More

    ಬೆಳಗ್ಗೆಯಿಂದ ಸಂಜೆವರೆಗೆ ಸಹಾಯಕ ಪ್ರಾಧ್ಯಾಪಕ, ಸಂಜೆ ನಂತರ ಕ್ಷೌರಿಕ! ಇವರ ಲೈಫ್​ ಜರ್ನಿಯೇ ಸ್ಫೂರ್ತಿದಾಯಕ

    ಕೊಚ್ಚಿ: ಇಲ್ಲಿ ಯಾವ ವೃತ್ತಿಯು ಕೂಡ ಕೀಳಲ್ಲ ಎಂಬ ಸಂದೇಶವನ್ನು ಈ ಮೇಲಿನ ಫೋಟೋದಲ್ಲಿರುವ ಕೇರಳದ ಮೂಲದ ವ್ಯಕ್ತಿ ಸಾರಿದ್ದಾರೆ. ಬೆಳಗ್ಗೆ ಸಹಾಯಕ ಪ್ರಾಧ್ಯಪಕರಾಗಿ ಕೆಲಸ ಮಾಡುವ ಈ ವ್ಯಕ್ತಿ ಸಂಜೆ ಕ್ಷೌರಿಕನಾಗಿ ತಮ್ಮ ವೃತ್ತಿಯನ್ನು ಮುಂದುವರಿಸುವ ಮೂಲಕ ಕಾಯಕವೇ ಕೈಲಾಸ ಎಂಬ ಮಾತನ್ನು ನಿತ್ಯವು ಪಾಲಿಸುತ್ತಿದ್ದಾರೆ.

    ನಾನು ಅಷ್ಟೊಂದು ಓದಿದ್ದೇನೆ ಇಂಥಾ ಕೆಲಸ ಮಾಡಬೇಕಾ ಎಂದು ಹೇಳುವವರ ಮಧ್ಯೆ, ಕೆಲಸ ಯಾವುದಾದರೇನು ಅದರಲ್ಲಿ ಖುಷಿ ಕಾಣಬೇಕು ಎಂಬ ಸಂದೇಶವನ್ನು ಕೇರಳದ ಸಹಾಯಕ ಪ್ರಾಧ್ಯಾಪಕ ಜೆಟ್ಟೀಶ್​ ಸಾರಿದ್ದಾರೆ. ನಾನು ಸಾಯುವವರೆಗೂ ಈ ಕೆಲಸವನ್ನು ಮುಂದುವರಿಸಿಕೊಂಡು ಹೋಗುತ್ತೇನೆ ಎಂದು ಜೆಟ್ಟೀಶ್ ಹೇಳಿದ್ದಾರೆ.

    ಅಂದಹಾಗೆ ಜೆಟ್ಟೀಶ್​ ಅವರ ಪೂರ್ಣ ಹೆಸರು ಜೆಟ್ಟೀಶ್​ ಶಿವದಾಸ. ಕೇರಳದ ಪೆರುಂಬವೂರ್​ನಲ್ಲಿರುವ ಕುರಿಯಾಕೋಸ್ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಸೈನ್ಸ್ ಕಾಲೇಜಿನ ಮಲಯಾಳಂ ವಿಭಾಗದದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಕಾಲೇಜು ಸಮಯ ಮುಗಿದ ಬಳಿಕ ಸಂಜೆ 4 ಗಂಟೆಯಿಂದ 9 ಗಂಟೆಯವರೆಗೆ ಚೆರುಕ್ಕುನಮ್​ನಲ್ಲಿರುವ ಬಾಡಿಗೆ ಮನೆಯಲ್ಲಿ ಕ್ಷೌರದಂಗಡಿ ನಡೆಸುತ್ತಾರೆ.

    ಅರಣ್ಯದಂಚಿನಲ್ಲಿ ಬರುವ ಮನಿಕಂದಾಂಚಲ್​ ಗ್ರಾಮದಲ್ಲಿ ಸಾಮಾನ್ಯ ಕುಟುಂಬದಲ್ಲಿ ಬೆಳೆದ ಜೆಟ್ಟೀಶ್​, ಚಿಕ್ಕ ವಯಸ್ಸಿನಿಂದಲೇ ತಾಳೆ ಎಲೆ ನೇಯುವುದು ಮತ್ತು ಕೂದಲು ಕತ್ತರಿಸುವಲ್ಲಿ ತಂದೆಗೆ ಸಹಾಯ ಮಾಡುತ್ತಿದ್ದರು. ಶಾಲೆಗೆ ಹೋಗಿ-ಬರಲು ಪ್ರತಿದಿನ ಸುಮಾರು 10 ಕಿ.ಮೀ ನಡೆಯುತ್ತಿದ್ದರು. 9ನೇ ತರಗತಿಯಲ್ಲಿ ತೀವ್ರ ಅನಾರೋಗ್ಯ ಕಾರಣದಿಂದಾಗಿ ಎರಡು ವರ್ಷ ಶಾಲೆಯಿಂದ ದೂರ ಉಳಿದಿದ್ದರು. 10ನೇ ತರಗತಿ ಮುಗಿದ ಬಳಿಕ ದೂರ ಶಿಕ್ಷಣದಿಂದಲೇ ಇತಿಹಾಸ ವಿಭಾಗದಲ್ಲಿ ಪದವಿ ಮತ್ತು ಮಲಯಾಳಂ ವಿಭಾಗದಲ್ಲಿ ಎಂಎ ಪಡೆದ ಜೆಟ್ಟೀಶ್​ ಕಾಲೇಜಿಗೆ ಹೋಗದೇ ಶ್ರಮದಿಂದಲೇ ಪ್ರಾಧ್ಯಾಪಕರಾದರು.

    ಪದವಿ ಬಳಿಕ ಎಲೆಕ್ಟ್ರಾನಿಕ್ಸ್ ಕೋರ್ಸ್ ಓದಿದ ಜೆಟ್ಟಿಶ್​, ಕ್ಷೌರಿಕನ ಅಂಗಡಿಯ ಬಳಿ ಎಲೆಕ್ಟ್ರಾನಿಕ್ಸ್ ಅಂಗಡಿ ಆರಂಭಿಸಿದರು. ಮದುವೆ ಆದ ಬಳಿಕ ಉನ್ನತ ಶಿಕ್ಷಣ ಪಡೆದರು. ನಂತರ ಎನ್​ಇಟಿ, ಜೆಆರ್​ಎಫ್​ ಮತ್ತು ಡಾಕ್ಟರೇಟ್​ ಕೂಡ ಪಡೆದಿದ್ದಾರೆ. ಅಲ್ಲದೆ, ಕವಿತೆ ಮತ್ತು ಹಾಡುಗಳನ್ನು ಬರೆಯುವುದರಲ್ಲೂ ಪರಿಣಿತಿಯನ್ನು ಸಾಧಿಸಿದ್ದಾರೆ. ಜೆಟ್ಟೀಶ್​ ಅವರ ಪತ್ನಿ ಬೇಬಿ, ಅಸಮನ್ನೂರದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ಜೆಟ್ಟೀಶ್​ ಅವರ ಪುತ್ರಿಯರಾದ ಮೀನಾಕ್ಷಿ ಮತ್ತು ಮಾಳವಿಕಾ ಕ್ರಮವಾಗಿ ಒಂಬತ್ತು ಮತ್ತು ಒಂದನೇ ತರಗತಿಯಲ್ಲಿ ಓದುತ್ತಿದ್ದಾರೆ. (ಏಜೆನ್ಸೀಸ್​)

    VIDEO| ಕ್ಯಾಚ್​ ಬಿಟ್ಟಿದ್ದಕ್ಕೆ ಸಹ ಆಟಗಾರನ ಕೆನ್ನೆಗೆ ಬಾರಿಸಿದ ಪಾಕಿಸ್ತಾನ ವೇಗಿ ಹ್ಯಾರೀಸ್​ ರೌಫ್!​

    ಶಿವಮೊಗ್ಗದ ಹರ್ಷನ ಕೊಲೆ ಪ್ರಕರಣದ ಆರೋಪಿ ಖಾಸಿಫ್​ಗೆ ಇದೆ ಕ್ರಿಮಿನಲ್ ಇತಿಹಾಸ

    ತಾಯಿಯು ಅನಾರೋಗ್ಯದಿಂದ ನರಳುವುದನ್ನು ನೋಡಲಾಗದೇ ಮನನೊಂದು ಸಾವಿನ ಹಾದಿ ಹಿಡಿದ ಮಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts