More

    ಬರೋಬ್ಬರಿ 6 ಲಕ್ಷ 50 ಸಾವಿರ ರೂ. ಹರಾಜು ಕೂಗಿ ಗದ್ದುಗೆ ಮೇಲಿನ ತೆಂಗಿನಕಾಯಿ ಖರೀದಿಸಿದ ಮಹಾಭಕ್ತ..!

    ಬಾಗಲಕೋಟೆ: ಭಕ್ತರೊಬ್ಬರು ಮಾಳಿಂಗರಾಯನ ಗದ್ದುಗೆ ಮೇಲಿನ ತೆಂಗಿನಕಾಯಿಯನ್ನು ಬರೋಬ್ಬರಿ 6 ಲಕ್ಷ 50 ಸಾವಿರ ರೂಪಾಯಿಗೆ ಕೊಂಡುಕೊಳ್ಳುವ ಮೂಲಕ ಭಕ್ತಿಯ ಪರಾಕಾಷ್ಠೆ ಮೆರೆದಿದ್ದಾರೆ.

    ಜಮಖಂಡಿ ತಾಲೂಕಿನ ಸುಕ್ಷೇತ್ರ ಚಿಕ್ಕಲಕಿ ಗ್ರಾಮದಲ್ಲಿ ಮಾಳಿಂಗರಾಯನ ಗದ್ದುಗೆಯ ತೆಂಗಿನಕಾಯಿಯನ್ನು ಹರಾಜು ಮಾಡಲಾಯಿತು. ಈ ವೇಳೆ ಮಹಾವೀರ ಹರಕೆ ಎಂಬುವರು 6 ಲಕ್ಷದ 50 ಸಾವಿರ ರೂ. ಗರಿಷ್ಠ ಮೊತ್ತದ ಹರಾಜು ಕೂಗಿ ಗದ್ದುಗೆ ತೆಂಗಿನಕಾಯಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

    ಮಹಾವೀರ ಹರಕೆ ವಿಜಯಪುರ ಜಿಲ್ಲೆ ತಿಕೋಟಾ ಮೂಲದ ವ್ಯಾಪಾರಸ್ಥ. ಮಾಳಿಂಗರಾಯ ಜಾತ್ರೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಮೊತ್ತಕ್ಕೆ ಗದ್ದುಗೆ ಕಾಯಿ ಹರಾಜಾಗಿದೆ. ಪ್ರತಿ ವರ್ಷ ಶ್ರಾವಣ ಮಾಸದ ಮುಕ್ತಾಯದ ವೇಳೆ ಮಾಳಿಂಗರಾಯ ಜಾತ್ರೆ ನಡೆಯುತ್ತದೆ. ಜಾತ್ರೆ ಬಳಿಕ ದೇವರ ಗದ್ದುಗೆ ಮೇಲಿನ ತೆಂಗಿನಕಾಯಿ ಹಾಗೂ ಪಲ್ಲಕ್ಕಿ ಮೇಲಿನ ಕಾಯಿಗಳನ್ನು ಹರಾಜು ಹಾಕಲಾಗುತ್ತದೆ.

    ಗದ್ದುಗೆ ಹಾಗೂ ಪಲ್ಲಕ್ಕಿ ಮೇಲಿನ ಕಾಯಿ‌ ಮನೆಗೆ ಒಯ್ದರೆ ಒಳಿತಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಬೀರದೇವರ ಪಲ್ಲಕ್ಕಿ ಹಾಗೂ ಮಾಳಿಂಗರಾಯರ ಪಲ್ಲಕ್ಕಿಯಲ್ಲಿ ತಲಾ ಎರಡು ತೆಂಗಿನಕಾಯಿ ಹಾಗೂ ಗದ್ದುಗೆ ಮೇಲಿನ ಒಂದು ಕಾಯಿಯನ್ನು ಹರಾಜು ಕೂಗಲಾಗುತ್ತದೆ. ಪಲ್ಲಕ್ಕಿಯಲ್ಲಿನ ನಾಲ್ಕು ಕಾಯಿಗಳು 20 ರಿಂದ 35 ಸಾವಿರ ರೂ.ಗೆ ಬಿಕರಿಯಾದರೆ, ಗದ್ದುಗೆ ಮೇಲಿನ ಕಾಯಿ 6 ಲಕ್ಷ 50 ಸಾವಿರ ರೂಪಾಯಿಗೆ ಖರೀದಿಯಾಗಿದೆ.

    ಹರಾಜಿನಲ್ಲಿ ತಿಕೋಟಾದ ಮಹಾವೀರ ಹಾಗೂ ಪ್ರತಿ ವರ್ಷ ಕಾಯಿ ಪಡೆಯುತ್ತಿದ್ದ ನಕ್ಕರಗುಂದಿಯ ಬಸಪ್ಪ ಅವರ ಮಧ್ಯ ತೀವ್ರ ಪೈಪೋಟಿ ನಡೆಯಿತು. ಅಂತಿಮವಾಗಿ 6.50 ಲಕ್ಷಕ್ಕೆ ಗದ್ದುಗೆ ಕಾಯಿ ಮಹಾವೀರ ಹರಕೆ ಪಾಲಾಯಿತು. ಶ್ರಾವಣಮಾಸದಲ್ಲಿ ಒಂದು ತಿಂಗಳು ಕಾಲ ಗದ್ದುಗೆ ಮೇಲೆ ಪೂಜೆ ಮಾಡಿರುವ ತೆಂಗಿನಕಾಯಿ ಇದಾಗಿದೆ. (ದಿಗ್ವಿಜಯ ನ್ಯೂಸ್​)

    ಅನುಶ್ರೀಗೆ ಮಂಗ್ಳೂರಿನ 14 ಕೋಟಿ, ಬೆಂಗ್ಳೂರಿನ 4 ಕೋಟಿಯ ಮನೆ ಹೇಗೆ ಬಂತು? ಸಂಬರಗಿ ಸ್ಫೋಟಕ ಹೇಳಿಕೆ!

    ಮೊದಲ ಬಾರಿಗೆ ಸಾರ್ವಜನಿಕವಾಗಿ ಮಗುವಿನ ತಂದೆ ಬಗ್ಗೆ ಮಾತನಾಡಿದ ಸಂಸದೆ ನುಸ್ರತ್‌ ಜಹಾನ್‌..!

    ಸಿನಿ ಮಂದಿಯ ಹುಬ್ಬೇರಿಸಿದ ಸಮಂತಾ: ಸೌತ್​ ಬ್ಯೂಟಿಯ ಇನ್​ಸ್ಟಾಗ್ರಾಂ ಆದಾಯ ಕೇಳಿದ್ರೆ ಬೆರಗಾಗ್ತೀರಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts