More

    1,500ಕ್ಕೂ ಅಧಿಕ ಜನರು ಸತ್ತ ಬೆನ್ನಿಗೇ ಮತ್ತೊಂದು ಭೀಕರ ಭೂಕಂಪ!; ಮೂರನೇ ಸಲ ನಡುಗಿದ ಟರ್ಕಿ

    ಟರ್ಕಿ: ನಿನ್ನೆ ಬೆಳಗಿನ ಜಾವ ಸುಮಾರು 1,500 ಮಂದಿಯ ಸಾವಿಗೆ ಕಾರಣವಾದಂಥ ಭೀಕರ ಭೂಕಂಪ ಸಂಭವಿಸಿದ್ದ ಟರ್ಕಿಯಲ್ಲಿ ಇಂದು ಸಂಜೆಯ ಸುಮಾರಿಗೆ ಇನ್ನೊಂದು ಭಯಂಕರ ಭೂಕಂಪ ಉಂಟಾಗಿದೆ. ಅದಾದ ಬೆನ್ನಿಗೇ ಮೂರನೇ ಬಾರಿ ಟರ್ಕಿ ನಡುಗಿದೆ.

    ಕಳೆದ ನೂರು ವರ್ಷಗಳಲ್ಲಿ ಸಂಭವಿಸಿದ ಭೂಕಂಪಗಳಲ್ಲೇ ಭೀಕರ ಎನ್ನಲಾದಂಥದ್ದು ಇಂದ ಬೆಳಗಿನ ಜಾವ ಟರ್ಕಿಯನ್ನು ನಡುಗಿಸಿದ್ದು, ರಿಕ್ಟರ್ ಮಾಪಕದಲ್ಲಿ 7.8 ತೀವ್ರತೆ ದಾಖಲಾಗಿತ್ತು. ರಾತ್ರಿ ಬೆಳಗಾಗುವುದರೊಳಗೆ ನೂರಾರು ಕಟ್ಟಡಗಳು ನೆಲಸಮವಾಗಿದ್ದು, ಒಂದು ಅಂದಾಜಿನ ಪ್ರಕಾರ 1,500ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ ಎನ್ನಲಾಗಿದೆ.

    ಈ ಭೂಕಂಪದಲ್ಲಿ ಸಿಲುಕಿದವರ ರಕ್ಷಣೆ-ತುರ್ತುಚಿಕಿತ್ಸೆ ಕಾರ್ಯಾಚರಣೆ ನಡೆಯುತ್ತಿರುವಾಗಲೇ ಹಾಗೂ ಉಳಿದವರು ಭಾರಿ ಭೂಕಂಪದ ಆತಂಕದಲ್ಲಿ ಇರುವಾಗಲೇ ಇನ್ನೊಂದು ಭೀಕರ ಭೂಕಂಪ ಇಂದು ಸಂಜೆ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 7.5 ದಾಖಲಾಗಿದೆ. ಈ ಭೂಕಂಪದಲ್ಲೂ ಹಲವಾರು ಕಟ್ಟಡಗಳು ನೆಲಸಮವಾಗಿದ್ದು, ಭಾರಿ ಸಂಖ್ಯೆಯ ಸಾವು-ನೋವು ಸಂಭವಿಸಿದೆ. ಈಗ ಕೆಲವು ನಿಮಿಷಗಳ ಹಿಂದೆ ಮೂರನೇ ಭೂಕಂಪ ಸಂಭವಿಸಿದ್ದು, ಇದರ ತೀವ್ರತೆ ರಿಕ್ಟರ್ ಮಾಪಕದಲ್ಲಿ 6ರಷ್ಟಿತ್ತು.

    ಟರ್ಕಿಯ ಡಜ್ಸ್ ಪ್ರದೇಶದಲ್ಲಿ 1999ರಲ್ಲಿ 7.4 ತೀವ್ರತೆಯ ಭೂಕಂಪ ಸಂಭವಿಸಿದ್ದು, 17 ಸಾವಿರಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದರು. 1939ರಲ್ಲಿ ಟರ್ಕಿಯಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿದ್ದು, 33 ಸಾವಿರ ಮಂದಿ ಸಾವಿಗೀಡಾಗಿದ್ದರು.

    ಶಾಸಕರ ಸ್ಟಿಕ್ಕರ್​​ ಇರುವ ಕಾರಿಗೆ ದ್ವಿಚಕ್ರ ವಾಹನ ಸವಾರ ಬಲಿ; ತಲೆ ಮೇಲೇ ಹರಿದು ಹೋದ ಕಾರು!

    ಪೊಲೀಸರೆದುರೇ ಮಾರಕಾಸ್ತ್ರ ಝಳಪಿಸಿ ದಾದಾಗಿರಿ; ಒಳ್ಳೇ ಮಾತಲ್ಲಿ ಹೇಳಿದ್ರೂ ಕೇಳದವನಿಗೆ ಶೂಟ್ ಮಾಡಿ ಬೆಂಡೆತ್ತಿದ ಪೊಲೀಸರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts