More

    ರಾಜಧಾನಿಯಲ್ಲಿ ಏಪ್ರಿಲ್‌ನಲ್ಲಿ ಒಂದು ಹನಿಯೂ ಮಳೆಯಿಲ್ಲ !

    ಬೆಂಗಳೂರು: ರಾಜಧಾನಿ ಬೆಂಗಳೂರಿನ ಇತಿಹಾಸದಲ್ಲಿ ಏಪ್ರಿಲ್ ತಿಂಗಳಿನಲ್ಲಿ ನಾಲ್ಕು ದಶಕದ ಬಳಿಕ ಇದೇ ಮೊದಲ ಬಾರಿಗೆ ಒಂದು ಹನಿಯೂ ಮಳೆ ಬಿದ್ದಿಲ್ಲ. 1983ರ ನಂತರ ಇಂತಹ ಸ್ಥಿತಿ ನಗರ ಸಾಕ್ಷಿಯಾಗಿದ್ದು, ಅಷ್ಟರಮಟ್ಟಿಗೆ ಹಾಲಿ ಬಿಸಿಲಾಘಾತ ಉದ್ಯಾನ ನಗರಿಯನ್ನು ಬಾಧಿಸುತ್ತಿದೆ.

    ನಗರದಲ್ಲಿ ಏಪ್ರಿಲ್‌ನಲ್ಲಿ ಸರಾಸರಿ ಗರಿಷ್ಠ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಆಗಿದೆ. ಇತ್ತೀಚಿನ ವರ್ಷಗಳಲ್ಲಿ 35 ಡಿ.ಗೆ ಏರಿದೆ. ಈ ಬಾರಿ ತೀವ್ರವಾದ ಬರ ಆವರಿಸಿರುವ ಕಾರಣ ಗರಿಷ್ಠ ಉಷ್ಣಾಂಶ ದಾಖಲೆ ಮಟ್ಟಕ್ಕೆ ಏರಿದೆ. ವಿಶೇಷವೆಂದರೆ ಇದೇ ಮೊದಲ ಬಾರಿಗೆ ಏಪ್ರಿಲ್ ಮಾಸದಲ್ಲೇ 8 ದಿನ 38 ಡಿಗ್ರಿ ಸೆ. ದಾಖಲಾಗಿದ್ದು ಇತಿಹಾಸದ ಪುಟ ಸೇರಿದೆ.

    ಇನ್ನು, ಮಳೆ ವಿಚಾರಕ್ಕೆ ಬಂದಲ್ಲಿ ನಗರದ ವಾರ್ಷಿಕ ಮಳೆ ಸರಾಸರಿ 1,077 ಮಿ.ಮೀ. ಆಗಿದ್ದು, ಏಪ್ರಿಲ್ ತಿಂಗಳಿನಲ್ಲಿ 61.7 ಮಿ.ಮೀ. ವಾಡಿಕೆ ಪ್ರಮಾಣದಷ್ಟು ವರ್ಷಧಾರೆ ಆಗಲಿದೆ. 2022ರಲ್ಲಿ ದಾಖಲೆ ಪ್ರಮಾಣದ (134 ಮಿ.ಮೀ.) ಮಳೆಯಾಗಿತ್ತು. 2023ರಲ್ಲಿ ಹೊಂದಿಷ್ಟು ಮಳೆಯಾಗಿತ್ತು. ಆದರೆ, ಈ ವರ್ಷದಲ್ಲಿ ಒಂದು ಹನಿಯೂ ಮಳೆ ಬಿದ್ದಿಲ್ಲ. ಕಳೆದ 3-4 ದಿನಗಳ ಹಿಂದೆ ನಗರದ ಹೊರವಲಯದ ಸೀಮಿತ ಬಡಾವಣೆಗಳಲ್ಲಿ ಮಾತ್ರ ತುಂತುರು ಹನಿ ಬಿದ್ದಿತ್ತಾದರೂ, ಮಳೆ ಮಾಪನದಲ್ಲಿ ದಾಖಲಾಗಿಲ್ಲ.

    ಈ ವರ್ಷ ಮೇ ತಿಂಗಳಿನಲ್ಲಿ ಹೆಚ್ಚು ಮಳೆಯಾಗುವ ಲಕ್ಷಣ ಗೋಚರಿಸುತ್ತಿಲ್ಲ. ನಗರದಲ್ಲಿ ಮಳೆಯ ಪ್ರಮಾಣ ಇಳಿಕೆಯಾಗಲು ಹಸಿರು ಕಣ್ಮರೆಯಾಗುತ್ತಿರುವುದು ಒಂದು ಕಾರಣವಾಗಿದೆ ಎಂದು ಪರಿಸರವಾದಿಗಲು ವಾದ ಮುಂದಿಟ್ಟಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts