More

    ನಾನು ಯಾರಿಗೂ ರೊಕ್ಕ ಕೊಡುವ ಮಗನೇ ಅಲ್ಲ: ಮತ್ತೊಂದು ಬಾಂಬ್​ ಸಿಡಿಸಿದ ಶಾಸಕ ಯತ್ನಾಳ್​!

    ವಿಜಯಪುರ: ಮುಖ್ಯಮಂತ್ರಿ ಮಾಡಲು 2500 ಕೋಟಿ ರೂ. ಹಣ ಕೇಳಿದ್ದರು ಎಂಬ ಹೇಳಿಕೆ ನೀಡಿ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದ್ದಲ್ಲದೆ, ಸ್ವಪಕ್ಷ ಬಿಜೆಪಿಗೆ ಮುಖಭಂಗ ಉಂಟು ಮಾಡಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಇದೀಗ ಮತ್ತೊಂದು ಬಾಂಬ್​ ಸಿಡಿಸಿದ್ದು, ಸಚಿವ ಸ್ಥಾನಕ್ಕಾಗಿ 50 ರಿಂದ 100 ಕೋಟಿ ರೂ. ಕೊಡಲಾಗಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.

    ವಿಜಯಪುರ ತಾಲೂಕಿನ ಹಿಟ್ನಳ್ಳಿಯಲ್ಲಿ ನಡೆದ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಹಕ್ಕೊತ್ತಾಯ ಸಮಾವೇಶದಲ್ಲಿ ಯತ್ನಾಳ್ ಮಾತನಾಡಿದರು.

    ಬಿಜೆಪಿಯಲ್ಲಿ ಸಿಡಿ ಇಟ್ಟುಕೊಂಡು ಮಂತ್ರಿಯಾಗಿದ್ದಾರೆ. ನಮ್ಮಲ್ಲಿ ಒಬ್ಬ ಇದ್ದಾನೆ, ಆತ ಅರ್ಹತೆ ಮೇಲೆ ಮಂತ್ರಿ ಆಗಿಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಮುರುಗೇಶ್ ನಿರಾಣಿ ವಿರುದ್ಧ ಯತ್ನಾಳ್ ವಾಗ್ದಾಳಿ ನಡೆಸಿದರು. ಅವರು ಬ್ಲಾಕ್​ಮೇಲ್​ ಮಾಡುವವರು. 2 ಎ ಮೀಸಲಾತಿ ಕೇಳುವುದು, ಕುರುಬ, ಹಡಪದ ಸಮಾಜ ಸೇರಿದಂತೆ ದ್ವನಿಯಿಲ್ಲದ ಸಮಾಜಕ್ಕೆ ಮೀಸಲಾತಿ ಕೊಡಿ ಅನ್ನುವುದು ಬ್ಲಾಕ್​​ಮೇಲ್​ ಆಗಲ್ಲ. ಯಾವಾಗ ಬ್ಲ್ಯಾಕ್​ಮೇಲ್​ ಆಗುತ್ತೆ ಅಂದ್ರೆ, ಸಿಡಿ ಇಟ್ಟುಕೊಂಡು, ವೀಕ್​ನೆಸ್​ ಇಟ್ಟುಕೊಂಡು, ನನ್ನ ಮಂತ್ರಿ ಮಾಡಿಲಿಲ್ಲ ಅಂದ್ರೆ, ಸಿಡಿ ಹೊರಗೆ ಬಿಡ್ತೀನಿ ಅನ್ನೋದು ಬ್ಲಾಕ್​​ಮೇಲ್​ ​ ಎಂದರು.

    ನಾನು ನಿನಗೆ ಇಷ್ಟು ರೊಕ್ಕ (ಹಣ) ಕೊಟ್ಟಿದ್ದೀನಿ ಎನ್ನುವವರು ಬ್ಲ್ಯಾಕ್​ಮೇಲ್​ ಮಾಡುತ್ತಾರೆ. ಆದರೆ, ನಾನು ಯಾರಿಗೂ ರೊಕ್ಕ ಕೊಡುವ ಮಗನಲ್ಲ, 50 ರಿಂದ 100 ಕೋಟಿ ದುಡ್ಡು ಎಲ್ಲಿಂದ ಕೊಡಲಿ? ಎಲ್ಲಿಂದ ಕೊಡೋಕೆ ಆಗುತ್ತದೆ? ಅದೇ 50 ಕೋಟಿ ರೂಪಾಯಿಯನ್ನು ಸುಮ್ಮನೇ ಮನೆಯಾಗ ಕುಳಿತು ಬ್ಯಾಂಕ್​ನಲ್ಲಿ ಡಿಪಾಸಿಟ್ ಮಾಡಿದ್ರೆ ಎಷ್ಟು ಬಡ್ಡಿ ಆಗುತ್ತೆ ಗೊತ್ತಿದೆ ಏನು? ಶೇಕಡ 1ರಷ್ಟು ಬಡ್ಡಿ ಅಂದುಕೊಂಡರು ತಿಂಗಳಿಗೆ 50 ಲಕ್ಷ ರೂಪಾಯಿ ಆಗುತ್ತದೆ. ಇದಕ್ಕೆಲ್ಲ ಸುಮ್ಮನೆ ನಿಮಗೆ ನಮಸ್ಕಾರ ಮಾಡಿ ಯಾಕೆ ಮಸ್ಕ ಹೊಡಿಬೇಕು. 50 ಲಕ್ಷ ಹಣದಲ್ಲಿ ಆರಾಮಾಗಿ ಜೀವನ ಸಾಗಿಸಬಹುದು. ಬೇಕಿದ್ದರೆ, 50 ಲಕ್ಷದಲ್ಲಿ 25 ಲಕ್ಷ ದಾನ ಮಾಡಿಕೊಂಡು ಆರಾಮ ಇರ್ತೇನೆ ಎಂದು ಯತ್ನಾಳ್​ ಹೇಳಿದರು.

    ಚುನಾವಣೆಯಲ್ಲಿ ನನ್ನ ಬಳಿ ಜನ ದುಡ್ಡನ್ನೇ ಕೇಳುವುದಿಲ್ಲ. ಹೀಗಾಗಿ ನೀವೂ ಅದ್ಹೇಗೆ ಆಯ್ಕೆ ಆಗಿ ಬರುತ್ತಿರಿ ಎನ್ನುತ್ತಾರೆ. ಅಷ್ಟೆಲ್ಲ ಬೈಯುತ್ತಿರಾ ಅದ್ಹೇಗೆ ವೋಟ್​ ಹಾಕುತ್ತಾರೆ ಎಂದು ಸ್ನೇಹಿತರು ಕೇಳ್ತಾರೆ. ಮೊನ್ನೆ ರಾಜ್ಯಪಾಲರ ಭೇಟಿ ಆಗೋಕೆ ಹೋದಾಗ ಅವರು ಕೂಡ ಇದನ್ನೇ ಕೇಳಿದರು ಎಂದರು. (ದಿಗ್ವಿಜಯ ನ್ಯೂಸ್​)

    ಬಾಕಿ 1 ರೂಪಾಯಿ ಕೇಳಿದ್ದಕ್ಕೆ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ಹೈಡ್ರಾಮ ಸೃಷ್ಟಿಸಿದ ಬಸ್​ ಕಂಡಕ್ಟರ್!​

    ಬಿಕಿನಿ ಫೋಟೋಗಳನ್ನು ಹರಿಬಿಟ್ಟು ಪಡ್ಡೆ ಹುಡುಗರ ನಿದ್ದೆಗೆಡಿಸಿದ ಮಸ್ತ್​ ಮೊಹಬ್ಬತ್​ ಬೆಡಗಿ!

    ಅತ್ಯಾಚಾರದ ಬೆದರಿಕೆ ಹಾಕಿದ್ದವನನ್ನು ಹುಡುಕಿಕೊಡಿ ಎಂದು ಪೊಲೀಸರ ಮೊರೆ ಹೋದ ನಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts