More

    ಯೋಧರು ಸಾರ್ವಜನಿಕರ ಮಧ್ಯೆ ಬೀದಿರಂಪ: ಕ್ಷಮೆ ಯಾಚಿಸುವವರೆಗೂ ಸೈನಿಕರನ್ನು ಬಿಡದ ಜನರು..

    ಹೊಸೂರು: ಸೇನಾಸಲಕರಣೆ ಸಾಗಿಸುತ್ತಿದ್ದ ವಾಹನವನ್ನು ಸರ್ಕಾರಿ ಸಾರಿಗೆ ಬಸ್ ಓವರ್‌ಟೇಕ್ ಮಾಡಿದ ಕಾರಣಕ್ಕೆ ಏರ್ಪಟ್ಟ ಗಲಾಟೆ ಸಾರ್ವಜನಿಕರು ಮತ್ತು ಯೋಧರ ನಡುವೆ ಬೀದಿರಂಪಕ್ಕೆ ದಾರಿ ಮಾಡಿಕೊಟ್ಟ ಪ್ರಕರಣ ಸೋಮವಾರ ಕೃಷ್ಣಗಿರಿ ಬಳಿ ನಡೆದಿದೆ.

    ಏನಿದು ಪ್ರಕರಣ?: ಕೇಂದ್ರಿಯ ಕೈಗಾರಿಕಾ ಭದ್ರತಾ ಪಡೆ ವಾಹನಗಳಲ್ಲಿ ವೆಲ್ಲೂರು ಜಿಲ್ಲೆಯಿಂದ ಬೆಂಗಳೂರು ಕಡೆಗೆ ಸೇನಾ ಸಲಕರಣೆಗಳನ್ನು ಸಾಗಿಸಲಾಗುತ್ತಿತ್ತು, ಸಲಕರಣೆ ಇದ್ದ ವಾಹನವನ್ನು ಎರಡು ಎಸ್ಕಾರ್ಟ್ ವಾಹನಗಳು ಹಿಂಬಾಲಿಸುತ್ತಿದ್ದವು. ಕೃಷ್ಣಗಿರಿ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ತಮಿಳುನಾಡು ಸರ್ಕಾರಿ ಬಸ್ ಓವರ್‌ಟೇಕ್ ಮಾಡಿದೆ. ಇದರಿಂದ ಸಿಟ್ಟಿಗೆದ್ದ ಸೇನಾಪಡೆಯ ಯೋಧರು ಬಸ್‌ಗೆ ತಡೆ ಹಾಕಿ ಚಾಲಕನ ಮೇಲೆ ಹಲ್ಲೆ ನಡೆಸಿದರು ಎನ್ನಲಾಗಿದೆ.

    ಯೋಧರ ವಾಹನ ಅಡ್ಡಗಟ್ಟಿದ ಬಸ್: ಘಟನೆ ಬಳಿಕ ಮುಂದೆ ತೆರಳಿದ ಸೇನಾ ವಾಹನವನ್ನು ಮತ್ತೆ ಓವರ್‌ಟೇಕ್ ಮಾಡಿ ಅಡ್ಡಗಟ್ಟಿದ ಬಸ್ ಚಾಲಕ ಹಲ್ಲೆ ನಡೆಸಿದ ಯೋಧರು ಕ್ಷಮೆ ಯಾಚಿಸಬೇಕು ಎಂದು ಪಟ್ಟು ಹಿಡಿದ, ಬಸ್‌ನಲ್ಲಿದ್ದ ಪ್ರಯಾಣಿಕರು ಒಗ್ಗೂಡಿ ಯೋಧರ ವರ್ತನೆಯನ್ನು ಖಂಡಿಸಿದರು. ಇದೇ ವೇಳೆ ಸ್ಥಳೀಯರೂ ಜಮಾಯಿಸಿ ಬಸ್ ಚಾಲಕನ ಪರ ನಿಂತು ಯೋಧರ ವಿರುದ್ಧ ಕಿಡಿಕಾರಿದರು.

    ಬಂದೂಕು ತೋರಿಸಿ ಬೆದರಿಸಿದರು: ಈ ವೇಳೆ ಅರೆಸೇನಾಪಡೆ ಯೋಧರು ಹಾಗೂ ಸಾರ್ವಜನಿಕರ ನಡುವೆ ಮಾತಿನ ಚಕಮಕಿ ನಡೆಯಿತು. ಇದರಿಂದ ಆಕ್ರೋಶಗೊಂಡ ಕೆಲವು ಯೋಧರು ಬಂದೂಕು ತೋರಿಸಿ ಸಾರ್ವಜನಿಕರು ಚದರುವಂತೆ ಬೆದರಿಕೆ ಹಾಕಿದರು ಎನ್ನಲಾಗಿದೆ. ಇದರಿಂದ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನವಾಯಿತು.

    ವಿಷಯ ತಿಳಿದ ಕುರುಪರಪಲ್ಲಿ ಪೊಲೀಸರು ಸ್ಥಳಕ್ಕಾಗಮಿಸಿ ಇಬ್ಬರ ನಡುವೆ ಸಂಧಾನ ಪ್ರಯತ್ನ ನಡೆಸಿದರೂ ಪ್ರಯೋಜನವಾಗಲಿಲ್ಲ. ಯೋಧರು ಕ್ಷಮೆ ಯಾಚಿಸುವಂತೆ ಒತ್ತಾಯಿಸಿದ ಸಾರ್ವಜನಿಕರು ಸೇನಾವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡುವುದಿಲ್ಲ ಎಂದು ಪಟ್ಟು ಹಿಡಿದರು.

    ಕ್ಷಮೆ ಯಾಚನೆ: ಕಡೆಗೂ ಸಾರ್ವಜನಿಕರ ಒತ್ತಾಯಕ್ಕೆ ಮಣಿದ ಸೇನಾಪಡೆಯ ಅಧಿಕಾರಿ ಪ್ರತಾಪ್ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದರು. ಬಳಿಕ ಪರಿಸ್ಥಿತಿ ತಿಳಿಯಾಗಿ ಸಾರ್ವಜನಿಕರು ಪ್ರತಿಭಟನೆ ಕೈಬಿಟ್ಟರು. ಹಲ್ಲೆಯಿಂದ ಗಾಯಗೊಂಡಿದ್ದ ಚಾಲಕ ತಮಿಳರಸು ಎಂಬುವರನ್ನು ಪೊಲೀಸರು ಚಿಕಿತ್ಸೆಗಾಗಿ ಕೃಷ್ಣಗಿರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಪ್ರಕರಣದಿಂದ 30 ಮಿಷಕ್ಕೂ ಹೆಚ್ಚು ಸಮಯ ಹೆದ್ದಾರಿಯಲ್ಲಿ ವಾಹನದಟ್ಟಣೆ ಏರ್ಪಟ್ಟಿತ್ತು. ಸ್ಥಳಕ್ಕೆ ಎಸ್​ಪಿ ಸರೋಜ್ ಕುಮಾರ್ ಟ್ಯಾಗೋರ್ ಭೇಟಿ ನೀಡಿದ್ದರು.

    ಗರ್ಲ್​​ಫ್ರೆಂಡ್​ ತಾಯಿಗೆ ಹೆದರಿ ಸತ್ತೇ ಹೋದ; ಆಗಿದ್ದಾದರೂ ಏನು?

    ಐವತ್ತಕ್ಕೂ ಅಧಿಕ ಜನರಿಂದ ಚೀಟಿ ಕಟ್ಟಿಸಿಕೊಂಡು ಪರಾರಿಯಾದ ದಂಪತಿ; ಕೋಟಿಗಟ್ಟಲೆ ರೂ. ವಂಚನೆ, ಪೊಲೀಸರಿಗೆ ದೂರು

    1,500ಕ್ಕೂ ಅಧಿಕ ಜನರು ಸತ್ತ ಬೆನ್ನಿಗೇ ಮತ್ತೊಂದು ಭೀಕರ ಭೂಕಂಪ!; ಮೂರನೇ ಸಲ ನಡುಗಿದ ಟರ್ಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts