More

    ಇಸ್ರೇಲ್​ ಹಡಗಿನಲ್ಲಿರುವ ಭಾರತೀಯರ ಭೇಟಿಗೆ ಒಪ್ಪಿಕೊಂಡ ಇರಾನ್​

    ನವದೆಹಲಿ: ಇರಾನ್ ವಶಪಡಿಸಿಕೊಂಡಿರುವ ಇಸ್ರೇಲ್ ಸಂಬಂಧಿತ ಸರಕು ಹಡಗಿನಲ್ಲಿರುವ 17 ಭಾರತೀಯ ಸಿಬ್ಬಂದಿಯನ್ನು ಭೇಟಿ ಮಾಡಲು ಭಾರತದ ಅಧಿಕಾರಿಗಳಿಗೆ ಅವಕಾಶ ನೀಡಲಾಗುವುದು ಎಂದು ಇರಾನ್ ವಿದೇಶಾಂಗ ಸಚಿವಾಲಯ ಸೋಮವಾರ ತಿಳಿಸಿದೆ.

    ಇದನ್ನೂ ಓದಿ: ಒಂದೇ ಕುಟುಂಬದಲ್ಲಿ 350 ಮತದಾರರು! ನೇಪಾಳದ ಈ ಥಾಪಾ ಕುಟುಂಬ ಇರುವುದಾದರೂ ಎಲ್ಲಿ? ವಿವರ ಇಲ್ಲಿದೆ..

    ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಇರಾನ್ ವಿದೇಶಾಂಗ ಸಚಿವ ಅಮೀರ್ ಅಬ್ದುಲ್ಲಾಹಿಯಾನ್ ಅವರಿಗೆ ಕರೆ ಮಾಡಿ ಸಿಬ್ಬಂದಿಯ ಪರಿಸ್ಥಿತಿ ಕುರಿತು ಕಳವಳ ವ್ಯಕ್ತಪಡಿಸಿದ ನಂತರ ಈ ಭರವಸೆ ಬಂದಿದೆ.

    ಜೈಶಂಕರ್ ಅವರು ಈ ವಿಷಯದಲ್ಲಿ ನೆರವು ಕೋರಿದ್ದಾರೆ ಎಂದು ಇರಾನ್ ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ವಶಪಡಿಸಿಕೊಂಡ ಹಡಗಿನ ವಿವರಗಳನ್ನು ನಾವು ಸಂಗ್ರಹಿಸುತ್ತಿದ್ದೇವೆ. ಶೀಘ್ರ ಭಾರತ ಸರ್ಕಾರದ ಪ್ರತಿನಿಧಿಗಳು ಈ ಹಡಗಿನ ಸಿಬ್ಬಂದಿಯನ್ನು ಭೇಟಿ ಮಾಡಲು ಸಾಧ್ಯವಾಗುತ್ತದೆ ಎಂದು ಡಾ. ಅಮೀರ್ ಅಬ್ದುಲ್ಲಾಹಿಯಾನ್ ಹೇಳಿದ್ದಾರೆ.

    ಶನಿವಾರ ಹಡಗನ್ನು ವಶಪಡಿಸಿಕೊಂಡ ಕೂಡಲೇ ಸಿಬ್ಬಂದಿಯನ್ನು ಬಿಡುಗಡೆ ಮಾಡಲು ಭಾರತವು ಇರಾನ್‌ ಗೆ ಒತ್ತಾಯಿಸಿತ್ತು. ಇದೇ ಸಂದರ್ಭದಲ್ಲಿ ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಉಲ್ಬಣಗೊಳ್ಳುವುದನ್ನು ತಪ್ಪಿಸಬೇಕಿದೆ. ಉಭಯ ದೇಶಗಳು ಸಂಯಮ ಪಾಲಿಸಬೇಕಿದೆ ಎಂದು ಜೈಶಂಕರ್ ಕರೆ ನೀಡಿದ್ದನ್ನು ಸ್ಮರಿಸಬಹುದು.

    ಸಿರಿಯಾದಲ್ಲಿನ ತನ್ನ ದೂತಾವಾಸದ ಮೇಲೆ ಇಸ್ರೇಲ್​ ದಾಳಿ ನಡೆಸಿದ ವಾರದ ನಂತರ ನೂರಾರು ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಹಾರಿಸುವ ಮೂಲಕ ಇರಾನ್ ಇಸ್ರೇಲ್ ಮೇಲೆ ತನ್ನ ಮೊದಲ ನೇರ ದಾಳಿಯನ್ನು ಪ್ರಾರಂಭಿಸಿತ್ತು.

    ಅಯೋಧ್ಯೆ ಬಾಲರಾಮ ದೇವರ ದರ್ಶನಕ್ಕೆ ವಿಐಪಿ ದರ್ಶನ ನಿಷೇಧ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts