More

    ಐಪಿಎಲ್​ ವಿರುದ್ಧ ಗಂಭೀರ ಆರೋಪ ಮಾಡಿ ಅಸಮಾಧಾನ ಹೊರಹಾಕಿದ ವಿಂಡೀಸ್​ ದೈತ್ಯ ಕ್ರಿಸ್​ ಗೇಲ್!

    ನವದೆಹಲಿ: ಪ್ರಸ್ತುತ ನಡೆಯುತ್ತಿರುವ ಇಂಡಿಯನ್​ ಪ್ರೀಮಿಯರ್​ ಲೀಗ್​ (ಐಪಿಎಲ್​)ನಿಂದ ಹೊರಗಡೆ ಉಳಿಯುವ ತನ್ನ ನಿರ್ಧಾರಕ್ಕೆ ಕಾರಣ ಏನೆಂಬುದನ್ನು ತನ್ನನ್ನು ತಾನು ಯೂನಿವರ್ಸಲ್​ ಬಾಸ್ ಎಂದು ಕರೆದುಕೊಂಡಿರುವ ವೆಸ್ಟ್​ಇಂಡೀಸ್​ ದೈತ್ಯ ಕ್ರಿಸ್​ ಗೇಲ್ ತಿಳಿಸಿದ್ದಾರೆ. ಐಪಿಎಲ್​ನಲ್ಲಿ ನನ್ನ ಸರಿಯಾಗಿ ನಡೆಸಿಕೊಳ್ಳಲಿಲ್ಲ ಮತ್ತು ಯಾವುದೇ ಗೌರವವನ್ನು ನೀಡಲಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.

    ಅಂದಹಾಗೆ ಐಪಿಎಲ್​ನಲ್ಲಿ ಹಲವು ದಾಖಲೆಗಳನ್ನು ಬರೆದಿರುವ ಕ್ರಿಸ್​ ಗೇಲ್​ ಸ್ಟಾರ್​ ಆಟಗಾರರಲ್ಲಿ ಒಬ್ಬರು ಎಂದು ಗುರುತಿಸಲಾಗಿದೆ. ಗೇಲ್​ಗೆ ಬೌಲಿಂಗ್​ ಮಾಡಲು ಎಲ್ಲ ಬೌಲರ್​ಗಳು ಎದುರುತ್ತಿದ್ದರು. ಆದರೆ, ಈ ಸೀಸನ್​ನಲ್ಲಿ ಹರಾಜು ಪ್ರಕ್ರಿಯೆಗೆ ಗೇಲ್​ ಪ್ರವೇಶ ನೀಡಲಿಲ್ಲ. ಈಗಾಗಲೇ ಕೊಲ್ಕತ ನೈಟ್​ ರೈಡರ್ಸ್​, ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹಾಗೂ ಪಂಜಾಬ್​ ಕಿಂಗ್ಸ್​ ಪರ ತಮ್ಮ ಅದ್ಭುತ ಬ್ಯಾಟಿಂಗ್​ ಪ್ರದರ್ಶನವನ್ನು ಗೇಲ್​ ನೀಡಿದ್ದಾರೆ. ಶ್ರೇಷ್ಠ ಆಟಗಾರ ಎಂಬ ಹೆಗ್ಗಳಿಕೆ ಗಳಿಸಿದ್ದಾರೆ. ಐಪಿಎಲ್​ನಲ್ಲಿ ಗೇಲ್​ 6 ಶತಕಗಳನ್ನು ಬಾರಿಸಿದ್ದು, 142 ಪಂದ್ಯಗಳಲ್ಲಿ 4965 ರನ್​ ಗಳಿಸುವ ಮೂಲಕ ಹೆಚ್ಚು ರನ್​ ಕಲೆಹಾಕಿದ 7ನೇ ಆಟಗಾರನೆಂಬ ಖ್ಯಾತಿ ಗಳಿಸಿದ್ದಾರೆ.

    ಇಷ್ಟೆಲ್ಲ ಸಾಧನೆ ಮಾಡಿರುವ ಗೇಲ್​ ಕಳೆದ ಕೆಲವು ವರ್ಷಗಳಿಂದ ಐಪಿಎಲ್​ನಿಂದ ದೂರ ಉಳಿದಿದ್ದು, ಈ ಬಗ್ಗೆ ಮಾತನಾಡಿರುವ ಗೇಲ್​, ನನ್ನನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂಬ ನೋವು ಕಾಡುತ್ತಿದೆ ಎಂದು ಮಾಧ್ಯಮ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

    ಕ್ರೀಡೆ ಮತ್ತು ಐಪಿಎಲ್‌ಗಾಗಿ ಸಾಕಷ್ಟು ಶ್ರಮಿಸಿದರೂ ನನಗೆ ಅರ್ಹವಾದ ಗೌರವ ಸಿಗಲಿಲ್ಲ ಎಂದು ನಾನು ಭಾವಿಸಿದೆ. ಎಲ್ಲವೂ ಓಕೆ ಎಂಬ ಭಾವನೆಯಲ್ಲಿ ಸುಮ್ಮನಾಗಿದ್ದೇನೆ. ನಾನು ಮತ್ತೆ ಪ್ರವೇಶಿಸಲು ಚಿಂತಿಸುವುದಿಲ್ಲ. ಕ್ರಿಕೆಟ್ ನಂತರದ ಜೀವನ ಯಾವಾಗಲೂ ಇದ್ದೇ ಇರುತ್ತದೆ. ಹಾಗಾಗಿ ನಾನು ಸಾಮಾನ್ಯತೆಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ ಎಂದಿದ್ದಾರೆ.

    ಗೇಲ್ ಕೊನೆಯದಾಗಿ ವೆಸ್ಟ್ ಇಂಡೀಸ್ ತಂಡಕ್ಕಾಗಿ 2021ರಲ್ಲಿ ನಡೆದ ಐಸಿಸಿ ಪುರುಷರ T20 ವಿಶ್ವಕಪ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಬುಧಾಬಿಯಲ್ಲಿ ನಡೆದ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದಾರೆ. ಇದಲ್ಲದೆ, ಅವರು ಕೊನೆಯ ಬಾರಿಗೆ ಫೆಬ್ರವರಿ 18 ರಂದು ಬಾಂಗ್ಲಾದೇಶ ಪ್ರೀಮಿಯರ್ ಲೀಗ್ (BPL) 2022 ನಲ್ಲಿ T20 ಕ್ರಿಕೆಟ್ ಆಡಿದ್ದಾರೆ. ಸದ್ಯ ಕ್ರೀಡೆಯಿಂದ ಹೊರಗುಳಿದಿದ್ದು, ಬೇಸರ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

    ನಯನತಾರಾ-ವಿಘ್ನೇಶ್​ ಶಿವನ್​ ಮದುವೆ ದಿನಾಂಕ ಫಿಕ್ಸ್​: ಇಬ್ಬರಿಗೂ ಇಷ್ಟವಾದ ಸ್ಥಳದಲ್ಲೇ ವಿವಾಹ!

    ಡಿಎಂಕೆ ಸರ್ಕಾರಕ್ಕೆ 1 ವರ್ಷ: ಸರ್ಕಾರಿ ಬಸ್​ ಏರಿ ಸರ್ಪ್ರೈಸ್​ ಕೊಟ್ಟ ತಮಿಳುನಾಡು ಸಿಎಂ ಸ್ಟಾಲಿನ್​!

    ಮುಂಬರುವ ಚುನಾವಣೆಯಲ್ಲಿ ಮೈಸೂರು ಭಾಗದಲ್ಲಿ ಇತಿಹಾಸ ಸೃಷ್ಟಿಯಾಗಲಿದೆ, ಸ್ಪರ್ಧಿಸಲು ಅಭಿಲಾಷೆಯೂ ಇದೆ: ಬಿ. ವೈ. ವಿಜಯೇಂದ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts