More

    ಈಜಿಪ್ಟ್, ಮಾಲ್ಡೀವ್ಸ್, ದುಬೈ ಸುತ್ತಾಡಿ ನೇಪಾಳದಲ್ಲಿ ಅಡಗಿದ್ದ ಮೋಸ್ಟ್​ ವಾಂಟೆಡ್ ವಂಚಕ ಮುಂಬೈನಲ್ಲಿ ಸೆರೆ

    ಬೆಳಗಾವಿ: ಸಿಮೆಂಟ್ ಹಾಗೂ ಸ್ಟೀಲ್ ದಂಧೆಯಲ್ಲಿ ಹೆಚ್ಚಿನ ಲಾಭ ಬರುತ್ತದೆ ಎಂದು ನಂಬಿಸಿ, ನೂರಾರು ಕೋಟಿ ವಂಚನೆ ಮಾಡಿದ್ದ ಮೋಸ್ಟ್ ವಾಂಟೆಡ್‌ ವಂಚಕನನ್ನು ಬೆಳಗಾವಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

    ಶಿವಾನಂದ ಕುಂಬಾರ ಬಂಧಿತ ವಂಚಕ. ಈತ ಕರ್ನಾಟಕ ಹಾಗೂ ಮಹಾರಾಷ್ಟ್ರ ಪೊಲೀಸರಿಗೆ ಬೇಕಾಗಿದ್ದ ವಂಚಕ. ಈಜಿಪ್ಟ್, ಮಾಲ್ಡೀವ್ಸ್, ದುಬೈ ಸುತ್ತಾಡಿ ನೇಪಾಳದಲ್ಲಿ ಅಡಗಿದ್ದ ವಂಚಕ ಮುಂಬೈನಲ್ಲಿ ಸೆರೆಯಾಗಿದ್ದಾನೆ.

    ನೇಪಾಳ ಪೊಲೀಸರನ್ನು, ಇಂಟರ್‌ಪೋಲ್ ಹಾಗೂ ಧೂತಾವಾಸ ಕಚೇರಿ ಮೂಲಕ ಬೆಳಗಾವಿ ಪೊಲೀಸರು ಸಂಪರ್ಕಿಸಿದ್ದರು. ಈ ವೇಳೆ ಹಣಕಾಸಿನ ಅವಶ್ಯಕತೆಗೆ ಆರೋಪಿ ಮುಂಬೈಗೆ ಬರುವ ಮಾಹಿತಿ ಸಿಕ್ಕಿತ್ತು. ಖಚಿತ ಮಾಹಿತಿ ಮೇರೆಗೆ ಮುಂಬೈಗೆ ತೆರಳಿ ವಂಚಕ ಶಿವಾನಂದ ಕುಂಬಾರನನ್ನು ಸಿಸಿಬಿ ಇನ್ಸ್‌ಪೆಕ್ಟರ್ ನಿಂಗನಗೌಡ ಪಾಟೀಲ್ ಮತ್ತು ಟೀಮ್‌ ಬಂಧಿಸಿದೆ.

    ಶಿವಾನಂದ ಕುಂಬಾರ ಮೂಲತಃ ಚಿಕ್ಕೋಡಿ ತಾಲೂಕಿನ ಸದಲಗಾ ನಿವಾಸಿ. ಮಹಾರಾಷ್ಟ್ರದ ಇಚಲಕರಂಜಿಯಲ್ಲಿ ವಾಸವಿದ್ದ. ಸಿಮೆಂಟ್, ಸ್ಟೀಲ್ ‌ವ್ಯವಹಾರದಲ್ಲಿ ಹೆಚ್ಚಿನ ಲಾಭ ಬರುತ್ತದೆ ಎಂದು ಹಲವು ಜನರನ್ನು ನಂಬಿಸಿ, ಕೋಟ್ಯಂತರ ಹಣ ಪಡೆದಿದ್ದ. ಮೊದಲಿಗೆ ಹೆಚ್ಚಿನ ಲಾಭಾಂಶ ನೀಡಿ ಹಣ ಹೂಡಿಕೆ ಮಾಡಿದವರಿಗೆ ನಂಬಿಸಿದ್ದ. ಕರ್ನಾಟಕ, ಮಹಾರಾಷ್ಟ್ರದಲ್ಲಿ ಉದ್ಯಮಿಗಳ ಬಳಿ 500 ಕೋಟಿಗೂ ಹೆಚ್ಚು ಹಣ ಪಡೆದಿದ್ದ.

    ದಿನಗಳು ಕಳೆದಂತೆ ಶಿವಾನಂದ ಯಾರಿಗೂ ಹಣ ಕೊಡುತ್ತಿರಲಿಲ್ಲ. ಈ ಬಗ್ಗೆ ಆತನನ್ನು ವಿಚಾರಿಸುವಷ್ಟರಲ್ಲಿ, ಆತ ಹಣ ವಾಪಸ್ ನೀಡದೇ ಕುಟುಂಬ ಸಮೇತ ಪರಾರಿಯಾಗಿದ್ದ. ಬೆಳಗಾವಿಯ ಹಲವು ಮಂದಿಯು ಕೂಡ ಶಿವಾನಂದ ಕುಂಬಾರ ಬಳಿ ಹಣ ಹೂಡಿಕೆ ಮಾಡಿದ್ದರು. ಸಗಟು ತರಕಾರಿ ವ್ಯಾಪಾರಸ್ಥ ಯಲ್ಲಪ್ಪ ಮನಗುತಕರ್ ಎಂಬುವನ ಮೂಲಕ ಹಣ ಹೂಡಿಕೆ ಮಾಡಿಸಿದ್ದ. ಬಹುತೇಕ ಸಗಟು ತರಕಾರಿ ವ್ಯಾಪಾರಸ್ಥರು ಕೋಟ್ಯಂತರ ಹಣ ಹೂಡಿಕೆ ಮಾಡಿದ್ದರು.

    ಯಲ್ಲಪ್ಪ ಮನಗುತಕರ್‌ಗೆ ಜಾಫರವಾಡಿಯ ಅರ್ಜುನ್ ಪಾಟೀಲ್ 75 ಲಕ್ಷ ಹಣ ನೀಡಿದ್ದ. ಹಣ ವಾಪಸ್ ನೀಡದಿದ್ದಾಗ ಬೆಳಗಾವಿ ಸಿಇಎನ್ ಠಾಣೆಗೆ ದೂರು ಅರ್ಜುನ್ ಪಾಟೀಲ್ ನೀಡಿದ್ದ. ಯಲ್ಲಪ್ಪ ಮನಗುತಕರ್ ಹಾಗೂ ಶಿವಾನಂದ ಕುಂಬಾರ ವಿರುದ್ಧ ಬೆಳಗಾವಿ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಆರೋಪಿ ಶಿವಾನಂದನನ್ನು ಬಂಧಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ಲಸಿಕೆ ಹಾಕಿದ್ರು ರೇಬೀಸ್​ನಿಂದ ಯುವತಿ ಗುಣವಾಗಲಿಲ್ಲ ಯಾಕೆ? ತನಿಖೆಯಲ್ಲಿ ಭಯಾನಕ ಸಂಗತಿ ಬಯಲು

    40 ರೂಪಾಯಿ ಕೊಟ್ಟು ಚಿಕಿತ್ಸೆ ಪಡೆದುಕೊಂಡ ಧೋನಿ! ಎಲ್ಲೂ ವಾಸಿಯಾಗದ ನೋವು ಹಳ್ಳಿ ವೈದ್ಯನಿಂದ ಮಾಯ

    ಸೆ.30ಕ್ಕೆ ತೋತಾಪುರಿ; ಮಾರ್ಟಿನ್, ಕಾಂತಾರ ಜತೆಗೆ ಆಗಮನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts