More

    ಕೋಟನೂರ ಹಲ್ಲೆ ಪ್ರಕರಣ: ಪ್ರತಿಭಟನೆ ವೇಳೆ ತಳ್ಳಾಟ ಪ್ರಜ್ಞೆ ತಪ್ಪಿದ ಸಂಸದ ಡಾ.ಜಾಧವ್

    ಕಲಬುರಗಿ: ಕೋಟನೂರ ಗ್ರಾಮದಲ್ಲಿ ಲಿಂಗಾಯತ ಸಮುದಾಯದವರ ಮನೆ ಮೇಲೆ ದಾಳಿ ಪ್ರಕರಣ ಸಂಬಂಧ ಗ್ರಾಮದ ಹೆದ್ದಾರಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ವೇಳೆ ಪೊಲೀಸರ ತಳ್ಳಾಟ ನಡೆಸಿದ್ದರಿಂದ ಸಂಸದ ಡಾ.ಉಮೇಶ ಜಾಧವ್ ಪ್ರಜ್ಞೆ ತಪ್ಪಿ ಬಿದ್ದ ಘಟನೆ ನಡೆಯಿತು.

    ಮಂಗಳವಾರ ರಾತ್ರಿ ಕಿಡಿಗೇಡಿಗಳು ಮನೆ ಮೇಲೆ ದಾಳಿ ನಡೆಸಿದ್ದನ್ನು ಖಂಡಿಸಿ, ವೀರಶೈವ ಲಿಂಗಾಯತ ಸಮಾಜದ ಯುವಕರು, ಕೋಟನೂರ ಗ್ರಾಮಸ್ಥರು ಬೃಹತ್ ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಜಾಧವ್ ಅಪರಾಧಿಗಳನ್ನು ಬಂಧಿಸಿ, ಕಠಿಣ ಶಿಕ್ಷೆ ಕೊಡಿಸಬೇಕು ಎಂದು ಆಗ್ರಹಿಸಿದರು.
    ಈ ವೇಳೆ ಸಾರ್ವಜನಿಕರು ಪ್ರತಿಭಟನೆಯನ್ನು ರಾಮ ಮಂದಿರ ವೃತ್ತದಲ್ಲಿ ನಡೆಸಲು ಒತ್ತಡ ಹೇರಿ, ರಾಮ ಮಂದಿರದತ್ತ ಹೊರಟಾಗ ತಡೆ ಹಿಡಿದ ಪೊಲೀಸರು ಸಂಸದ ಡಾ.ಉಮೇಶ ಜಾಧವ್, ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್, ಕೆಕೆಆರ್‌ಡಿಬಿ ಮಾಜಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ, ಪ್ರಮುಖರಾದ ದಯಾನಂದ ಪಾಟೀಲ್, ಮಂಜುನಾಥ ಕಣ್ಣಿ, ಸತೀಶ ಮಾಹೂರ, ಮಾಲಾಶ್ರೀ ಕಣ್ಣಿ, ಕಲ್ಯಾಣಿ ಸೇರಿದಂತೆ ನೂರಾರು ಜನರನ್ನು ಪೊಲೀಸರು ತಡೆದರು.

    ಈ ವೇಳೆ ಪೊಲೀಸರು, ಸಾರ್ವಜನಿಕರ ಮಧ್ಯೆ ನೂಕಾಟ, ತಳ್ಳಾಟ ನಡೆದು ಸಂಸದ ಡಾ.ಉಮೇಶ ಜಾಧವ್ ಪ್ರಜ್ಞೆ ತಪ್ಪಿ ಬಿದ್ದರು. ಕೆಲವು ನಿಮಿಷ ನೀರು ಕುಡಿಸಿ, ಗಾಳಿ ಹಾಕಿದರೂ ಪ್ರಜ್ಞೆಗೆ ಬಾರದೆ ಇರುವುದರಿಂದ ಆಂಬುಲೆನ್ಸ್ ತರಿಸಿ, ಜಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts