More

    ಐಪಿಎಲ್​ ಸೇರಿ ಎಲ್ಲ ಮಾದರಿ ಕ್ರಿಕೆಟ್​ಗೆ​ ಮಿಸ್ಟರ್​ 360 ಡಿಗ್ರಿ ಖ್ಯಾತಿಯ ಎಬಿ ಡಿವಿಲಿಯರ್ಸ್​ ನಿವೃತ್ತಿ

    ನವದೆಹಲಿ: ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಹಾಗೂ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಆಪತ್ಬಾಂಧವ, ಮಿಸ್ಟರ್​ 360 ಡಿಗ್ರಿ ಖ್ಯಾತಿಯ ಎಬಿ ಡಿವಿಲಿಯರ್ಸ್​ ಎಲ್ಲಾ ಮಾದರಿಯ ಕ್ರಿಕೆಟ್​ಗೆ ಶುಕ್ರವಾರ (ನ.19) ನಿವೃತ್ತಿ ಘೋಷಿಸಿದ್ದಾರೆ.

    ಈ ಬಗ್ಗೆ ಟ್ವೀಟ್​ ಮಾಡಿರುವ ಎಬಿಡಿ, ಇದೊಂದು ಅದ್ಭುತವಾದ ಪ್ರಯಾಣ ಆದರೆ, ಎಲ್ಲ ಮಾದರಿ ಕ್ರಿಕೆಟ್​ನಿಂದ ನಿವೃತ್ತಿ ತೆಗೆದುಕೊಳ್ಳಲು ನಿರ್ಧಾರ ಮಾಡಿದ್ದೇನೆ. ನಾನು ಶುದ್ಧವಾದ ಮತ್ತು ನಿರಂತರ ಉತ್ಸಾಹದಿಂದ ಆಟವನ್ನು ಆಡಿದ್ದೇನೆ. ಈ 37ನೇ ವಯಸ್ಸಿನಲ್ಲಿ ಜ್ವಾಲೆಯು ಇನ್ಮುಂದೆ ಪ್ರಕಾಶಮಾನವಾಗಿ ಉರಿಯಲಾರದು ಎಂದು ಎಬಿಡಿ ಮನದಾಳದ ಮಾತುಗಳನ್ನಾಡಿದ್ದಾರೆ.

    ನನ್ನ ಮೇಲೆ ಕ್ರಿಕೆಟ್​ ತುಂಬಾ ದಯೆ ತೋರಿದೆ. ಆರ್​ಸಿಬಿ, ಟೈಟಾನ್​ ಅಥವಾ ಪ್ರೋಟಿಯಸ್​ ಸೇರಿದಂತೆ ವಿಶ್ವದಾದ್ಯಂತ ಅನೇಕ ತಂಡಗಳ ಜತೆ ಆಡಿದ್ದೇನೆ. ಕ್ರಿಕೆಟ್​ ಮಾತ್ರ ನನಗೆ ಕಲ್ಪಿಸಿಕೊಳ್ಳಲಾಗದ ಅನುಭವ ಮತ್ತು ಅವಕಾಶಗಳನ್ನು ನೀಡಿದೆ. ಅದಕ್ಕಾಗಿ ನಾನು ಯಾವಾಗಲೂ ಕ್ರಿಕೆಟ್​ಗೆ ಋಣಿ ಆಗಿರುತ್ತೇನೆಂದು ಹೇಳಿದ್ದಾರೆ.

    ನನ್ನ ದಾರಿಯಲ್ಲಿ ಪ್ರಯಾಣ ಮಾಡಿದ ನನ್ನ ಟೀಮ್​ ಮೇಟ್​, ಎದುರಾಳಿ ತಂಡದ ಪ್ರತಿ ಆಟಗಾರ, ಪ್ರತಿ ಕೋಚ್​, ಪ್ರತಿ ಭೌತಚಿಕಿತ್ಸಕ (ಫಿಸಿಯೋ) ಮತ್ತು ಪ್ರತಿ ಸಿಬ್ಬಂದಿಗೆ ಧನ್ಯವಾದ ಹೇಳುತ್ತೇನೆ. ದಕ್ಷಿಣ ಆಫ್ರಿಕಾ ಮತ್ತು ಭಾರತದಿಂದ ದೊರೆತ ಅಭೂತಪೂರ್ವ ಬೆಂಬಲಕ್ಕೆ ನಾನು ಋಣಿಯಾಗಿದ್ದೇನೆಂದು ಎಬಿಡಿ ಭಾವುಕ ಮಾತುಗಳನ್ನಾಡಿದ್ದಾರೆ.

    ನನ್ನ ಪಾಲಕರು, ಸಹೋದರರು ಮತ್ತು ನನ್ನ ಪತ್ನಿ ಡ್ಯಾನಿಯಲ್ಲೆ ಹಾಗೂ ನನ್ನ ಮಕ್ಕಳ ತ್ಯಾಗ ಇರದಿದ್ದರೆ ಇದ್ಯಾವುದು ಸಾಧ್ಯವಿರುತ್ತಿರಲಿಲ್ಲ. ನಾನು ನಮ್ಮ ಜೀವನದ ಮುಂದಿನ ಅಧ್ಯಾಯವನ್ನು ಎದುರುನೋಡುತ್ತಿದ್ದೇನೆ ಹಾಗೂ ನಾನು ಅವುಗಳನ್ನು ನಿಜವಾಗಿಯೂ ಮೊದಲ ಸ್ಥಾನದಲ್ಲಿ ಇರಿಸಬಹುದು ಎಂದು ಹೇಳುವ ಮೂಲಕ ಭವಿಷ್ಯದಲ್ಲಿ ಕುಟುಂಬದ ಜತೆ ಹೆಚ್ಚಿನ ಕಾಲ ಕಳೆಯುವ ಹಂಬಲವನ್ನು ಎಬಿಡಿ ವ್ಯಕ್ತಪಡಿಸಿದ್ದಾರೆ.

    ಅಣ್ಣಾವ್ರ ಕುಟುಂಬದ ಬಗ್ಗೆ ಗೌರವವಿದೆ ಆದ್ರೆ ಪುನೀತ್​ ಸರ್​ 5 ಲಕ್ಷ ರೂ. ಕೊಟ್ಟಿಲ್ಲ: ಬುಲೆಟ್​ ಪ್ರಕಾಶ್​ ಪುತ್ರ ರಕ್ಷಕ್​

    ವಂಚನೆ ಆರೋಪ: ಇಬ್ಬರು ಉದ್ಯಮಿಗಳ ವಿರುದ್ಧ ಪೊಲೀಸ್​ ಠಾಣೆ ಮೆಟ್ಟಿಲೇರಿದ ನಟಿ ಸ್ನೇಹಾ!

    VIDEO: ಅಪ್ಪು ಎಲ್ಲಿದ್ದಾರೆ? ಆಸೆ ಏನಿತ್ತು? ಮತ್ತೆ ಹುಟ್ತಾರಾ…? ಜೀವಂತ ವ್ಯಕ್ತಿಯ ದೇಹದಲ್ಲಿ ಆತ್ಮ ಕರೆಸಿ ಮಾತನಾಡುವೆ ಎಂದ ಗುರೂಜಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts