More

    ರೋಮ್ ಹೊತ್ತಿ ಉರಿಯುವಾಗ ದೊರೆ ಪಿಟೀಲು ಬಾರಿಸುತ್ತಿದ್ದನಂತೆ ಅಂಗಾಯ್ತು ಸಚಿವೆ ರೋಜಾ ಕತೆ!

    ವಿಜಯವಾಡ: ಇತ್ತೀಚೆಗಷ್ಟೇ ಮಿಚೌಂಗ್​ ಚಂಡಮಾರುತದ ಅಬ್ಬರಕ್ಕೆ ಆಂಧ್ರ ಪ್ರದೇಶ ತತ್ತರಿಸಿದ್ದು, ಎಲ್ಲರಿಗೂ ತಿಳಿದೇ ಇದೆ. ಭಾರಿ ಮಳೆಗೆ ಅನೇಕ ಜಿಲ್ಲೆಗಳು ಪ್ರವಾಹ ಸ್ಥಿತಿಯನ್ನು ಎದುರಿಸಿದವು. ಎಲ್ಲೆಡೆ ಜಲಾವೃತಗೊಂಡು ಕುಡಿಯುವ ನೀರು, ವಿದ್ಯುತ್​ ಪೂರೈಕೆ ಲಭ್ಯವಾಗದೇ ಜನಜೀವನವೇ ಅಸ್ತವ್ಯಸ್ತಗೊಂಡಿತು.

    ಆಂಧ್ರದ ಸುಮಾರು 10 ಜಿಲ್ಲೆಗಳು ಚಂಡಮಾರುತ ಅಬ್ಬರಕ್ಕೆ ನಲುಗಿದೆ. ಮಿಚೌಂಗ್​ ತನ್ನ ಅಬ್ಬರನ್ನು ನಿಲ್ಲಿಸಿದ್ದರೂ ಅದು ಸೃಷ್ಟಿ ಮಾಡಿರುವ ಅವಾಂತರಗಳ ಪರಿಣಾಮ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಜನರು ತಮ್ಮ ಸಹಜ ಜೀವನ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಅಲ್ಲದೆ, ಸರ್ಕಾರದ ನೆರವಿಗೆ ಎದುರು ನೋಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜನರ ನೋವಿಗೆ ಸ್ಪಂದಿಸಬೇಕಾದ ಆಂಧ್ರದ ಪ್ರವಾಸೋದ್ಯಮ ಸಚಿವೆ ರೋಜಾ ಮಳೆಯಲ್ಲಿ ಡಾನ್ಸ್​ ಮಾಡಿರುವುದು ಭಾರೀ ಟೀಕೆಗೆ ಗುರಿಯಾಗಿದೆ.

    ಇಡೀ ರೋಮ್​ ನಗರ ಹೊತ್ತಿ ಉರಿಯುವಾಗ ದೊರೆ ನೀರೋ ಪಿಟೀಲು ಬಾರಿಸುತ್ತಿದ್ದನಂತೆ! ರೋಜಾ ನಡೆಯೂ ಕೂಡ ಅದೇ ರೀತಿ ಇದೆ. ಭಾರೀ ಮಳೆ ಹಿನ್ನೆಲೆಯಲ್ಲಿ ಕೆಲವು ದಿನಗಳ ಹಿಂದೆ ಮಳೆ ಪೀಡಿತ ಸ್ಥಳಗಳಿಗೆ ಭೇಟಿ ನೀಡಿದ್ದ ರೋಜಾ, ಮಳೆಯ ನಡುವೆ ಕೊಡೆ ಹಿಡಿದು ಡಾನ್ಸ್​ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಬೆನ್ನಲ್ಲೇ ಆಂಧ್ರದಲ್ಲಿ ವಿವಾದದ ಬಿರುಗಾಳಿ ಎಬ್ಬಿಸಿದೆ. ನೆಟ್ಟಿಗರೆಲ್ಲರು ರೋಜಾರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

    ಇದಕ್ಕೆ ತೆಲುಗು ದೇಶಂ ಪಕ್ಷ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಸಂಬಂಧ ಪಕ್ಷ ಬಿಡುಗಡೆ ಮಾಡಿರುವ ಎಕ್ಸ್ ವರದಿಯಲ್ಲಿ ಚಂದ್ರಬಾಬು ನಾಯ್ಡು ಈ ಹಿಂದೆ ಮುಖ್ಯಮಂತ್ರಿಯಾಗಿದ್ದರು. ಈ ವೇಳೆ ಚಂಡಮಾರುತದಂತಹ ಪ್ರಕೃತಿ ವಿಕೋಪಗಳ ಸಮಯದಲ್ಲಿ ಸಚಿವ ಸಂಪುಟದ ಎಲ್ಲ ಮಂತ್ರಿಗಳು ಪ್ರವಾಹ ಪೀಡಿತ ಜನರಿಗೆ ಸಹಾಯ ಮಾಡಿದರು. ಆದರೆ, ಸಚಿವೆ ರೋಜಾ ಮಳೆಯನ್ನು ಆನಂದಿಸಿ ನೃತ್ಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದೆ. (ಏಜೆನ್ಸೀಸ್​)

    ಟೈರ್​ ಸ್ಫೋಟಗೊಂಡು ಕೆರೆಗೆ ಬಿದ್ದ ಕಾರು: ಚಿಕ್ಕಬಳ್ಳಾಪುರದಲ್ಲಿ ನಾಲ್ವರು ಯುವಕರು ಜಲಸಮಾಧಿ

    300 ಕೋಟಿ ರೂಪಾಯಿ ವಶ: 3 ದಿನವಾದರೂ ಮುಗಿಯದ ನೋಟು ಎಣಿಕೆ

    ಮಿಚೌಂಗ್​ ಸೈಕ್ಲೋನ್​ ಎಫೆಕ್ಟ್​! ಅಸಹಾಯಕತೆ ಹೊರಹಾಕಿದ ಕ್ರಿಕೆಟಿಗ ರವಿಚಂದ್ರನ್​ ಅಶ್ವಿನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts