಲ್ ಕಚೇರಿಯಲ್ಲಿ ರಾಷ್ಟ್ರಕವಿ ಕುವೆಂಪು ಜನ್ಮ ದಿನಾಚರಣೆ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಶುಕ್ರವಾರ ಮಾತನಾಡಿದರು. ನಾಟಕ, ಕಥೆ, ಕಾದಂಬರಿ, ವಿಮರ್ಶೆ ಮೊದಲಾದ ಹಲವಾರು ಕ್ಷೇತ್ರಗಳಲ್ಲಿ ಮಹತ್ತರವಾದ ಸಾಧನೆ ಮೂಲಕ ಕುವೆಂಪು ಹೊಸದೊಂದು ವಿಕ್ರಮವನ್ನೇ ಮಾಡಿದ್ದಾರೆ.

    ಕುವೆಂಪು ಬದುಕು ಸರಳತೆಯೆಂಬ ಸಿರಿಯಲ್ಲಿ ವಿರಾಜಮಾನವಾಗಿದ್ದು, ಸ್ವಾಮಿ ವಿವೇಕಾನಂದ ಹಾಗೂ ರಾಮಕೃಷ್ಣ ಪರಮಹಂಸರ ಪರಿಧಿಯಲ್ಲಿ ವಿಕಸಿತವಾಗಿತ್ತು. ಬೇರೆ ಯಾವ ಸಾಹಿತಿಗಳೂ ಕುವೆಂಪು ರೀತಿ ಜನಮನದಲ್ಲಿ ಉಳಿದಿಲ್ಲ ಎಂದರು.

    ಕಂದಾಯ ನಿರೀಕ್ಷಕ ಉಮಾಶಂಕರ, ಪ್ರಮುಖರಾದ ಸೋಮನಥ ಸ್ವಾಮಿ ನಾಗೋಲಿ, ಮಲ್ಲಯ್ಯ ಪೂಜಾರಿ, ಹನುಮಂತ್ರಾಯ ನಾಯಕ ಗಾಲಿ, ಶರಣ ಬೇರಿ, ರಂಗಪ್ಪ ಮೈಲಾಪುರ, ಸಿಬ್ಬಂದಿ ಕನಕರೆಡ್ಡಿ, ವೆಂಕಟೇಶ, ಕರಿಯಪ್ಪ ನಾಯಕ, ಮೌನೇಶ ಚಲವಾದಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts