More

    ಸಿಡಿಲು ಬಡಿದು ಹೊತ್ತಿ ಉರಿದ ನಾರಿಕೇಳ ಮರ

    ಬಾಳೆಹೊನ್ನೂರು: ಜಿಲ್ಲೆಯ ಕೆಲವೆಡೆ ಭರ್ಜರಿ ಮಳೆಯಾಗಿದ್ದರೆ, ಇನ್ನೂ ಕೆಲವೆಡೆ ಸಾಧಾರಣ ಹಾಗೂ ತುಂತುರು ಮಳೆಯಾಗಿದೆ. ಗುರುವಾರ ಸಂಜೆ ವೇಳೆಗೆ ಜಿಲ್ಲಾದ್ಯಂತ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದರೂ ಚದುರಿದಂತೆ ಮಳೆಯಾಗಿದೆ. ಕೊಪ್ಪ ತಾಲೂಕಿನ ವಿವಿಧ ಪ್ರದೇಶಗಳಲ್ಲಿ ಗುಡುಗು, ಸಿಡಿಲು ಅಬ್ಬರದಲ್ಲಿ ಭರ್ಜರಿ ಮಳೆಯಾಗಿದೆ. ಚಿಕ್ಕಮಗಳೂರು ತಾಲೂಕಿನ ಮಲೆನಾಡು ಭಾಗದಲ್ಲಿ ಸಾಧಾರಣ ಮಳೆಯಾಗಿದ್ದರೆ, ಚಿಕ್ಕಮಗಳೂರು ನಗರ ಹಾಗೂ ಕಡೂರು ತಾಲೂಕಿನಲ್ಲಿ ತುಂತುರು ಮಳೆಯಾಗಿದೆ. ರಾತ್ರಿಯವರೆಗೂ ಗುಡುಗು ಸಿಡಿಲು ಅಬ್ಬರಿಸಿತು. ಎನ್.ಆರ್.ಪುರದ ಬಿ.ಎಚ್.ಕೈಮರದಲ್ಲಿ ಗಾಳಿಗೆ ಮರ ಬಿದ್ದು ವೆಲ್ಡಿಂಗ್ ಶಾಪ್ ಜಖಂಗೊಂಡಿದೆ. ಪಿಕಪ್ ವಾಹನಕ್ಕೆ ಹಾನಿಯಾಗಿದೆ.

    ಬಾಳೆಹೊನ್ನೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ರಾತ್ರಿಯ ಗುಡುಗು, ಸಿಡಿಲಿನ ಅಬ್ಬರ ಹೆಚ್ಚಾಯಿತು. ಸಂಜೆ 7 ಗಂಟೆ ವೇಳೆಗೆ ಪಟ್ಟಣ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ತುಂತುರು ಮಳೆ ಆರಂಭಗೊಂಡಿತು. ರಾತ್ರಿ 8 ಗಂಟೆಯ ಬಳಿಕ ಗುಡುಗು, ಸಿಡಿಲಿನ ಅಬ್ಬರ ಹೆಚ್ಚಾಗಿತ್ತು. ಕೊಪ್ಪ ರಸ್ತೆಯ ಇಸಾಕ್ ಸಾಹೇಬ್ ಎಂಬುವರ ಮನೆಯ ತೆಂಗಿನ ಮರಕ್ಕೆ ಸಿಡಿಲು ಬಡಿದ ಪರಿಣಾಮ ಬೆಂಕಿ ಹೊತ್ತಿಕೊಂಡು ಉರಿಯಿತು. ಸುತ್ತಮುತ್ತಲಿನ ವಿವಿಧ ಗ್ರಾಮಗಲ್ಲಿ ಸಾಧಾರಣ ಮಳೆಯಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts