More

  ‘ಸಿದ್ದರಾಮಯ್ಯನವರೇ ಪಕ್ಕದ ಮನೆಯ ಧರ್ಮಪತ್ನಿಗೆ ಪತ್ರ ಬರೆಯುತ್ತೀರಾ? ಇದು ಅಪರಾಧ ಅಲ್ವಾ?’

  ಬೆಂಗಳೂರು: ರಾಜ್ಯಸಭಾ ಚುನಾವಣೆಯ ಮತದಾನ ಆರಂಭವಾಗಿದ್ದು, ಕಾಂಗ್ರೆಸ್​ ಮತ್ತು ಜೆಡಿಎಸ್​ ನಡುವಿನ ಪೈಪೋಟಿ ಎಲ್ಲರಲ್ಲಿ ಕುತೂಹಲ ಮೂಡಿಸಿದೆ. ಇದರ ನಡುವೆ ಜೆಡಿಎಸ್​ ನಾಯಕ ಸಿಎಂ ಇಬ್ರಾಹಿಂ, ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.

  ಮಾಧ್ಯಮದವರ ಜತೆ ಮಾತನಾಡಿದ ಸಿಎಂ ಇಬ್ರಾಹಿಂ, ಬೇರೆಯವರು ತಾಳಿ ಕಟ್ಟುವವರಿಗೆ ಲವ್ ಲೆಟರ್ ಬರೆದ್ರೇ ಆಗುತ್ತಾ‌? ಪಕ್ಕದ ಮನೆಯ ಧರ್ಮಪತ್ನಿಗೆ ಪತ್ರ ಬರೆಯುತ್ತೀರಾ? ಇದು ಅಪರಾಧ ಅಲ್ವಾ? ಇದು ನೈತಿಕತೆಯಾ? ಎಂದು ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

  ಕರ್ನಾಟಕದಲ್ಲಿ ಹೊಸ ಇತಿಹಾಸ ಶುರುವಾಗುತ್ತದೆ. ಬಿಜೆಪಿನಾ ಸೋಲಿಸಲೇಬೇಕು ಅಂತಿದ್ರೆ ಮೊದಲ ಪ್ರಾಶಸ್ತ್ಯ ಮತ ನಿಮಗೆ ಹಾಕೊಂಡು ಎರಡನೇ ಪ್ರಾಶಸ್ತ್ಯ ಮತ ನಮಗೆ ಕೊಡಿ. ಆದರೆ, ಅದನ್ನು ಕೊಡೋಕೆ ನೀವು ತಯಾರಿಲ್ಲ. ಎರಡನೇ ಮತ ಕೊಡುವುದಕ್ಕೆ ನಾವು ತಯಾರಿದ್ದೇವೆ ಎಂದು ಇಬ್ರಾಹಿಂ ಹೇಳಿದರು.

  ಹಿಂದಿನ ಚರಿತ್ರೆ ಇದೆ ನಂಗೆ ಗೊತ್ತಿದೆ. ನಮ್ಮನ್ನು ಪೀಡಿಸಬೇಡಿ ನಮ್ಮ ಪಾಡಿಗೆ ನಮ್ಮನ್ನು ಬಿಡಿ. ನಾವು ಬಿಚ್ಚೋಕೆ ಶುರುಮಾಡಿದ್ರೇ ನಿಮಗೆ ಓಡಾಡೋಕೆ ಕಷ್ಟ ಆಗುತ್ತದೆ ಎಂದು ಸಿದ್ದರಾಮಯ್ಯಗೆ ಸಿಎಂ ಇಬ್ರಾಹಿಂ ಎಚ್ಚರಿಕೆ ನೀಡಿದರು. (ದಿಗ್ವಿಜಯ ನ್ಯೂಸ್​)

  ಈ ಯುವತಿ ತನ್ನನ್ನು ತಾನೇ ಮದ್ವೆಯಾಗಿದ್ದರ ಹಿಂದಿನ ಉದ್ದೇಶ ಇದೇನಾ? ಅನುಮಾನಕ್ಕೆ ಪುಷ್ಟಿ ನೀಡಿದ ಅಂಶವಿದು!

  ಸ್ವಿಮ್ಮಿಂಗ್​ ಪೂಲ್​ ಒಳಗೆ ನೂಕಿದ ಮ್ಯಾನೇಜರ್​ಗೆ ಚಪ್ಪಲಿ ಏಟು ಕೊಟ್ಟ ನಟಿ ಸನ್ನಿ ಲಿಯೋನ್​! ವಿಡಿಯೋ ವೈರಲ್​

  ವಿಮಾನ ಸಿಬ್ಬಂದಿಯೊಬ್ಬರಿಂದ ಅಸಭ್ಯ ವರ್ತನೆ: ಟ್ವೀಟ್​ ಮೂಲಕ ನೋವು ಬಿಚ್ಚಿಟ್ಟ ನಟಿ ಪೂಜಾ ಹೆಗ್ಡೆ

  See also  ಮಸ್ಟರಿಂಗ್ ಕೇಂದ್ರಕ್ಕೆ 3 ಸುತ್ತಿನ ಭದ್ರತೆ : ಪ್ಯಾರಾ ಮಿಲಿಟರಿ, ಪೊಲೀಸರಿಂದ ಕಾವಲು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts