More

    ಅಯೋಧ್ಯೆ ಬಾಲರಾಮ ದೇವರ ದರ್ಶನಕ್ಕೆ ವಿಐಪಿ ದರ್ಶನ ನಿಷೇಧ!

    ಅಯೋಧ್ಯೆ: ರಾಮನವಮಿಯ ಸಂದರ್ಭದಲ್ಲಿ ಶ್ರೀರಾಮ ಮಂದಿರ ಟ್ರಸ್ಟ್ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಇದರಲ್ಲಿ ರಾಮಲಲ್ಲಾ ದೇವರ ದರ್ಶನಕ್ಕೆ ವಿಐಪಿಗಳ ಪ್ರವೇಶವನ್ನು ನಿಷೇಧಿಸಲಾಗಿದೆ.

    ಇದನ್ನೂ ಓದಿ: ಸಲ್ಮಾನ್ ಖಾನ್ ಹೌಸ್ ಫೈರಿಂಗ್: ಇಬ್ಬರು ಶಂಕಿತರ ಬಂಧನ

    ಅಧಿಸೂಚನೆಯ ಪ್ರಕಾರ ವಿಐಪಿ ದರ್ಶನವನ್ನು ನವರಾತ್ರಿಯ ನಾಲ್ಕು ದಿನ ಅಂದರೆ ಏಪ್ರಿಲ್ 15 ರಿಂದ 18 ರವರೆಗೆ ನಿಷೇಧಿಸಲಾಗಿದೆ. ಇದಲ್ಲದೆ, ರಾಮನವಮಿ ಸಲುವಾಗಿ ಭಕ್ತರು ಇನ್ನೂ ಅನೇಕ ವಿಷಯಗಳನ್ನು ಗಮನಿಸಬೇಕಾಗುತ್ತದೆ.

    ರಾಮನವಮಿಯ ಸಂದರ್ಭದಲ್ಲಿ ದರ್ಶನಕ್ಕೆ ವಿಐಪಿ ಪಾಸ್‌ಗಳಿಗೆ ನಿಷೇಧ ಹೇರಲಾಗಿದೆ. ಟ್ರಸ್ಟ್ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ, ವಿಐಪಿ ಪಾಸ್‌ಗಳು ಲಭ್ಯವಿರುವುದಿಲ್ಲ. ಹೀಗಾಗಿ ಏಪ್ರಿಲ್ 15 ರಿಂದ ಏಪ್ರಿಲ್ 18 ರವರೆಗೆ ಆರತಿಗಾಗಿ ಭಕ್ತರಿಗೆ ಅನುಕೂಲಕರ ದರ್ಶನ ಕಲ್ಪಿಸಲಾಗಿದೆ.

    ಇದರರ್ಥ ರಾಮ ನವಮಿ ಸಂದರ್ಭ ಸಾಮಾನ್ಯ ಮತ್ತು ವಿಶೇಷ ಭಕ್ತರ ದರ್ಶನದ ವ್ಯವಸ್ಥೆಯನ್ನು ಒಂದೇ ರೀತಿ ಇರಿಸಲಾಗಿದೆ. ಭಗವಾನ್ ಬಾಲರಾಮದೇವರು ಈ ನಾಲ್ಕು ದಿನಗಳಲ್ಲಿ ಎಲ್ಲಾ ಭಕ್ತರಿಗೆ ಒಂದೇ ರೀತಿಯ ದರ್ಶನ ಭಾಗ್ಯ ನೀಡುತ್ತಾನೆ, ಯಾರಿಗೂ ವಿಶೇಷ ಉಪಚಾರವಿಲ್ಲ.

    ಮೊಬೈಲ್ ಫೋನ್‌ಗಳ ನಿಷೇಧ: ಈ ಹಿಂದೆ ಏಪ್ರಿಲ್ 15 ಮತ್ತು ಏಪ್ರಿಲ್ 18 ರ ನಡುವೆ ಭಕ್ತರು ಆನ್‌ಲೈನ್ ಬುಕ್​ ಮಾಡಿದ್ದ ಪಾಸ್​ಗಳನ್ನು ಹೊಸ ಆದೇಶದ ಪ್ರಕಾರ ರದ್ದುಗೊಳಿಸಲಾಗಿದೆ. ರಾಮನ ಜನ್ಮದಿನದ ಸಂದರ್ಭದಲ್ಲಿ ಮೊಬೈಲ್ ಫೋನ್ ತರಬೇಡಿ ಎಂದು ರಾಮಮಂದಿರ ಟ್ರಸ್ಟ್‌ನ ಕಾರ್ಯದರ್ಶಿ ಜನರಿಗೆ ಮನವಿ ಮಾಡಿದ್ದಾರೆ.

    ಇಸ್ರೇಲಿ ಬಿಲಿಯನೇರ್ ಹಡಗನ್ನು ವಶಪಡಿಸಿಕೊಂಡ ಇರಾನ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts