More

    ಬಸ್​- ಗ್ಯಾಸ್​ ಸಿಲಿಂಡರ್​ ಟ್ರಕ್​​ ನಡುವೆ ಭೀಕರ ಅಪಘಾತ: 17 ಮಂದಿ ಸಾವು, ಪರಿಹಾರ ಘೋಷಿಸಿದ ಪ್ರಧಾನಿ ಮೋದಿ

    ಪಕುರ್​: ಗ್ಯಾಸ್​ ಸಿಲಿಂಡರ್​ ಸಾಗಿಸುವ ಟ್ರಕ್​ ಮತ್ತು ಬಸ್​ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 17 ಮಂದಿ ಪ್ರಯಾಣಿಕರು ದಾರುಣವಾಗಿ ಮೃತಪಟ್ಟಿದ್ದು, ಇತರೆ 26 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬುಧವಾರ ಬೆಳಗ್ಗೆ ಜಾರ್ಖಂಡ್​ನ ಪಕುರ್​ ಜಿಲ್ಲೆಯಲ್ಲಿ ನಡೆದಿದ್ದು, ಮೃತರ ಸಾವಿಗೆ ಸಂತಾಪ ಸೂಚಿಸಿರುವ ಪ್ರಧಾನಿ ಮೋದಿ ಪರಿಹಾರ ಘೋಷಿಸಿದ್ದಾರೆ.

    ಬುಧವಾರ 8.30ರ ಸುಮಾರಿಗೆ ಗೋವಿಂದ್​ಪುರ್​-ಸಾಹಿಬ್​ಗಂಜ್​ ರಾಜ್ಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಸುಮಾರು 40 ಪ್ರಯಾಣಿಕರು ಬಸ್​ನಲ್ಲಿದ್ದರು. ಸಾಹಿಬ್​ಗಂಜ್​ನ ಬರ್ಹಾರ್ವಾದಿಂದ ಡಿಯೋಘರ್​ ಜಿಲ್ಲೆಯ ಜಾಸಿಧಿಹ್​ ಕಡೆಗೆ ಬಸ್​ ತೆರಳುತ್ತಿತ್ತು. ಈ ವೇಳೆ ಎದುರಿಗೆ ಬಂದ ಗ್ಯಾಸ್​ ಸಿಲಿಂಡರ್​ ಸಾಗಾಟದ ಟ್ರಕ್​ ಡಿಕ್ಕಿ ಹೊಡೆದಿದೆ. ಪರಿಣಾಮ 17 ಮಂದಿ ಮೃತಪಟ್ಟಿದ್ದು, 26 ಮಂದಿ ಗಾಯಗೊಂಡಿದ್ದಾರೆ. ಗ್ಯಾಸ್​ ಕಟರ್​ ಸಹಾಯದಿಂದ ಬಸ್​ನಲ್ಲಿ ಸಿಲುಕಿದ್ದ ಮೃತದೇಹ ಮತ್ತು ಗಾಯಗೊಂಡವರನ್ನು ರಕ್ಷಣೆ ಮಾಡಲಾಗಿದೆ.

    ರಸ್ತೆಯಲ್ಲಿ ತೀವ್ರವಾಗಿ ಮಂಜು ಕವಿದಿದ್ದರಿಂದ ಸ್ಪಷ್ಟವಾಗಿ ಗೋಚರಿಸದೇ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಡಿಕ್ಕಿಯಾದರೂ ಯಾವುದೇ ಗ್ಯಾಸ್​ ಸಿಲಿಂಡರ್​ ಸ್ಫೋಟವಾಗಿಲ್ಲ. ಮೃತರ ಕುಟುಂಬಕ್ಕೆ ತಲಾ ಒಂದು ಲಕ್ಷ ರೂ. ಪರಿಹಾರವನ್ನು ಜಿಲ್ಲಾಡಳಿತ ಘೋಷಣೆ ಮಾಡಿದೆ.

    ಘಟನೆಯ ಬಗ್ಗೆ ಪ್ರಧಾನಿ ಮೋದಿ ಕೂಡ ಟ್ವೀಟ್​ ಮಾಡಿದ್ದು, ಜಾರ್ಖಂಡ್​ನ ಪಕುರ್​ನಲ್ಲಿ ನಡೆದ ಅಪಘಾತದಿಂದ ಆಘಾತಕ್ಕೆ ಒಳಗಾಗಿದ್ದೇನೆ. ಸಂತ್ರಸ್ತ ಕುಟುಂಬಗಳಿಗೆ ಸಾಂತ್ವಾನ ಹೇಳಲು ಬಯಸುತ್ತೇನೆ. ಮೃತರ ಸಾವಿಗೆ ಸಂತಾಪ ಸೂಚಿಸುತ್ತೇನೆ ಮತ್ತು ಗಾಯಗೊಂಡವರ ಶೀಘ್ರ ಚೇತರಿಕೆಗೆ ಪ್ರಾರ್ಥಿಸುತ್ತೇನೆ. ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಮತ್ತು ಗಾಯಾಳುಗಳಿಗೆ ತಲಾ 50 ಸಾವಿರ ರೂ. ಪರಿಹಾರ ನೀಡಲು ಸೂಚನೆ ನೀಡಿದ್ದೇನೆಂದು ಪ್ರಧಾನಿ ಮೋದಿ ಟ್ವೀಟ್​ನಲ್ಲಿ ತಿಳಿಸಿದ್ದಾರೆ. (ಏಜೆನ್ಸೀಸ್​)

    ನಿದ್ರೆಯಿಲ್ಲದ ಅನೇಕ ರಾತ್ರಿಗಳನ್ನು ಕಳೆದಿದ್ದೇನೆ: ಅತ್ಯಂತ ನೋವಿನ ಸಂಗತಿ ಬಿಚ್ಚಿಟ್ಟ ಕೆಜಿಎಫ್​ ನಟಿ​

    20 ನಿಮಿಷ ಫ್ಲೈಓವರ್​ನಲ್ಲಿ ಸಿಲುಕಿದ ಮೋದಿ; ಇತಿಹಾಸದಲ್ಲಿ ಕರಾಳ ದಿನ..

    ದಿಢೀರ್ ಮೋಡ ಕಾರಣ ಕಾಪ್ಟರ್ ಪತನ; ರಾವತ್ ಹೆಲಿಕಾಪ್ಟರ್ ದುರಂತ ಕುರಿತ ವರದಿ ಸಲ್ಲಿಕೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts