More

    ಒಂದು ವಾರ ದನಗಳ ಜಾತ್ರೆ

    ಮಾನ್ವಿ: ದನಗಳ ಜಾತ್ರೆಯಿಂದ ರೈತರಿಗೆ ಅನುಕೂಲ ಎಂದು ಅಡವಿ ಅಮರೇಶ್ವರ ಮಠದ ಕಿರಿಯ ಪೀಠಾಧಿಪತಿ ತೋಂಟದಾರ್ಯ ಸ್ವಾಮೀಜಿ ಹೇಳಿದರು.
    ತಾಲೂಕಿನ ಅಡವಿ ಅಮರೇಶ್ವರ ಸುಕ್ಷೇತ್ರದಲ್ಲಿ 70ನೇ ವರ್ಷದ ಜಾತ್ರಾಮಹೋತ್ಸವ ಅಂಗವಾಗಿ ದನಗಳ ಜಾತ್ರೆಗೆ ಗುರುವಾರ ಚಾಲನೆ ನೀಡಿ ಮಾತನಾಡಿದರು.

    ಪ್ರತಿವರ್ಷ ಅಡವಿ ಅಮರೇಶ್ವರದಲ್ಲಿ ಜಾತ್ರೆಯ ನಂತರ ಒಂದು ವಾರ ದನಗಳ ಜಾತ್ರೆ ನಡೆಯುತ್ತದೆ. ಈ ಭಾಗದ ರೈತರು ದನಗಳ ಜಾತ್ರೆಯಲ್ಲಿ ಎತ್ತುಗಳನ್ನು, ರಾಸುಗಳನ್ನು ಮಾರಾಟ ಮಾಡುತ್ತಾರೆ ಹಾಗೂ ಖರೀದಿ ಮಾಡುತ್ತಾರೆ ಎಂದರು.

    ಗ್ರಾಮದ ರೈತ ಶಿವು ಮಾತನಾಡಿ, ಬರಗಾಲದಿಂದ ಪೋಷಣೆ ಮಾಡಲಾಗದೆ ಎತ್ತುಗಳನ್ನು ಮಾರಾಟ ಮಾಡುವುದಕ್ಕೆ ಮುಂದಾಗಿದ್ದಾರೆ. ದನಗಳ ಜಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎತ್ತುಗಳನ್ನು ಮಾರಾಟ ಮಾಡುವವರು ಬಂದಿದ್ದಾರೆ. ಬರಗಾಲ ಹಾಗೂ ಬೆಳೆ ನಷ್ಟದಿಂದ ಕೃಷಿ ಚಟುವಟಿಕೆಗಳು ಗರ ಬಡಿದಿದೆ. ಹಾಗಾಗಿ ರೈತರ ಬಳಿ ಹಣದ ಕೊರತೆ ಇರುವುದರಿಂದ ಎತ್ತುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದರು.

    ಈ ಬಾರಿ ಬರಗಾಲ ಇರುವುದರಿಂದ ಮೇವಿನ ಕೊರತೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ದನಗಳ ಮಾರಾಟ ಮಾಡುವುದು ಕಂಡುಬಂತು. ರೈತರು ಸ್ಥಳೀಯ ಜವಾರಿ, ಹಳ್ಳಿಕಾರ, ಒಂಗೋಲ, ಸೀಮೆ, ಖಿಲ್ಲಾರಿ, ದೇವನಿ ವಿವಿಧ ತಳಿಯ ಎತ್ತುಗಳು 50 ಸಾವಿರದಿಂದ 2 ಲಕ್ಷ ರೂ. ವರೆಗೂ ಮಾರಾಟಗೊಂಡವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts