More

    ಯುವತಿಯ ಸೌಂದರ್ಯಕ್ಕೆ ಸೋತು ಬೆತ್ತಲಾದವನಿಗೆ ನಂತರ ಎದುರಾಗಿದ್ದು ಸಂಕಷ್ಟಗಳ ಸರಮಾಲೆ

    ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಅಪರಿಚಿತರ ಸ್ನೇಹ ಬೆಳೆಸುವಾಗ ತುಂಬಾ ಎಚ್ಚರಿಕೆ ವಹಿಸಬೇಕು. ಇಲ್ಲವಾದಲ್ಲಿ ಹಣದ ಜೊತೆ ಮಾನ-ಮರ್ಯಾದೆಯನ್ನು ಕಳೆದುಕೊಳ್ಳಬೇಕಾಗುತ್ತದೆ. ಅದರಲ್ಲೂ ಕೆಲ ಯುವತಿಯರ ಸೌಂದರ್ಯಕ್ಕೆ ಮರುಳಾಗಿ ಅವರ ಬಲೆ ಬಿದ್ದರಂತೂ ಅದರಿಂದ ಹೊರಬರಲು ಹೆಣಗಾಡಬೇಕಾಗುತ್ತದೆ ಎಂಬುದಕ್ಕೆ ಈ ಘಟನೆಯೇ ತಾಜಾ ಉದಾಹರಣೆಯಾಗಿದೆ.

    ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಯುವವತಿಯ ಹಿಂದೆ ಬಿದ್ದ ವ್ಯಕ್ತಿಯೊಬ್ಬ ಹಣ ಕಳೆದುಕೊಂಡು ಪರದಾಡುತ್ತಿರುವ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ. ಯುವತಿ ಸುಂದರವಾಗಿರುವುದನ್ನು ನೋಡಿ ಮರುಳಾದ ಸಂತ್ರಸ್ತ ಆಕೆಯೊಂದಿಗೆ ಚಾಟಿಂಗ್​ ಆರಂಭಿಸಿದ್ದಾನೆ. ವಿಡಿಯೋ ಕಾಲ್​ ಸಹ ಮಾಡಿದ್ದಾನೆ.

    ಇಬ್ಬರ ನಡುವೆ ತುಂಬಾ ಸಲುಗೆ ಬೆಳೆದಾಗ ಯುವತಿಯೊಂದಿಗೆ ಸಂತ್ರಸ್ತ ವ್ಯಕ್ತಿ ಅಶ್ಲೀಲ ವಿಡಿಯೋ ಕಾಲ್​ ಸಹ ಮಾಡಿದ್ದಾನೆ. ಆದರೆ, ಆಕೆ ವಿಡಿಯೋವನ್ನು ರೆಕಾರ್ಡ್​ ಮಾಡಿಕೊಂಡಿರುವುದು ಆತನಿಗೆ ಗೊತ್ತೇ ಇಲ್ಲ. ಯುವತಿಯ ಸೌಂದರ್ಯಕ್ಕೆ ಮರುಳಾಗಿ ಬೆತ್ತಲಾದ ಸಂತ್ರಸ್ತನಿಗೆ ನಂತರ ಎದುರಾಗಿದ್ದು, ಸಂಕಷ್ಟಗಳ ಸರಮಾಲೆ.

    ವಿಡಿಯೋ ರೆಕಾರ್ಡ್​ ಮಾಡಿಕೊಂಡಿದ್ದ ಯುವತಿ, ವಿಡಿಯೋ ಲೀಕ್ ಮಾಡುವುದಾಗಿ ಹೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಳು. ಸಾಕಷ್ಟು ಹಣ ನೀಡಿದ್ದ ಸಂತ್ರಸ್ತ ಒಂದು ಹಂತದಲ್ಲಿ ಹಣ ಕೊಡಲು ನಿರಾಕರಿಸಿದ್ದಕ್ಕೆ ಆಕೆಯ ಜೊತೆಗಿದ್ದ ಸೈಬರ್​ ಖದೀಮರು ಹಿಡಿದಿದ್ದು ಮಾತ್ರ ಬೇರೆ ದಾರಿ. ವಿಡಿಯೋ ಕಾಲ್ ಮಾಡಿದ್ದ ಸುಂದರಿ ಸಾವಿಗೀಡಾಗಿದ್ದಾಳೆ ಅನ್ನೋ ಕತೆ ಕಟ್ಟಿದರು.

    ಯುವತಿಯ ಸಾವಿಗೆ ನೀನೆ ಕಾರಣ ಅಂತ ಕರೆ ಮಾಡಲು ಆರಂಭಿಸಿದರು. ಅಲ್ಲದೆ, ಸಿಬಿಐನಲ್ಲಿ ಪ್ರಕರಣ ದಾಖಲಾಗಿದೆ ಅಂತಾ ಸುಳ್ಳು ಹೇಳಿದರು. ಗೂಗಲ್​ನಲ್ಲಿ ಸಿಗುವ ಸಿಬಿಐನಲ್ಲಿ ದಾಖಲಾಗಿರುವ ಪ್ರಕರಣಗಳ ಲಿಸ್ಟ್ ತೆಗೆದು ಅದರಲ್ಲಿ ದೂರುದಾರನ ಹೆಸರು ಹಾಕಿ, ಅದನ್ನು ತೋರಿಸಿ ವಿಚಾರಣೆಗೆ ಬರುವಂತೆ ಹೇಳಿ ಹಂತ ಹಂತವಾಗಿ ಸಂತ್ರಸ್ತನಿಂದ 5 ಲಕ್ಷ ರೂಪಾಯಿಗು ಅಧಿಕ ಹಣ ವಸೂಲಿ ಮಾಡಿದ್ದಾರೆ.

    ನಿರಂತರ ಕಿರುಕುಳದಿಂದ ಬೇಸತ್ತ ಸಂತ್ರಸ್ತ ಕಡೆಗೆ ಸ್ನೇಹಿತರೊಬ್ಬರಿಗೆ ನಡೆದ ವಿಷಯವನ್ನೆಲ್ಲ ತಿಳಿಸಿ, ಆಗ್ನೇಯ ವಿಭಾಗದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಲಕ್ಷ ಲಕ್ಷ ಪೀಕಿರುವ ಸುಂದರಿ ಹಾಗೂ ಆಕೆಯ ಗ್ಯಾಂಗ್​ಗಾಗಿ ಬಲೆ ಬೀಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ತಂದೆ ಗಿಫ್ಟ್​​ ಮಾಡಿದ್ದ ಡೈಮಂಡ್​ ರಿಂಗ್​ ಕೊಟ್ಟು ತಂದೆಯನ್ನೇ ಕೊಲ್ಲಿಸಿದ ಪುತ್ರಿ: ಉದ್ಯಮಿ ಕೊಲೆ ರಹಸ್ಯ ಬಯಲು

    ಆಫೀಸ್​ ಮೀಟಿಂಗ್ ಎಂದು ಲವರ್ ಜತೆ ಮಾಲ್ಡೀವ್ಸ್​ಗೆ: ಪತ್ನಿಯಿಂದ ತಪ್ಪಿಸಿಕೊಳ್ಳಲು ಹೋಗಿ ಜೈಲಲ್ಲಿ ಇಂಜಿನಿಯರ್​!

    SSLC ಪರೀಕ್ಷೆಯಲ್ಲಿ ಛತ್ತೀಸ್​ಗಢದ IAS ಅಧಿಕಾರಿ ಪಡೆದಿರುವ ಒಟ್ಟು ಅಂಕ​ ನೋಡಿದ್ರೆ ಹುಬ್ಬೇರೋದು ಖಚಿತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts