More

    ರಾಜ್ಯದಲ್ಲಿ ಒಂದು ವಾರ ತಾಪಮಾನ ಹೆಚ್ಚಳ:ನಾಳೆಯಿಂದ ಮೂರು ದಿನ ಮಳೆ

    ಬೆಂಗಳೂರು: ರಾಜ್ಯದ ಹಲವೆಡೆ ಮಳೆ ಸುರಿಯುತ್ತಿರುವ ಬೆನ್ನಲ್ಲೇ ಕೆಲ ಜಿಲ್ಲೆಗಳಲ್ಲಿ ಉಷ್ಣಾಂಶ ಮತ್ತೆ ಹೆಚ್ಚಳವಾಗಿದೆ. ಶುಕ್ರವಾರ 7 ಜಿಲ್ಲೆಗಳಲ್ಲಿ ತಾಪಮಾನ 40ರ ಗಡಿ ದಾಟಿದೆ. ರಾಜ್ಯದ ಇತರೆ ಜಿಲ್ಲೆಗಳಗಿಂತ ಯಾದಗಿರಿಯಲ್ಲಿ ಅತಿ ಹೆಚ್ಚು 43.4 ಡಿಗ್ರಿ ಸೆಲ್ಸಿಯಸ್​ ಉಷ್ಣಾಂಶ ದಾಖಲಾಗಿದೆ.

    ಬಳ್ಳಾರಿ 43.1, ಕಲಬುರಗಿ 41.4, ರಾಯಚೂರು 41.4, ಕೊಪ್ಪಳ 40.6, ತುಮಕೂರು 40.3, ವಿಜಯಪುರ 40 ಡಿ.ಸೆ. ವರದಿಯಾಗಿದೆ. ದಾವಣಗೆರೆ, ಗದಗ, ಮಂಡ್ಯ 39, ರಾಮನಗರ 39, ಕೋಲಾರ 38.2, ಬೆಂ.ಗ್ರಾಮಾಂತರ 38.2, ಚಿತ್ರದುರ್ಗ 38, ಬೆಂಗಳೂರು 37.2, ಚಾಮರಾಜನಗರ 37.8, ಮೈಸೂರು 37.2 ಡಿ.ಸೆ ಸೇರಿ ದಕ್ಷಿಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ ಉಷ್ಣಾಂಶ ದಾಖಲಾಗಿದೆ. ಈ ಮೇಲಿನ ಎಲ್ಲ ಜಿಲ್ಲೆಗಲ್ಲಿ ವಾಡಿಕೆಗಿಂತ 2-5 ಡಿ.ಸೆ.ಹೆಚ್ಚು ತಾಪಮಾನ ವರದಿಯಾಗಿದೆ. ಮುಂದಿನ ಒಂದು ವಾರ ಕಾಲ ಮುಕ್ಕಾಲು ರಾಜ್ಯದಲ್ಲಿ ತಾಪಮಾನ ಇದೇ ರೀತಿ ಕಾಣಿಸಿಕೊಳ್ಳಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ಕೊಟ್ಟಿದೆ.

    ಮದುವೆ ಆದಾಗಲೇ ಆ ಕೆಟ್ಟ ಅನುಭವ ಎದುರಿಸಿದ್ದೆ! ನಟಿ ಕಸ್ತೂರಿ ಶಂಕರ್​ ಓಪನ್​ ಟಾಕ್​

    ಮೂರು ದಿನ ಹಲವೆಡೆ ಮಳೆ
    ರಾಜ್ಯಾದ್ಯಂತ ಮುಂದಿನ ಮೂರು ದಿನ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಇಲಾಖೆ ಮಾಹಿತಿ ನೀಡಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಹಾಸನ, ಬೆಂಗಳೂರು, ಬೆಂ.ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಕೋಲಾರ, ತುಮಕೂರು, ವಿಜಯನಗರ, ಬಾಗಲಕೋಟೆ,ಬಳ್ಳಾರಿ,ಬೆಳಗಾವಿ,ಧಾರವಾಡ, ಬೀದರ್​, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿಯಲ್ಲಿ ಏ.20ರಿಂದ ಏ.22ರವರೆಗೆ ಗುಡುಗು ಮಿಂಚು ಸಹಿತ ಮಳೆಯಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts