More

    ಸೇನಾ ಹೆಲಿಕಾಪ್ಟರ್​ ಪತನ: ಹುತಾತ್ಮರಿಗೆ ಮದ್ರಾಸ್ ರೆಜಿಮೆಂಟ್ ಸೆಂಟರ್​ನಲ್ಲಿ ಗೌರವ ವಂದನೆ

    ಚೆನ್ನೈ: ನಿನ್ನೆ (ಡಿ.8) ತಮಿಳುನಾಡಿನ ಕೂನೂರಿನಲ್ಲಿ ಸಂಭವಿಸಿದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾದ ಸೇನಾ ಮುಖ್ಯಸ್ಥ ಬಿಪಿನ್​ ರಾವತ್​ ಮತ್ತು ಅವರ ಪತ್ನಿ ಸೇರಿದಂತೆ ಸಿಬ್ಬಂದಿಯ ಪಾರ್ಥೀವ ಶರೀರಗಳನ್ನು ಮದ್ರಾಸ್​ ರೆಜಿಮೆಂಟ್​ ಸೆಂಟರ್​ಗೆ ಸ್ಥಳಾಂತರಿಸಲಾಗಿದ್ದು, ಗೌರವ ವಂದನೆಗಳನ್ನು ಸಲ್ಲಿಸಲಾಗಿದೆ.

    ನೀಲಗಿರಿ ಜಿಲ್ಲೆಯ ವೆಲ್ಲಿಂಗ್ಟನ್ ಮಿಲಿಟರಿ ಆಸ್ಪತ್ರೆಯಿಂದ ಮದ್ರಾಸ್ ರೆಜಿಮೆಂಟ್ ಸೆಂಟರ್‌ಗೆ 13 ಪಾರ್ಥೀವ ಶರೀರಗಳನ್ನು ಪುಷ್ಪಾಲಂಕೃತ ವಾಹನಗಳಲ್ಲಿ ಸ್ಥಳಾಂತರಿಸಲಾಗಿದೆ. ಗೌರವ ವಂದನೆಗಾಗಿ ವಿವಿಧ ತುಕಡಿಗಳ ಪಥ ಸಂಚಲನದೊಂದಿಗೆ ಪಾರ್ಥೀವ ಶರೀರಗಳನ್ನು ಸ್ಥಳಾಂತರ ಮಾಡಲಾಯಿತು.

    ಮದ್ರಾಸ್ ರೆಜಿಮೆಂಟ್ ಸೆಂಟರ್​ನಲ್ಲಿ ತಮಿಳುನಾಡು ಸಿಎಂ ಸ್ಟಾಲಿನ್, ಸೇನಾಧಿಕಾರಿಗಳು ಹಾಗೂ ಗಣ್ಯರು ಗೌರವ ವಂದನೆ ಸಲ್ಲಿಸಿದರು.

    ಗೌರವ ವಂದನೆ ಬಳಿಕ ರಸ್ತೆ ಮಾರ್ಗವಾಗಿ ಪಾರ್ಥೀವ ಶರೀರಗಳನ್ನು ಸೂಳೂರು ಏರ್‌ಬೇಸ್​ಗೆ ರವಾನಿಸಿ, ಅಲ್ಲಿಂದ ದೆಹಲಿಗೆ ರವಾನಿಸಲಾಗುತ್ತದೆ. ಇಂದು ಮಧ್ಯಾಹ್ನದ ಮಧ್ಯಾಹ್ನದ ಹೊತ್ತಿಗೆ ಏರ್‌ಲಿಫ್ಟ್ ಮಾಡುವ ಸಾಧ್ಯತೆ ಇದೆ. ದೆಹಲಿ ಪ್ರಧಾನಿ ಮೋದಿ ಸೇರಿದಂತೆ ಪ್ರಮುಖ ನಾಯಕರು ಅಂತಿಮ ದರ್ಶನ ಪಡೆಯಲಿದ್ದು, ಸೇನಾ ಗೌರವದೊಂದಿಗೆ ನಾಳೆ ಹುತಾತ್ಮತರ ಅಂತಿಮ ಕ್ರಿಯೆ ನಡೆಯಲಿದೆ. (ಏಜೆನ್ಸೀಸ್​)

    2015ರಲ್ಲಿ ರಾವತ್‌ ಬಳಿ ಸುಳಿದುಹೋಗಿದ್ದ ಜವರಾಯ! ಕೂದಲೆಳೆ ಅಂತರದಲ್ಲಿ ಪಾರಾಗಿದ್ದ ಜನರಲ್‌…

    ಸೇನಾ ಹೆಲಿಕಾಪ್ಟರ್​ ಪತನ: ಸೇನಾ ಮುಖ್ಯಸ್ಥರಿದ್ದ ಕಾಪ್ಟರ್​ ಪತನಕ್ಕೂ ಮುನ್ನ ಕೊನೇ ದೃಶ್ಯ ಲಭ್ಯ

    ಹೆಲಿಕಾಪ್ಟರ್​​ ಪತನದ ವೈರಲ್​ ವಿಡಿಯೋಗೂ ಸೇನಾ ಮುಖ್ಯಸ್ಥರಿದ್ದ ಕಾಪ್ಟರ್​​ ಪತನಕ್ಕೂ ಸಂಬಂಧವಿಲ್ಲ: ನಿಜಾಂಶ ಇಲ್ಲಿದೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts