More

    ಟಿಕೆಟ್ ಪಡೆಯದೇ ಬಿಎಂಟಿಸಿಯಲ್ಲಿ 2 ಸಾವಿರ ಜನರ ಪ್ರಯಾಣ: ಪ್ರಯಾಣಿಕರನ್ನು ಪತ್ತೆ ಹಚ್ಚಿ ದಂಡ ವಸೂಲಿ

    ಬೆಂಗಳೂರು: ಬಿಎಂಟಿಸಿನಲ್ಲಿ ಟಿಕೆಟ್ ಪಡೆಯದೇ ಪ್ರಯಾಣಿಸುತ್ತಿದ್ದ 2031 ಪ್ರಯಾಣಿಕರನ್ನು ಪತ್ತೆ ಹಚ್ಚಿ ಅವರಿಂದ 3.39 ಲಕ್ಷ ರೂ.ದಂಡ ವಸೂಲಿ ಮಾಡಿದೆ.

    ಬಿಎಂಟಿಸಿಯು ಆಕ್ಟೋಬರ್ ತಿಂಗಳಲ್ಲಿ 14,233 ಟ್ರಿಪ್‌ಗಳನ್ನು ತಪಾಸಣೆ ನಡೆಸಿ 2031 ಪ್ರಯಾಣಿಕರು ಟಿಕೆಟ್ ಪಡೆಯದೆ, ಪ್ರಯಾಣಿಸುತ್ತಿದ್ದವರನ್ನು ಪತ್ತೆ ಹಚ್ಚಿದೆ. ಇವರಿಂದ 3,39,100 ರೂ.ದಂಡ ವಸೂಲಿ ಮಾಡಿ, 1295 ಬಿಟಿಎಂಸಿ ನಿರ್ವಾಹಕರ ವಿರುದ್ಧ ಪ್ರಕರಣವನ್ನು ದಾಖಲಿಸಿದೆ. ಇದು ಮಾತ್ರವಲ್ಲದೆ, 172 ಪುರುಷರು ಮಹಿಳಾ ಪ್ರಯಾಣಿಕರ ಆಸನದಲ್ಲಿ ಕುಳಿತ ಪರಿಣಾಮ ಇವರಿಗೂ ದಂಡ ವಿಧಿಸಿರುವ ಸಂಸ್ಥೆಯು ಇವರಿಂದ 17,200 ರೂ.ಗಳನ್ನು ವಸೂಲಿ ಮಾಡಿದೆ. ಒಟ್ಟಾರೆ 3.56 ಲಕ್ಷ ರೂ. ದಂಡದಿಂದ ವಸೂಲಾಗಿದೆ.

    ಪ್ರಯಾಣಿಕರು ಪ್ರಯಾಣಿಸುವಾಗ ಅಧಿಕೃತ ಟಿಕೆಟ್ ಪಡೆಯಬೇಕು. ಇದರಿಂದ ಅನಗತ್ಯ ದಂಡ ಕಟ್ಟುವುದು ತಡೆಯಬಹುದಾಗಿದೆ. ಅಲ್ಲದೆ, ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಾಗಿರುವ ಆಸನಗಳಲ್ಲಿ ಪುರುಷ ಪ್ರಯಾಣಿಕರು ಆಸನಗಳನ್ನು ತೆರವು ಮಾಡಿಕೊಡುವ ಮೂಲಕ ಅವರಿಗೆ ಕುಳಿತುಕೊಳ್ಳಲು ಅವಕಾಶ ನೀಡಬೇಕೆಂದು ಸಂಸ್ಥೆಯು ಪ್ರಯಾಣಿಕರಿಗೆ ಸೂಚಿಸಿದೆ.

    ಭಾರತೀಯ ಚಿತ್ರರಂಗಕ್ಕೆ ಮತ್ತೊಂದು ಆಘಾತ: ಪ್ರಖ್ಯಾತ ನಿರ್ದೇಶಕ, ನಟ ಆರ್​ಎನ್​ಆರ್​ ಮನೋಹರ್​ ಇನ್ನಿಲ್ಲ

    ಭಿಕ್ಷಾಟನೆಗೆ ಶಿಶು ದಂಧೆ; ಪಾಳಿಯಲ್ಲಿ ಬಾಡಿಗೆಗೆ ಲಭ್ಯ, ಗಣಿ ಜಿಲ್ಲೆಯಲ್ಲಿ ಅಮಾನವೀಯ ಚಿತ್ರಣ

    ಡಿವೋರ್ಸ್​ ಬಳಿಕ ನಟಿ ಅಮಲಾ ಪೌಲ್​ ಹಾದಿಯನ್ನೇ ಅನುಸರಿಸಿದ ನಟಿ ಸಮಂತಾ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts