More

    100ನೇ ಟೆಸ್ಟ್​ ಪಂದ್ಯದಲ್ಲಿ ಮತ್ತೊಂದು ದಾಖಲೆ ಬರೆದ ಆರ್. ಅಶ್ವಿನ್

    ಧರ್ಮಶಾಲಾ: ಪ್ರವಾಸಿ ಇಂಗ್ಲೆಂಡ್​ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಅತಿಥೇಯರು ಮೇಲುಗೈ ಸಾಧಿಸಿದ್ದು, ಸರಣಿಯನ್ನು ಒಂದು ಪಂದ್ಯ ಬಾಕಿ ಇರುವಂತೆಯೇ ವಶಪಡಿಸಿಕೊಂಡಿದ್ದಾರೆ. ಇನ್ನು ಸರಣಿಯ ಐದನೇ ಪಂದ್ಯ ಗುರುವಾರ (ಮಾರ್ಚ್​ 07) ಧರ್ಮಾಶಾಲಾದಲದಿ ಆರಂಭವಾಗಿದ್ದು, ಅತಿಥೇಯರು ಮತ್ತೊಮ್ಮೆ ಮೇಲುಗೈ ಸಾಧಿಸಿದ್ದಾರೆ.

    ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಟೀಮ್​ ಇಂಡಿಯಾ ಸ್ಪಿನ್ನರ್ ಆರ್​. ಅಶ್ವಿನ್ ದಾಖಲೆ ಒಂದನ್ನು ಬರೆದಿದ್ದು, ಕ್ರೀಡಾಭಿಮಾನಿಗಳ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಧರ್ಮಶಾಲಾದಲ್ಲಿ ನಡೆಯುತ್ತಿರುವ ಟೆಸ್ಟ್​ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಆರ್​. ಅಶ್ವಿನ್​ ನುರು ಟೆಸ್ಟ್​ ಪಂದ್ಯಗಳನ್ನು ಆಡಿದ ವಿಶೇಷ ದಾಖಲೆ ಬರೆದಿದ್ದಾರೆ. ಅಲ್ಲದೇ ಈ ಸಾಧನೆ ಮಾಡಿದ 14ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಸಚಿನ್​ ತೆಂಡುಲ್ಕರ್​ ಸೇರಿದಂತೆ 13 ಆಟಗಾರರು ಈ ವಿಶೇಷ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಇದನ್ನೂ ಓದಿ: ಬಾಬರ್​ನನ್ನು ಸಚಿನ್​ ಅವರೊಂದಿಗೆ ಹೋಲಿಸಬೇಡಿ; ಪಾಕ್​ ಕ್ರಿಕೆಟ್ ತಜ್ಞ ಹೀಗಂದಿದ್ಯಾಕೆ

    ಆರ್​. ಅಶ್ವಿನ್​ಗೂ ಮುನ್ನ ಕಪಿಲ್ ದೇವ್, ಸುನೀಲ್​ ಗಾವಸ್ಕರ್, ದಿಲೀಪ್ ವೆಂಗಸ್ಕಾರ್​, ಸಚಿನ್ ತೆಂಡುಲ್ಕರ್, ರಾಹುಲ್​ ದ್ರಾವಿಡ್, ವಿವಿಎಸ್​ ಲಕ್ಷ್ಮಣ್​, ಅನಿಲ್​ ಕುಂಬ್ಳೆ, ಸೌರವ್​ ಗಂಗೂಲಿ, ವೀರೇಂದ್ರ ಸೆಹ್ವಾಗ್, ಹರ್ಭಜನ್ ಸಿಂಗ್​, ಇಶಾಂತ್​ ಶರ್ಮಾ, ವಿರಾಟ್​ ಕೊಹ್ಲಿ, ಚೇತೇಶ್ವರ ಪೂಜಾರ ಈ ವಿಶೇಷ ದಾಖಲೆ ಬರೆದಿರುವ ಆಟಗಾರರು.

    ಧರ್ಮಶಾಲಾದಲ್ಲಿ ನಡೆಯುತ್ತಿರುವ ಈ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ಔಪಚಾರಿಕ ಪಂದ್ಯವಾಗಿದ್ದರೂ ಅಶ್ವಿನ್​ಗೆ ವಿಶೇಷ ಪಂದ್ಯವಾಗಿದೆ. ಈ ಪಂದ್ಯದ ಮೂಲಕ ಅಶ್ವಿನ್ 100 ಟೆಸ್ಟ್ ಪಂದ್ಯಗಳ ವಿಶೇಷ ಮೈಲುಗಲ್ಲನ್ನು ತಲುಪಿದ್ದಾರೆ. ಹೀಗಾಗಿ ಈ ಪಂದ್ಯವನ್ನು ಗೆಲ್ಲುವ ಮೂಲಕ ಅಶ್ವಿನ್​ಗೆ ಸ್ಮರಣೀಯ ಗೆಲುವಿನ ಉಡುಗೊರೆ ನೀಡಲು ಟೀಮ್ ಇಂಡಿಯಾ ಸಜ್ಜಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts