More

    3,300 ವರ್ಷ ಹಳೆಯದಾದ ಕಮಲದ ಹೂವಿನ ಚಿತ್ರವಿರುವ ಸೀಸದ ತಾಯಿತ ಪತ್ತೆ..!

    ಜೆರುಸಲೇಮ್​: ಸುಮಾರು 3,300 ವರ್ಷ ಹಳೆಯದಾದ ಮತ್ತು ಪ್ರಾಚೀನ ಹೀಬ್ರೂ ಲಿಪಿ ಇರುವ ಸೀಸದ ತಾಯಿತವನ್ನು ಇಸ್ರೇಲ್​ನ ಪುರಾತತ್ವಶಾಸ್ತ್ರಜ್ಞರು ಪತ್ತೆ ಹಚ್ಚಿರುವುದಾಗಿ ಇಸ್ರೇಲ್​ ಸಮೇರಿಯಾ ವಲಯ ಮಂಡಳಿ ಬುಧವಾರ ತಿಳಿಸಿದೆ.

    ಈ ವಿಶೇಷ ತಾಯಿತವು ಉತ್ತರ ವೆಸ್ಟ್​ ಬ್ಯಾಂಕ್​ನ ಸಮೆರಿಯಾ ವಲಯದ ಮೌಂಟ್​ ಎಬಾಲ್​ನಲ್ಲಿ ಪತ್ತೆಯಾಗಿದೆ ಎಂದು ಮಂಡಳಿ ಹೇಳಿದೆ. ಬೈಬಲ್​ನ ಬಲಿಪೀಠವನ್ನು ಕಂಡುಹಿಡಿಯಲಾದ ಬೆಟ್ಟದ ಮೇಲಿನ ಪುರಾತತ್ತ್ವ ಶಾಸ್ತ್ರದ ಸ್ಥಳದಲ್ಲಿ ನಡೆಸಿದ ನಡೆಸಿದ ಉತ್ಖನನ ವೇಳೆ ಅವಶೇಷಗಳ ನಡುವೆ ಪತ್ತೆಯಾಗಿದೆ.

    ಚೌಕಾಕಾರದ ಎರಡು ಸೆ.ಮೀ ಉದ್ದ ತಾಯಿತವೂ ಕಮಲದ ಹೂವಿನ ಗುರುತುಗಳನ್ನು ಸಹ ಹೊಂದಿದೆ. ಇದು ಪ್ರಾಚೀನ ಈಜಿಪ್ಟ್‌ನಲ್ಲಿ ಪ್ರಮುಖ ಸಂಕೇತವಾಗಿತ್ತು ಎಂದು ಹೇಳಲಾಗಿದೆ. ಪುರಾತತ್ತ್ವಜ್ಞರು ತಾಯಿತವನ್ನು ತೆರೆಯಲು ಪ್ರಯತ್ನಿಸಿದಾದರೂ ಅದರ ಅಂಚು ಸೂಕ್ಷ್ಮವಾಗಿದ್ದು, ಹಾಳಾಗುವ ಭೀತಿಯಿಂದ ಅದನ್ನು ಕೈಬಿಡಲಾಗಿದೆ.

    ಪ್ರೇಗ್‌ನಲ್ಲಿರುವ ಪ್ರಯೋಗಾಲಯದಲ್ಲಿ ತೆಗೆದ ಛಾಯಾಚಿತ್ರಗಳು ತಾಯಿತದಲ್ಲಿ ಅನೇಕ ಜಾಡುಗಳನ್ನು ಬಹಿರಂಗಪಡಿಸಿದವು. ಅವುಗಳಲ್ಲಿ ಒಂದು ಗೂಳಿಯ ತಲೆ ಅಥವಾ ಅಲೆಫ್, ಹೀಬ್ರೂ ವರ್ಣಮಾಲೆಯ ಮೊದಲ ಅಕ್ಷರ ಮತ್ತು ಇನ್ನೊಂದು ಹೂವನ್ನು ತೋರಿಸುತ್ತಿದೆ. (ಏಜೆನ್ಸೀಸ್​)

    ಹಿಂದೂ ಹೆಸರಿಟ್ಟುಕೊಂಡು ಭಾರತದ ಪೌರತ್ವ! ಬೆಂಗಳೂರಿನಲ್ಲಿ ತಣ್ಣಗೆ ನೆಲೆಸಿದ್ದ ಬಾಂಗ್ಲಾ ಯುವತಿ ಅರೆಸ್ಟ್‌

    ದೇವಸ್ಥಾನ ಗೋಪುರದ ಫೋಟೋ ಪೋಸ್ಟ್​ ಮಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ರಾಮ್​ಚರಣ್​ ಪತ್ನಿ ಉಪಾಸನ!

    ಧನುಷ್ ಜತೆ ಮಗಳ ಡಿವೋರ್ಸ್​: ಆಪ್ತರ ಬಳಿ ತಲೈವಾ ರಜನಿಕಾಂತ್ ಹೇಳಿಕೊಂಡ ನೋವಿನ ಮಾತಿದು​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts