More

    ಕ್ವಾರಂಟೈನ್ ತಪ್ಪಿಸಲು ಹೊರಗಡೆಯಿಂದ ಬಂದವರ ಹೊಸ ಹೊಸ ತಂತ್ರ

    ಬೆಂಗಳೂರು: ಲಾಕ್‌ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಹೊರರಾಜ್ಯ ಮತ್ತು ವಿದೇಶಗಳಿಂದ ರಾಜ್ಯಕ್ಕೆ ಬರುತ್ತಿರುವವರು ಕಡ್ಡಾಯ ಕ್ವಾರಂಟೈನ್ ನಿಯಮದಿಂದ ತಪ್ಪಿಸಿಕೊಳ್ಳಲು ಬಗೆಬಗೆ ತಂತ್ರ ಅನುಸರಿಸುತ್ತಿರುವುದು ಬೆಳಕಿಗೆ ಬರುತ್ತಿದೆ.

    ಇದನ್ನೂ ಓದಿ: ಪತ್ನಿಗೆ ಹಾವು ಕಚ್ಚಿಸಿ ಕೊಲೆಗೈದ ಪ್ರಕರಣ: ಆರೋಪಿ ಸಿಕ್ಕಿಬೀಳಲು ಆತನ ನಡೆಯೇ ಕಾರಣವಾಯ್ತು!

    ದೆಹಲಿಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮಂಗಳವಾರ ಬಂದಿಳಿದ ತಾಯಿ ಮತ್ತು ಮಗಳು ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಟ್ಯಾಕ್ಸಿ ಮೂಲಕ ಪರಾರಿಯಾಗಲು ಪ್ರಯತ್ನಿಸಿದರು. ಇದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ಟ್ಯಾಕ್ಸಿಯನ್ನು ಅಡ್ಡಗಟ್ಟಿ ಅವರನ್ನು ವಾಪಸ್ ಕರೆತಂದಿದ್ದಾರೆ. ನಂತರ ಕ್ವಾರಂಟೈನ್‌ಗೆ ಕರೆದುಕೊಂಡು ಹೋಗಿದ್ದಾರೆ.

    ಮಂಗಳವಾರ ಬೆಳಗ್ಗೆ 7 ಗಂಟೆಗೆ ದೆಹಲಿಯಿಂದ ಬಂದ ರೈಲಿನಲ್ಲಿದ್ದ ಎಲ್ಲರಿಗೂ ಕ್ವಾರಂಟೈನ್ ಸೀಲ್ ಹಾಕಲಾಗಿತ್ತು. ಅದರಲ್ಲಿ ತೆಲಂಗಾಣ ಮೂಲದ ವ್ಯಕ್ತಿ ಭದ್ರತಾ ಸಿಬ್ಬಂದಿಯ ಕಣ್ಣು ತಪ್ಪಿಸಿ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬಂದಿದ್ದ. ಆತನ ಕೈಯಲ್ಲಿದ್ದ ಸೀಲ್ ನೋಡಿ ಜನರು ಹೆದರಿದ್ದಲ್ಲದೆ, ಆತನ ಕುರಿತು ಅಲ್ಲಿದ್ದ ಪೊಲೀಸರಿಗೆ ತಿಳಿಸಿದರು. ಪೊಲೀಸರು ಆತನನ್ನು ಹಿಡಿದು ಕ್ವಾರಂಟೈನ್‌ಗೆ ಒಪ್ಪಿಸಿದರು.

    ಇದನ್ನೂ ಓದಿ: ಇನ್​ಸ್ಟಾಗ್ರಾಂನಲ್ಲಿ ಕೊನೆಯ ಸಂದೇಶ ಬರೆದು ಆತ್ಮಹತ್ಯೆಗೆ ಶರಣಾದ ಬಾಲಿವುಡ್ ಯುವನಟಿ

    ದೆೆಹಲಿಯಿಂದ ಪ್ರತ್ಯೇಕವಾಗಿ ಬಂದಿದ್ದ ಮಹಿಳೆ ಮತ್ತು ಪುರುಷ ಪ್ರಯಾಣಿಕರಿಬ್ಬರು ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ, ನಿಲ್ದಾಣದಿಂದ ಹೊರ ಹೋಗಲು ಯೋಜನೆ ರೂಪಿಸಿದ್ದರು. ಕೊನೆಗೆ ಅವರನ್ನು ಹಿಡಿದ ಭದ್ರತಾ ಸಿಬ್ಬಂದಿ, ತರಾಟೆಗೆ ತೆಗೆದುಕೊಂಡಿದ್ದಲ್ಲದೆ, ಕ್ವಾರಂಟೈನ್‌ಗಾಗಿ ಹೋಟೆಲ್‌ಗೆ ಕಳುಹಿಸಿದರು.

    ವಿಶ್ವ ಆರೋಗ್ಯ ಸಂಸ್ಥೆ ಬೇಡ ಎಂದರೂ ಭಾರತದಲ್ಲಿ ಎಚ್‌ಸಿಕ್ಯೂ ಬಳಕೆ ಮುಂದುವರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts