More

    ತಾಯಿಯ ಕಷ್ಟ ಸಹಿಸದೇ ಆಟೋ ಚಾಲಕಿಯಾದ ಪಿಯು ವಿದ್ಯಾರ್ಥಿನಿ: ಈಕೆಯ ಕತೆ ಕೇಳಿದ್ರೆ ಮನಕಲಕುತ್ತೆ!

    ನಲ್ಗೊಂಡ: ವಿದ್ಯಾರ್ಥಿ ಜೀವನದಲ್ಲಿ ಬಹುತೇಕರು ಪ್ರತಿಯೊಂದಕ್ಕೂ ಪಾಲಕರ ಮೇಲೆ ಅವಲಂಬಿತವಾಗಿರುತ್ತಾರೆ. ಆದರೆ, ಕೆಲವರು ಓದಿನ ಜತೆಗೆ ಕುಟುಂಬದ ಬೆನ್ನೆಲುಬಾಗಿ ನಿಂತಿರುತ್ತಾರೆ. ಬಡತನದಿಂದ ಬಂದ ಬಹುತೇಕ ಯುವಕರ ಜೀವನದ ಹಾದಿ ಇದೇ ಹಾಗಿರುತ್ತದೆ. ಇದಕ್ಕೆ ಯುವತಿಯರು ಸಹ ಹೊರತಾಗಿಲ್ಲ ಎಂಬುದನ್ನು ಈ ಒಂದು ಘಟನೆ ನೆನಪು ಮಾಡಿದೆ.

    ಬಹುತೇಕರ ಬಾಳಿಗೆ ಅಂಟಿದ ಶಾಪವೆಂದರೆ ಅದು ಬಡತನ. ಅದರಿಂದ ಆಚೆಗೆ ಬರಲು ಕೆಲವರು ಅಡ್ಡದಾರಿ ಹಿಡಿದರೆ, ಈ ಯುವತಿ ಆಯ್ದುಕೊಂಡ ದಾರಿ ಇನ್ನೊಬ್ಬರಿಗೆ ದಾರಿದೀಪವಾಗಿದೆ. ಪ್ರತಿದಿನ ಕಾಲೇಜಿಗೆ ತನ್ನ ಆಟೋವನ್ನು ತೆಗೆದುಕೊಂಡು ಹೋಗುವ ಈಕೆ ಓದಿನ ಜತೆಗೆ ಕುಟುಂಬದ ಬೆನ್ನಿಗೆ ನಿಂತಿದ್ದು, ಈಕೆಯ ಹಿನ್ನೆಲೆ ಸ್ಟೋರಿ ಕೇಳಿದ್ರೆ ಕಣ್ಣಂಚಲ್ಲಿ ನೀರು ತುಂಬಿಕೊಳ್ಳುವುದು ಗ್ಯಾರೆಂಟಿ.

    ಯುವತಿಯ ಹೆಸರು ಸಬಿತಾ. ಈಕೆಗೆ 19 ವರ್ಷ ವಯಸ್ಸು. ತೆಲಂಗಾಣದ ನಲ್ಗೊಂಡ ಜಿಲ್ಲೆಯ ಶಲಿಗೌರ್ರಮ್​ ವಲಯದ ವಾಂಗಮಾರ್ಥಿ ಗ್ರಾಮದ ನಿವಾಸಿ. ಆರು ವರ್ಷಗಳ ಹಿಂದೆಯೇ ಈಕೆಯ ತಂದೆ ಇಹಲೋಕ ತ್ಯಜಿಸಿದ್ದಾರೆ. ಬಡಕುಟುಂಬದ ಆಧಾರಸ್ಥಂಬವಾಗಿದ್ದ ತಂದೆ ಮರಣ ಹೊಂದಿದ್ದು, ಕುಟುಂಬದ ಎಲ್ಲ ಭಾರಗಳು ತಾಯಿಯ ಮೇಲೆ ಬಿದ್ದಿತ್ತು. ಪ್ರತಿದಿನ ತಾಯಿ ಪಡುತ್ತಿದ್ದ ಕಷ್ಟಪಡುವುದನ್ನು ನೋಡಿ ಸಬಿತಾ ಮನಸ್ಸು ಭಾರವಾಗಿತ್ತು. ತಾಯಿ ನೋವನ್ನು ಸಹಿಸದ ಸಬಿತಾ ಕುಟುಂಬಕ್ಕೆ ಬೆಂಬಲವಾಗಿ ನಿಲ್ಲುವ ನಿರ್ಧಾರ ಮಾಡಿದಳು. ಆದರೆ, ಓದು ಆಕೆಗೆ ಅಡ್ಡಿಯಾಗಿತ್ತು.

    ತನ್ನ ಗ್ರಾಮದ 21 ಕಿ.ಮೀ ದೂರದಲ್ಲಿರುವ ನಕಿರೆಕಲ್​ ಸರ್ಕಾರಿ ಕಾಲೇಜಿನಲ್ಲಿ ಪಿಯು ವಿದ್ಯಾರ್ಥಿನಿಯಾಗಿದ್ದಾಳೆ. ಕಾಲೇಜಿನಲ್ಲಿ ಓದಿನ ಜತೆಗೆ ಮೋಜು ಮಸ್ತಿಯಲ್ಲಿ ತೊಡಗಬೇಕಿದ್ದ ಯುವತಿ ಇದೀಗ ಆಟೋ ಏರಿ ದುಡಿಯುವ ಕೆಲಸಕ್ಕೆ ಇಳಿದಿದ್ದಾಳೆ. ಬೆಳಗ್ಗೆ ಆಟೋ ಹತ್ತುವ ಯುವತಿ ಪ್ರಯಾಣಿಕರನ್ನು ಅವರವರ ಊರಿಗೆ ತಲುಪಿಸಿದ ಬಳಿಕ ತಾನು ಕಾಲೇಜಿಗೆ ಹೋಗುತ್ತಾಳೆ. ಮತ್ತೆ ಕಾಲೇಜಿನಿಂದ ಮನೆಗೆ ಬರುವಾಗಲೂ ಕೆಲಸ ಮಾಡುತ್ತಾಳೆ. ದಿನವೊಂದಕ್ಕೆ 200 ರಿಂದ 300 ರೂಪಾಯಿ ದುಡಿಯುವ ಸಬಿತಾ ಭಾನುವಾರ 600 ರೂಪಾಯಿ ಸಂಪಾದಿಸುತ್ತಾಳೆ. ಈ ಮೂಲಕ ಮನೆಗೆ ಆಸರೆಯಾಗಿದ್ದಾಳೆ.

    ಸಬಿತಾ ತಂದೆ ನರಸಯ್ಯ ತಮ್ಮ ಗ್ರಾಮದ ಹೋಟೆಲ್​ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ತಂದೆ ಸತ್ತ ಬಳಿಕ ಅವರ ತಾಯಿ ಅದೇ ಹೋಟೆಲ್​ನಲ್ಲಿ ಕೆಲಸ ಮಾಡಿಕೊಂಡು ಮಕ್ಕಳನ್ನು ಸಲುಹುತ್ತಿದ್ದರು. ಇನ್ನು ಸಬಿತಾ ಸಮಯ ಸಿಕ್ಕಾಗಲೆಲ್ಲ ಹೋಟೆಲ್​ ಮಾಲೀಕರ ಬಳಿ ಕಾರು ಓಡಿಸುವುದನ್ನು ಕಲಿಯುತ್ತಿದ್ದಾಳೆ. ಮಾಲೀಕರು ಕೂಡ ಅದಕ್ಕೆ ಬೆಂಬಲ ನೀಡುತ್ತಿದ್ದಾರೆ. ಸೆಕೆಂಡ್​ಹ್ಯಾಂಡ್​ ಆಟೋ ಖರೀದಿಸಿರುವ ಸಬಿತಾ ಅಟೋ ಓಡಿಸುತ್ತಾ, ಆಡುವ ವಯಸ್ಸಲ್ಲಿ ಮನೆಯ ಜವಬ್ದಾರಿ ಹೊತ್ತಿದ್ದಾರೆ. ಈಕೆಯ ಕೆಲಸಕ್ಕೆ ಕಾಲೇಜಿನ ಪ್ರಾಧ್ಯಾಪಕರು ಮತ್ತು ಸಹಪಾಠಿಗಳು ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ. ಎಸ್ಸೆಸ್ಸೆಲ್ಸಿಯಲ್ಲಿ ಪ್ರಥಮ ಶ್ರೇಣಿಯಲ್ಲಿ ಸಬಿತಾ ತೇರ್ಗಡೆ ಹೊಂದಿದ್ದಾರೆ. ಅಲ್ಲದೆ, ಕರಾಟೆ ಸಹ ಕಲಿತಿದ್ದಾರೆ. ತಾನು ಚೆನ್ನಾಗಿ ಓದಿ ಸರ್ಕಾರಿ ಕೆಲಸ ತೆಗೆದುಕೊಳ್ಳುವ ಭರವಸೆಯನ್ನು ಸಬಿತಾ ಹೊಂದಿದ್ದಾರೆ. (ಏಜೆನ್ಸೀಸ್​)

    ಸ್ಯಾಂಡಲ್​ವುಡ್​ನಲ್ಲಿ ಸದ್ದು ಮಾಡಿದ್ದ ಮೀಟೂ ಕೇಸ್​ ಮತ್ತೆ ಮುನ್ನೆಲೆಗೆ: ಶ್ರುತಿ ಹರಿಹರನ್​ಗೆ ಪೊಲೀಸರ ಬುಲಾವ್​

    ವರುಣನ ಅಬ್ಬರಕ್ಕೆ ತತ್ತರಿಸಿದ ತಮಿಳುನಾಡು: ಮಳೆ ಹೀಗೆ ಮುಂದುವರಿದ್ರೆ 2015ರ ಪರಿಸ್ಥಿತಿ ಖಚಿತ

    ಪತ್ನಿಯರ ಮೇಲೆ ಹಲ್ಲೆ, ತೆಲಂಗಾಣ ನಂ.1: ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ವರದಿ, ಮೂರನೇ ಸ್ಥಾನದಲ್ಲಿ ಕರ್ನಾಟಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts