More

    ಅಸಾನಿ ಚಂಡಮಾರುತ ಸೃಷ್ಟಿ: 27 ಜಿಲ್ಲೆಗಳಲ್ಲಿ ನಾಳೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ

    ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಭಾನುವಾರ ಅಸಾನಿ ಚಂಡಮಾರುತವಾಗಿ ಸೃಷ್ಟಿಯಾಗಿದೆ.

    ಉತ್ತರ ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಕರಾವಳಿ ಓರಿಸ್ಸಾದತ್ತ ಮಾರುತಗಳು ಚಲಿಸಲಿದ್ದು, ಆ ಭಾಗಗಳಲ್ಲಿ ಹೆಚ್ಚು ಮಳೆ ಬೀಳಲಿದೆ. ಗಾಳಿಯ ವೇಗ ಹೆಚ್ಚಿರುವ ಹಿನ್ನೆಲೆಯಲ್ಲಿ ಸಮುದ್ರದಲ್ಲಿ ಮೀನುಗಾರಿಕೆಯಲ್ಲಿ ತೊಡಗಿರುವ ಮೀನುಗಾರರು ತಕ್ಷಣ ವಾಪಸ್ ಬರುವಂತೆ ಹವಾಮಾನ ಇಲಾಖೆ ಸೂಚಿಸಿದೆ.

    ಕರ್ನಾಟಕದಲ್ಲಿಯೂ ಉತ್ತಮ ವರ್ಷಧಾರೆ ಬರಲಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು, ಬೆಂಗಳೂರು, ಬೆಂ.ಗ್ರಾಮಾಂತರ, ಕೋಲಾರ, ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರ, ದಾವಣಗೆರೆ, ಚಿತ್ರದುರ್ಗ, ಹಾವೇರಿ, ಬಳ್ಳಾರಿ, ಗದಗ, ಧಾರವಾಡ, ಬೆಳಗಾವಿ, ಕೊಪ್ಪಳ, ಬಾಗಲಕೋಟೆ, ಕಲಬುರಗಿ ಮತ್ತು ಬೀದರ್‌ನಲ್ಲಿ ಮೇ 9ರಂದು ಭಾರಿ ಮಳೆ ಸುರಿಯಲಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಕೊಟ್ಟಿದೆ. ಯಾದಗಿರಿ, ರಾಯಚೂರು ಮತ್ತು ವಿಜಯಪುರ ಸಾಧಾರಣ ಮಳೆ ಬೀಳಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

    ಚಾಮರಾಜನಗರದ ಹರದನಹಳ್ಳಿಯಲ್ಲಿ 62 ಮಿಮೀ, ಮೈಸೂರಿನ ಹುಣಸೂರಿನಲ್ಲಿ 35 ಮಿಮೀ, ಮಂಡ್ಯದ ಕೆ.ಆರ್.ಪೇಟೆಯಲ್ಲಿ 30 ಮಿಮೀ ಮತ್ತು ತುಮಕೂರಿನ ಮಧುಗಿರಿಯಲ್ಲಿ 26 ಮಿಮೀ ಮಳೆ ಸುರಿದಿದೆ.

    ಒಟ್ಟಿಗೆ ಬಾಳಲು ಬಿಡ್ತಿಲ್ಲ ನಮಗೆ ರಕ್ಷಣೆ ಕೊಡಿ… ಎಸ್ಪಿ ಮುಂದೆ ಕಣ್ಣೀರಿಟ್ಟ ಯುವತಿಯರು!

    ರಸ್ತೆ ಗುಂಡಿ, ಅವೈಜ್ಞಾನಿಕ ಹಂಪ್​ನಿಂದಾಗಿ ಅಪಘಾತ: ಸಿಲ್ಲಿ ಲಲ್ಲಿ ಖ್ಯಾತಿಯ ನಟಿ ಸುನೇತ್ರಾ ಪಂಡಿತ್​ಗೆ ಗಾಯ

    ನಾನು ಯಾರಿಗೂ ರೊಕ್ಕ ಕೊಡುವ ಮಗನೇ ಅಲ್ಲ: ಮತ್ತೊಂದು ಬಾಂಬ್​ ಸಿಡಿಸಿದ ಶಾಸಕ ಯತ್ನಾಳ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts