More

    ಒಂದೇ ಕುಟುಂಬದಲ್ಲಿ 350 ಮತದಾರರು! ನೇಪಾಳದ ಈ ಥಾಪಾ ಕುಟುಂಬ ಇರುವುದಾದರೂ ಎಲ್ಲಿ? ವಿವರ ಇಲ್ಲಿದೆ..

    ದಿಸ್ಪುರ (ಅಸ್ಸಾಂ): ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತದಲ್ಲಿ ಚುನಾವಣೆ ಹಬ್ಬ ನಡೆಯುತ್ತಿದ್ದು, ಈ ಬಾರಿ ಲೋಕಸಭಾ ಚುನಾವಣೆ ಸಂದರ್ಭಕ್ಕೆ ಹಲವು ವಿಶೇಷ, ಗಮನಸೆಳೆಯುವ ವಿಚಾರಗಳು ಬೆಳಕಿಗೆ ಬರುತ್ತಿವೆ. ಈ ಪೈಕಿ ಅಸ್ಸಾಂನ ಸೋನಿತ್ಪುರ ಲೋಕಸಭಾ ಕ್ಷೇತ್ರದ ದಿ.ರೋಣ್ ಬಹದೂರ್ ಥಾಪಾ ಅವರ ಕೂಡುಕುಟುಂಬವೂ ಒಂದು. ಈ ಕುಟುಂಬ ದೊಡ್ಡ ಸಂಖ್ಯೆಯ ಮತದಾರರ ಕಾರಣಕ್ಕೆ ದೇಶದ ಗಮನಸೆಳೆದಿದೆ.

    ಇದನ್ನೂ ಓದಿ: ಅಯೋಧ್ಯೆ ಬಾಲರಾಮ ದೇವರ ದರ್ಶನಕ್ಕೆ ವಿಐಪಿ ದರ್ಶನ ನಿಷೇಧ!

    ಅಸ್ಸಾಂನಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ಏ. 19ಕ್ಕೆ ಮತದಾನ ನಡೆಯಲಿದೆ. ರೋಣ್ ಬಹದೂರ್ ಥಾಪಾ ಕುಟುಂಬ ಸೋನಿತ್ಪುರ ಜಿಲ್ಲೆಯ ಫುಲೋಗುರಿ ನೇಪಾಳಿ ಪಾಮ್‌ನಲ್ಲಿದ್ದು, 350ರ ಮತದಾರರು ಇದೊಂದೇ ಕುಟುಂಬದಲ್ಲಿ ಇದ್ದಾರೆ.

    ನೇಪಾಳಿ ಪಾಮ್‌ ಗ್ರಾಮವು ರಂಗಪಾರಾ ವಿಧಾನಸಭಾ ಕ್ಷೇತ್ರದಲ್ಲಿದೆ. ಈ ಕುಟುಂಬ ಸದಸ್ಯರು ಏಪ್ರಿಲ್ 19ರಂದು ಸೋನಿತ್ಪುರ ಲೋಕಸಭಾ ಪ್ರತಿನಿಧಿಯನ್ನು ಆಯ್ಕೆ ಮಾಡಲು ಮತಚಲಾಯಿಸಲಿದೆ. ಥಾಪಾ ವಂಶಸ್ಥರ ಸುಮಾರು 300 ಕುಟುಂಬಗಳು ಇದೇ ಪ್ರದೇಶದಲ್ಲಿ ಬಹಳ ವರ್ಷಗಳಿಂದ ನೆಲೆಸಿವೆ. 1200 ಸದಸ್ಯರ ಥಾಪಾ ಕುಟುಂಬದಲ್ಲಿ 350ಕ್ಕೂ ಹೆಚ್ಚು ಮತದಾರರು ಪ್ರಸ್ತುತ ಇದ್ದಾರೆ.

    ದಿವಂಗತ ರೋಣ್ ಬಹಾದೂರ್ ಥಾಪಾಗೆ 5 ಪತ್ನಿಯರಿದ್ದರು. ಈ ದಾಂಪತ್ಯದಲ್ಲಿ ಅವರಿಗೆ 12 ಪುತ್ರರು ಮತ್ತು 9 ಪುತ್ರಿಯರು. ಮೊಮ್ಮಕ್ಕಳ ಸಂಖ್ಯೆ 150ಕ್ಕೂ ಹೆಚ್ಚು. ಈ ಕುಟುಂಬ ಬೆಳೆದು ಈಗ ಒಟ್ಟು 1200 ಸದಸ್ಯರಿದ್ದು, ಇದರಲ್ಲಿ 350ಮಂದಿ ಈ ಬಾರಿ ಮತಚಲಾಯಿಸಲಿದ್ದಾರೆ. ಈ ವಿಷಯವನ್ನು ದಿ.ರೋಣ್‌ ಬಹದ್ದೂರ್ ಪುತ್ರ ತಿಲ್ ಬಹದೂರ್ ಥಾಪಾ ತಿಳಿಸಿದ್ದಾರೆ.

    “ನನ್ನ ತಂದೆ ಮತ್ತು ತಾತ 1964 ರಲ್ಲಿ ಇಲ್ಲಿಗೆ ಬಂದು ನೆಲೆಸಿದರು. ನನ್ನ ತಂದೆಗೆ ಐದು ಹೆಂಡತಿಯರಿದ್ದರು. ನಾವು 12 ಸಹೋದರರು ಮತ್ತು 9 ಸಹೋದರಿಯರು. ತಂದೆಗೆ ಅವರ ಪುತ್ರರಿಂದ 56 ಮೊಮ್ಮಕ್ಕಳನ್ನು ಹೊಂದಿದ್ದರು. ಪುತ್ರಿಯರ ಕಡೆಯಿಂದ ಮೊಮ್ಮಕ್ಕಳ ಸಂಖ್ಯೆ ಗೊತ್ತಿಲ್ಲ ಎಂದು ಹೇಳುತ್ತಾರೆ.

    ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಕಲ್ಯಾಣ ಯೋಜನೆಗಳ ಲಾಭವನ್ನು ಕುಟುಂಬಕ್ಕೆ ಇನ್ನೂ ಪಡೆಯಲು ಸಾಧ್ಯವಾಗಿಲ್ಲ. ನಮ್ಮ ಮಕ್ಕಳು ಉನ್ನತ ಶಿಕ್ಷಣ ಪಡೆದರು. ಆದರೆ ಯಾವುದೇ ಸರ್ಕಾರಿ ಕೆಲಸ ಸಿಗಲಿಲ್ಲ. ಕೆಲವರು ಬೆಂಗಳೂರು ಮತ್ತಿತರ ಕಡೆ ಉದ್ಯೋಗ ಅರಸಿ ಹೋಗಿದ್ದಾರೆ. ಎಲ್ಲರೂ ಮತಚಲಾಯಿಸಲು ಸ್ವಗ್ರಾಮಕ್ಕೆ ಬರುತ್ತಾರೆ. ನಾನು 1989 ರಿಂದ ಗ್ರಾಮ ಪ್ರಧಾನನಾಗಿ ಕೆಲಸ ಮಾಡುತ್ತಿದ್ದೇನೆ. ನನಗೆ 8 ಗಂಡು ಮತ್ತು 3 ಹೆಣ್ಣು ಮಕ್ಕಳಿದ್ದಾರೆ” ಎಂದು ತಿಲ್ ಬಹದ್ದೂರ್ ಹೇಳಿದರು.

    ಸೋನಿತ್ಪುರ ಲೋಕಸಭಾ ಕ್ಷೇತ್ರದಲ್ಲಿ 16.25 ಲಕ್ಷ ಮತದಾರರು ಇದ್ದಾರೆ. ಈ ಕ್ಷೇತ್ರದಲ್ಲಿ 9 ವಿಧಾನಸಭಾ ಕ್ಷೇತ್ರಗಳಿವೆ. ಅಸ್ಸಾಂನ 14 ಲೋಕಸಭಾ ಕ್ಷೇತ್ರಗಳಿಗೆ ಮೂರು ಹಂತಗಳಲ್ಲಿ ಅಂದರೆ ಏಪ್ರಿಲ್ 19, ಏಪ್ರಿಲ್ 26, ಮೇ 7 ರಂದು ಮತದಾನ ನಡೆಯದಲಿದೆ.

    ವಿಶ್ವ ವಿಖ್ಯಾತ ಬೆಂಗಳೂರು ಕರಗ ಶಕ್ತ್ಯುತ್ಸವಕ್ಕೆ ಚಾಲನೆ ಇಂದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts