More

    ಯೂಕ್ರೇನ್​ ಬಿಕ್ಕಟ್ಟು: ಬ್ರಿಟನ್​, ಜರ್ಮನಿ ಬೆನ್ನಲ್ಲೇ ರಷ್ಯಾ ಮೇಲೆ ಆರ್ಥಿಕ ನಿರ್ಬಂಧ ಹೇರಿದ ಅಮೆರಿಕ

    ವಾಷಿಂಗ್ಟನ್​​: ಯೂಕ್ರೇನ್​ ಮತ್ತು ರಷ್ಯಾ ನಡುವಿನ ಸಂಘರ್ಷ ಮತ್ತಷ್ಟು ತಾರಕಕ್ಕೇರಿರುವ ಲಕ್ಷಣಗಳು ಗೋಚರಿಸುತ್ತಿವೆ. ಯೂಕ್ರೇನ್ ವಿಚಾರದಲ್ಲಿ ತಮ್ಮ ಪಟ್ಟು ಸಡಿಲಿಸದ ರಷ್ಯಾ, ಯುದ್ಧಕ್ಕೆ ಸನ್ನದ್ಧವಾಗಿ ನಿಂತಿದೆ. ಅಲ್ಲದೆ, ಪ್ರತ್ಯೇಕತವಾದಿಗಳನ್ನು ತನ್ನ ನಿಯಂತ್ರಣಕ್ಕೆ ಪಡೆಯಲು ಹವಣಿಸುತ್ತಿರುವ ರಷ್ಯಾ ನಿನ್ನೆ (ಫೆ.22) ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಅನೇಕ ರಾಷ್ಟ್ರಗಳು ಛೀಮಾರಿ ಹಾಕಿವೆ.

    ಶಾಂತಿ ಕಾಪಾಡುವಂತೆ ರಷ್ಯಾಗೆ ಒತ್ತಾಯ ಮಾಡಿದರು ಕೂಡ ರಷ್ಯಾ ತನ್ನ ನಿಲುವು ಬದಲಿಸದೇ ಸಮರ್ಥನೆಗೆ ಇಳಿದಿದೆ. ರಷ್ಯಾ ನಡೆಯಿಂದ ಬೇಸತ್ತಿರುವ ಬ್ರಿಟನ್​ ಮತ್ತು ಜರ್ಮನಿ ಈಗಾಗಲೇ ಆರ್ಥಿಕ ನಿರ್ಬಂಧಗಳನ್ನು ರಷ್ಯಾ ಮೇಲೆ ಹೇರಿದ್ದು, ಇದರ ಬೆನ್ನಲ್ಲೇ ಇದೀಗ ಅಮೆರಿಕ ಕೂಡ ಇದೇ ನಡೆಯನ್ನು ಅನುಸರಿಸಿದೆ.

    ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್​, ರಷ್ಯಾದ ಎರಡು ಆರ್ಥಿಕ ಸಂಸ್ಥೆಗಳ ಮೇಲೆ ನಾವು ನಿರ್ಬಂಧಗಳನ್ನು ಹೇರಿದ್ದೇವೆ. ಪಶ್ಚಿಮದ ರಾಷ್ಟ್ರಗಳಲ್ಲಿ ರಷ್ಯಾ ಇನ್ಮುಂದೆ ಯಾವುದೇ ಹಣದ ನೆರವು ಪಡೆಯಲಾಗದು ಮತ್ತು ಪಾಶ್ಚಿಮಾತ್ಯ ಮಾರುಕಟ್ಟೆಗಳಲ್ಲೂ ಇನ್ಮುಂದೆ ಯಾವುದೇ ವ್ಯವಹಾರ ಮಾಡಲಾಗದು. ನಾಳೆಯಿಂದಲೇ ನಾವು ರಷ್ಯಾ ಮೇಲೆ ನಿರ್ಬಂಧಗಳನ್ನು ಹೇರುತ್ತಿದ್ದೇವೆ ಎಂದು ತಿಳಿಸಿದ್ದಾರೆ.

    ನಿನ್ನೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತುರ್ತುಸಭೆಯ ಬಳಿಕ ಜರ್ಮನಿ ಮತ್ತು ಬ್ರಿಟನ್​ ರಾಷ್ಟ್ರಗಳು ರಷ್ಯಾ ವಿರುದ್ಧ ಆರ್ಥಿಕ ನಿರ್ಬಂಧ ಹೇರಿದ ಬೆನ್ನಲ್ಲೇ ಅಮೆರಿಕ ಕೂಡ ಇದೇ ಹೆಜ್ಜೆಯನ್ನು ಇಟ್ಟಿದೆ. ಯುರೋಪಿಯನ್ ಒಕ್ಕೂಟವು ಕೂಡ ಅನೇಕ ರಷ್ಯಾದ ಅಧಿಕಾರಿಗಳು ಮತ್ತು ರಷ್ಯಾದ ಸಶಸ್ತ್ರ ಪಡೆಗಳಿಗೆ ಹಣಕಾಸು ಒದಗಿಸುವ ಬ್ಯಾಂಕ್​ಗಳ ಮೇಲೆ ನಿರ್ಬಂಧಗಳನ್ನು ವಿಧಿಸಿದೆ.

    ಸಾಕಷ್ಟು ರಾಷ್ಟ್ರಗಳು ತಮ್ಮ ವಿರುದ್ಧ ನಿಂತು ಅನೇಕ ನಿರ್ಬಂಧಗಳನ್ನು ವಿಧಿಸುತ್ತಿದ್ದರೆ, ಸಂಯಮ ಕಾಯ್ದುಕೊಳ್ಳದೇ ಯುದ್ಧೋನ್ಮಾದದಲ್ಲಿರುವ ರಷ್ಯಾ ಯೂಕ್ರೇನ್​ ಮೇಲೆ ತನ್ನ ಆಕ್ರಮಣಕಾರಿ ನೀತಿಯನ್ನು ಅನುಸರಿಸಿದೆ. ಯೂಕ್ರೇನ್​ನಲ್ಲಿ ಬಂಡಾಯ ಎದ್ದಿರುವ ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಪ್ರಾಂತ್ಯಗಳನ್ನು​ ಸ್ವತಂತ್ರ ರಾಜ್ಯಗಳೆಂದು ಘೋಷಣೆ ಮಾಡಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್​ ಎರಡು ಪ್ರಾಂತ್ಯಗಳಲ್ಲಿ ಸೇನಾ ನಿಯೋಜನೆ ಮಾಡುವಂತೆ ಆದೇಶ ಹೊರಡಿಸಿದ್ದಾರೆ.

    ಯೂಕ್ರೇನ್​ನ ಪೂರ್ವಭಾಗದಲ್ಲಿನ ಬಂಡುಕೋರರ ಎರಡು ಪ್ರದೇಶಗಳನ್ನು ಸ್ವಾಯತ್ತವೆಂದು ರಷ್ಯಾ ಮಾನ್ಯ ಮಾಡಿದೆ. ಬಂಡುಕೋರರ ನಾಯಕರ ಜತೆಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ’ಬಹು ಹಿಂದೆಯೇ ಆಗಬೇಕಿದ್ದ ಒಪ್ಪಂದ ಈಗ ಕೈಗೊಡಿದೆ. ಡೊನೆಟ್ಕ್ಸ್ ಮತ್ತು ಲುಗಾನ್ಕ್ಸ್ ಜನರ ಸಾರ್ವಭೌಮತ್ವವನ್ನು ಎತ್ತಿಹಿಡಿಯಲಾಗಿದೆ’ ಎಂದಿದ್ದಾರೆ. ಇವೆರಡು ಭೂಭಾಗಗಳು 2014ರಿಂದ ತಾತ್ಕಾಲಿಕವಾಗಿ ಯೂಕ್ರೇನ್​ನ ಹಿಡಿತದಲ್ಲಿ ಇದ್ದವು ಈಗ ಅವು ಸ್ವತಂತ್ರಹೊಂಡಿವೆ ಎಂದು ಕ್ರೆಮ್ಲಿನ್​ನ (ರಷ್ಯಾ ಅಧ್ಯಕ್ಷರ ನಿವಾಸ) ವಕ್ತಾರರು ಹೇಳದ್ದಾರೆ. ಈಗ ಈ ಪ್ರದೇಶಕ್ಕೆ ರಷ್ಯಾ ಸೇನೆಯನ್ನು ಕಳುಹಿಸುತ್ತಿದೆ. ಇದು ಅಮೆರಿಕ ಮತ್ತು ಐರೋಪ್ಯ ಒಕ್ಕೂಟದ ಸಿಟ್ಟು ಹೆಚ್ಚಾಗಲು ಕಾರಣವಾಗಿದೆ, ಅಮೆರಿಕ ಜತೆಗೆ ನಡೆಸಲು ಉದ್ದೇಶಿಸಿದ್ದ ಶಾಂತಿ ಶೃಂಗಸಭೆಯ ಬಗ್ಗೆ ರಷ್ಯಾ ಉಲ್ಟಾ ಹೊಡೆದಿದೆ. ಫ್ರಾನ್ಸ್​ನ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್ ಮಧ್ಯಸ್ಥಿಕೆಯಿಂದ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ರಷ್ಯಾ ಅಧ್ಯಕ್ಷ ಪುತಿನ್ ಮಾತುಕತೆಗೆ ತಾತ್ವಿಕ ಒಪ್ಪಿಗೆ ನೀಡಿದ್ದರು. ಇದಾದ ಕೆಲವು ತಾಸಿನ ಬಳಿಕ ಈ ಕುರಿತಂತೆ ಹೇಳಿಕೆ ಬಿಡುಗಡೆ ಮಾಡಿದ ರಷ್ಯಾದ ಕ್ರೆಮ್ಲಿನ್ , ‘ಈ ಮಾತುಕತೆಗೆ ಮಹತ್ವವೇನೂ ಇಲ್ಲ ಮತ್ತು ಇದು ತೀರ ಮುಂಚಿತವಾಯಿತು’ ಎಂದು ಹೇಳುವ ಮೂಲಕ ಶಾಂತಿ ಮಾತುಕತೆಗೆ ತಣ್ಣೀರು ಎರಚಿದೆ. (ಏಜೆನ್ಸೀಸ್​)

    ವಿಶ್ವಸಂಸ್ಥೆಯಲ್ಲಿ ರಷ್ಯಾಗೆ ಹಿನ್ನಡೆ: ಯೂಕ್ರೇನ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭದ್ರತಾ ಮಂಡಳಿ ತುರ್ತು ಸಭೆ

    ಉತ್ತರ ಪ್ರದೇಶದಲ್ಲಿ ಇಂದು ನಾಲ್ಕನೇ ಹಂತದ ಮತದಾನ: 59 ಕ್ಷೇತ್ರ 624 ಅಭ್ಯರ್ಥಿಗಳ ಭವಿಷ್ಯ ಪಣಕ್ಕೆ..

    ಮದ್ಯ ಇಟ್ಟುಕೊಂಡಿದ್ದ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಮಲಪುತ್ರನನ್ನು ಬಂಧಿಸಿದ ಪೊಲೀಸರು: ಮುಂದೇನಾಯ್ತು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts