More

    ಬಿಗ್​​ಬಾಸ್​ ಸೀಸನ್​ 8ರ ಟ್ರೋಫಿಗೆ ಮುತ್ತಿಟ್ಟ ಲ್ಯಾಗ್​ ಮಂಜು: ಅರವಿಂದ್​ ಕೆಪಿ ರನ್ನರ್​ಅಪ್​..!

    ಬೆಂಗಳೂರು: ಮಹಾಮಾರಿ ಕರೊನಾ ಲಾಕ್​ಡೌನ್​ನಿಂದ 75 ದಿನಗಳಿಗೆ ಮೊಟಕುಗೊಂಡು ಮತ್ತೆ ಎರಡನೇ ಇನ್ನಿಂಗ್ಸ್​ ಆರಂಭಿಸುವ ಮೂಲಕ ರಿಯಾಲಿಟಿ ಶೋ ಇತಿಹಾಸದಲ್ಲೇ ದಾಖಲೆ ಬರೆದ ಬಿಗ್​ಬಾಸ್​ 8ನೇ ಆವೃತ್ತಿಗೆ ವರ್ಣರಂಜಿತ ತೆರೆಬಿದ್ದಿದ್ದು, ಮಜಾಭಾರತದ ಲ್ಯಾಗ್​ ಮಂಜು ಖ್ಯಾತಿಯ ಮಂಜು ಪಾವಗಡ ವಿನ್ನರ್​ ಆಗಿ ಹೊರಹೊಮ್ಮಿದ್ದಾರೆ. ಅರವಿಂದ್​ ಕೆಪಿ ರನ್ನರ್​ ಅಪ್​ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

    ಬಹುತೇಕರ ಲೆಕ್ಕಾಚಾರದಂತೆಯೇ ಮಂಜು ಪಾವಗಡ 8ನೇ ಸೀಸನ್​ ವಿನ್ನರ್​ ಆಗಿ ಹೊರಹೊಮ್ಮಿದ್ದು, ಅರವಿಂದ್​ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ದಿವ್ಯಾ ನಿರೀಕ್ಷೆಯಂತೆ ಮೂರನೇ ಸ್ಥಾನದೊಂದಿಗೆ ಕೊನೆಯ ಎಲಿಮಿನೇಷನ್​ ಸುತ್ತಿನಲ್ಲಿ ಮನೆಯಿಂದ ಹೊರಬಂದರು.

    ಕೊನೆಯಲ್ಲಿ ಉಳಿದಿದ್ದ ಐವರು ಫೈನಲಿಸ್ಟ್​ಗಳಲ್ಲಿ ಶನಿವಾರ ಮೊದಲಿಗರಾಗಿ ಪ್ರಶಾಂತ್​ ಸಂಬರಗಿ ಮನೆಯಿಂದ ಹೊರಬಂದರು. ಅದರ ಬೆನ್ನಲ್ಲೇ ವೈಷ್ಣವಿ ಗೌಡ ಮನೆಯಿಂದ ಹೊರಬರುವ ಮೂಲಕ ಶನಿವಾರದ ಗ್ರ್ಯಾಂಡ್​ ಫಿನಾಲೆ ಮೊದಲನೇ ಎಪಿಸೋಡ್​ ಅಂತ್ಯವಾಯಿತು. ಭಾನುವಾರ ನಡೆದ ಎರಡನೇ ಫಿನಾಲೆ ಹಾಗೂ ಅಂತಿಮ ಎಪಿಸೋಡ್​​ನಲ್ಲಿ ದಿವ್ಯಾ ಉರುಡುಗ ಹೊರಬಿದ್ದರು. ಕೊನೆಯಲ್ಲಿ ಮಂಜು ಮತ್ತು ಅರವಿಂದ್​ ಮನೆಯಲ್ಲಿ ಉಳಿದುಕೊಂಡರು.

    ಎಂದಿನಂತೆ ಕೊನೆಯಲ್ಲಿ ಬಿಗ್​ಬಾಸ್​ ಮನೆಯೊಳಗೆ ತೆರಳಿದ ನಟ ಸುದೀಪ್​ ಮಂಜು ಮತ್ತು ಅರವಿಂದ್​ರನ್ನು ಬಿಗ್​ಬಾಸ್​ ವೇದಿಕೆ ಮೇಲೆ ಕರೆತಂದರು. ಪ್ರಶಸ್ತಿ ಘೋಷಣೆ ಸುತ್ತಿನಲ್ಲಿ ಮಂಜು ಪಾವಗಡ ಕೈಯನ್ನು ಮೇಲಕ್ಕೆ ಎತ್ತುವ ಮೂಲಕ ವಿಜೇತ ಯಾರೆಂಬುದನ್ನು ನಟ ಸುದೀಪ್​ ಅಧಿಕೃತಗೊಳಿಸಿದರು. ಇದರೊಂದಿಗೆ ಬಿಗ್​ಬಾಸ್​ ಸೀಸನ್​ 8ಕ್ಕೆ ವರ್ಣರಂಜಿತ ತೆರೆಬಿದ್ದಿತು.

    ಈ ಹಿಂದಿನ ಸೀಸನ್​ ವಿನ್ನರ್ಸ್​ ಮತ್ತು ರನ್ನರ್​ ಅಪ್​
    ಮೊದಲನೇ ಸೀಸನ್: ವಿಜಯ ರಾಘವೇಂದ್ರ (ವಿನ್ನರ್​), ಅರುಣ್​ ಸಾಗರ್​ (ರನ್ನರ್​ ಅಪ್​)
    ಎರಡನೇ ಸೀಸನ್​: ಅಕುಲ್​ ಬಾಲಾಜಿ (ವಿನ್ನರ್​), ಸೃಜನ್​ ಲೋಕೇಶ್​ (ರನ್ನರ್​ ಅಪ್​)
    ಮೂರನೇ ಸೀಸನ್​: ಶ್ರುತಿ (ವಿನ್ನರ್​), ಚಂದನ್​ ಕುಮಾರ್​ (ರನ್ನರ್​ ಅಪ್​)
    ನಾಲ್ಕನೇ ಸೀಸನ್: ​ಪ್ರಥಮ್​ (ವಿನ್ನರ್​), ಕಿರಿಕ್​ ಕೀರ್ತಿ (ರನ್ನರ್​ ಅಪ್​)
    ಐದನೇ ಸೀಸನ್​: ಚಂದನ್​ ಶೆಟ್ಟಿ (ವಿನ್ನರ್​), ದಿವಾಕರ್​ (ರನ್ನರ್​ ಅಪ್​)
    ಆರನೇ ಸೀಸನ್​: ಶಶಿಕುಮಾರ್​ (ವಿನ್ನರ್​), ನವೀನ್​ ಸಜ್ಜು (ರನ್ನರ್​ ಅಪ್​)
    ಏಳನೇ ಸೀಸನ್​: ಶೈನ್​ ಶೆಟ್ಟಿ (ವಿನ್ನರ್​), ಕುರಿ ಪ್ರತಾಪ್​ (ರನ್ನರ್​ ಅಪ್​)

    ಅಂತಿಮ ಹಂತಕ್ಕೆ ಬಂದ ಕೂಡಲೇ ಬದಲಾಯ್ತ ನಿಮ್ಮ ವರಸೆ?! ಸುದೀಪ್​ ವಿರುದ್ಧ ಅರವಿಯಾ ಅಭಿಮಾನಿಗಳು ಗರಂ

    ನಟಿಯ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಬೆತ್ತಲೆ ಫೋಟೋಗಳು! ಕರೆ ಮಾಡಿ ಶಾಕಿಂಗ್​ ವಿಚಾರ ಬಿಚ್ಚಿಟ್ಟ ಅನಾಮಿಕ

    ಸರಳತೆಯ ಪಾಠ ಕರೊನಾಕ್ಕೆ ಸೀಮಿತವಾಗದಿರಲಿ: ವಿಜಯವಾಣಿ ಸೆಲೆಬ್ರಿಟಿ ಕಾರ್ನರ್​ನಲ್ಲಿ ಮೇಘನಾ ಗಾಂವ್ಕರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts