More

    ಬಿಜೆಪಿಗೆ ಮಹಿಳೆಯರ ಮತ ಕೇಳುವ ಹಕ್ಕಿಲ್ಲ

    ಬಳ್ಳಾರಿ :ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮಹಿಳೆಯರ ಮತ ಕೇಳುವ ನೈತಿಕ ಹಕ್ಕಿಲ ಎಂದು ಕಾಂಗ್ರೆಸ್ ಮಹಿಳಾ ರಾಜ್ಯಾಧ್ಯಕ್ಷೆ ಪುಷ್ಪ ಅಮರನಾಥ ಹೇಳಿದರು.
    ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬಿಜೆಪಿ ಹಾಗೂ ಕೇಂದ್ರ ಸರ್ಕಾರ ಅತ್ಯಾಚಾರಿಗಳ ಹಾಗೂ ಶ್ರೀಮಂತರ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಬಿಜೆಪಿ ಅಭ್ಯರ್ಥಿಗಳು ಮಂದಿರ, ಮಸೀದಿ, ಮಂಗಳ ಸೂತ್ರ ವಿಷಯಗಳನ್ನು ಇಟ್ಟಕೊಂಡು ಮತಯಾಚನೆ ಮಾಡುತ್ತಿದ್ದಾರೆ. ಸುಳ್ಳು ಹೇಳುವುದರಲ್ಲಿ ಪ್ರಧಾನಿ ಮೋದಿ ಅವರು ದಾಖಲೆ ಮಾಡಿದ್ದಾರೆ. ಆದ್ದರಿಂದ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ವ್ಯಂಗವಾಡಿದರು. ಅಣ್ಣ ಮಲೈ ಕರ್ನಾಟಕದ ವಿರೋಧಿ ಇಲ್ಲಿ ಬಂದು ಪ್ರಚಾರ ಮಾಡಬಾರದು. ಬಿಜೆಪಿಯವರು ಅವರನ್ನೇ ಕರೆಸಿ ಪ್ರಚಾರ ಮಾಡುತ್ತಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆ ಧರ್ಮ ಮತ್ತು ಅಧರ್ಮ ನಡುವೆ ನಡೆಯುವ ಚುನಾವಣೆಯಾಗಿದೆ. ಇಷ್ಟು ದಿನ ಮಹಿಳೆಯರು ಮನೆಯಲ್ಲಿ ಬಂಧಿಯಾಗಿದ್ದರು. ಕಾಂಗ್ರೆಸ್ ಪಕ್ಷದ ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಸ್ವಾತಂತ್ರ್ಯ ನೀಡಿದೆ. ಕೂಲಿ, ಕಟ್ಟಡ ಕೆಲಸ ಹೋಗುವ ಮಹಿಳೆಯರಿಗೆ ಅನುಕೂಲವಾಗಿದೆ. ರಾಜ್ಯದಲ್ಲಿ ಸಾವಿರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದರೂ ಬಿಜೆಪಿಯ ಶೋಭಾ ಕರಂದ್ಲಾಜೆ, ಶ್ರುತಿ, ತಾರಾ ಅನೂರಾಧ, ಸ್ಮೃತಿ ಇರಾನಿ ಸೇರಿದಂತೆ ಯಾರೂ ಧ್ವನಿ ಎತ್ತುತ್ತಿಲ್ಲ. ಎಸಿ ರೂಮ್ ನಲ್ಲಿ ಕುಳಿತು ಎರಡು ಕೋಟಿ ರೂ. ಕಾರಿನಲ್ಲಿ ಓಡಾಡುವವರಿಗೆ ಶಕ್ತಿ ಯೋಜನೆ ಬೆಲೆ ಗೊತ್ತಾಗುವುದಿಲ್ಲ ಎಂದು ಪರೋಕ್ಷವಾಗಿ ಭವನಿ ರೇವಣ್ಣ ವಿರುದ್ಧ ಗುಡುಗಿದರು. ವೇಳೆ ಕಾಂಗ್ರೆಸ್ ರಾಜ್ಯ ಘಟಕ ಕಾರ್ಯದರ್ಶಿ ಜ್ಯೋತಿ, ಜಿಲ್ಲಾ ಘಟಕದ ಅಧ್ಯಕ್ಷೆ ಮಂಜುಳಾ, ಪದ್ಮ ಸೇರಿದಂತೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts