More

    ಇನ್​ಸ್ಟಾಗ್ರಾಂನಲ್ಲಿ ಕೊನೆಯ ಸಂದೇಶ ಬರೆದು ಆತ್ಮಹತ್ಯೆಗೆ ಶರಣಾದ ಬಾಲಿವುಡ್ ಯುವನಟಿ

    ಭೋಪಾಲ್​: ಬಾಲಿವುಡ್​ ನಟಿ ಪ್ರೇಕ್ಷಾ ಮೆಹ್ತಾ ಅವರು ಸೋಮವಾರ (ಮೇ 25) ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದು, ಸಾವಿಗೂ ಮುನ್ನ ನೋವಿನ ನುಡಿಯೊಂದನ್ನು ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್​ ಮಾಡಿಕೊಂಡಿದ್ದಾರೆ.

    ಇದನ್ನೂ ಓದಿ: ಪತ್ನಿಗೆ ಹಾವು ಕಚ್ಚಿಸಿ ಕೊಲೆಗೈದ ಪ್ರಕರಣ: ಆರೋಪಿ ಸಿಕ್ಕಿಬೀಳಲು ಆತನ ನಡೆಯೇ ಕಾರಣವಾಯ್ತು!

    ಪ್ರೇಕ್ಷಾ ಮೆಹ್ತಾಗೆ ಕೇವಲ 25 ವರ್ಷ ವಯಸ್ಸಾಗಿತ್ತು. ಕ್ರೈಂ ಪ್ಯಾಟ್ರೋಲ್​, ಲಾಲ್​ ಇಸ್ಕ್​ ಮತ್ತು ಮೇರಿ ದುರ್ಗಾದಂತಹ ಪ್ರಮುಖ ಬಾಲಿವುಡ್​ ಶೋಗಳಲ್ಲಿ ಕಾಣಿಸಿಕೊಂಡಿದ್ದ ಪ್ರೇಕ್ಷಾ, ನಟ ಅಕ್ಷಯ್​ ಕುಮಾರ್​ ಅಭಿನಯದ ಪ್ಯಾಡ್​ ಮ್ಯಾನ್​ ಚಿತ್ರದಲ್ಲೂ ತೆರೆ ಹಂಚಿಕೊಂಡಿದ್ದರು.

    ಸೋಮವಾರ ತಡರಾತ್ರಿಯೇ ಮಧ್ಯಪ್ರದೇಶದ ಇಂದೂರ್​ನಲ್ಲಿರುವ ತಮ್ಮ ಮನೆಯಲ್ಲಿ ಪ್ರೇಕ್ಷಾ ನೇಣಿಗೆ ಶರಣಾಗಿದ್ದಾರೆ. ಅವರ ತಂದೆ ಬೆಳಗ್ಗೆ ಎದ್ದು ನೋಡಿದಾಗಲೇ ಘಟನೆ ಬೆಳಕಿಗೆ ಬಂದಿದೆ. ಪ್ರೇಕ್ಷಾರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯದ್ದರೂ ಆಗಲೇ ಸಾವಿಗೀಡಾಗಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.

    ಇದನ್ನೂ ಓದಿ: ಇಂಗ್ಲೆಂಡ್​ನಲ್ಲಿರೋ ಗುರು ಅರ್ಜಾನ್​ ದೇವ್​ ಗುರುದ್ವಾರಕ್ಕೆ ಹಾನಿ: ಪಾಕ್ ಪ್ರಜೆ ಬಂಧನ​

    ಸಾವಿಗೂ ಮುನ್ನ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಸಂದೇಶವೊಂದನ್ನು ಪೋಸ್ಟ್​ ಮಾಡಿರುವ ಪ್ರೇಕ್ಷಾ, “ನಿಮ್ಮ ಕನಸುಗಳು ಸಾಯುವುದು ಸಹ ತುಂಬಾ ಕೆಟ್ಟದು” ಎಂದು ಬರೆದು ಜೀವನಕ್ಕೆ ಅಂತ್ಯವಾಡಿದ್ದಾರೆ.

    ಸಾಯುವ ಕೊನೆ ಗಳಿಗೆಯಲ್ಲೂ ಸೆಲ್ಫಿಯೊಂದನ್ನು ಪೋಸ್ಟ್​ ಮಾಡಿರುವ ಪ್ರೇಕ್ಷಾ, ಅದಕ್ಕೆ ಅಗರ್​ ತುಮ್​ ಸಾಥ್​ ಹೋ ಎಂಬ ಪ್ರಖ್ಯಾತ ಹಾಡಿನ ಸಾಲುಗಳನ್ನು ಅಡಿಬರಹವಾಗಿ ನೀಡಿದ್ದಾರೆ. ಇತ್ತ ಆಕೆಯ ಸಾವಿನ ಸುದ್ದಿ ಪ್ರಕಟವಾಗುತ್ತಿದ್ದಂತೆ ಇನ್​ಸ್ಟಾಗ್ರಾಂನಲ್ಲಿ ಸಂತಾಪಗಳ ಸುರಿಮಳೆಯೂ ಹರಿದುಬಂದಿವೆ.

    ಇದನ್ನೂ ಓದಿ: ಅನ್ನ, ನೀರಿಲ್ಲದೇ ಸುಮಾರು 76 ವರ್ಷ ಬದುಕಿದ್ದ ನಿಗೂಢ ಯೋಗಿ ನಿಧನ

    ಪ್ರೇಕ್ಷಾ ಎರಡು ವರ್ಷಗಳ ಹಿಂದೆ ಮುಂಬೈಗೆ ತೆರಳಿದ್ದರು. ಲಾಕ್​ಡೌನ್​ನಿಂದಾಗಿ ಚಿಂತೆಗೀಡಾಗಿದ್ದರು ಎನ್ನಲಾಗಿದೆ. ಲಾಕ್​ಡೌನ್​ ಕೊನೆಯಾದ ಬಳಿಕ ಕೆಲಸದ ಗತಿಯೇನು ಎಂಬುದರ ಬಗ್ಗೆ ಚಿಂತಿಸುತ್ತಿದ್ದಳು ಎಂದೂ ತಿಳಿದುಬಂದಿದೆ.

    ಆರ್ಥಿಕ ಬಿಕ್ಕಟ್ಟಿನಿಂದ ಮತ್ತೊಬ್ಬ ನಟಿ ಮನ್ಮೀತ್​ ಗ್ರೆವಾಲ್ ಅವರು ಆತ್ಮಹತ್ಯೆಗೆ ಶರಣಾದ ಎರಡು ದಿನಗಳ ಬೆನ್ನಲ್ಲೇ ಪ್ರೇಕ್ಷಾ ಸಹ ತಮ್ಮ ಬದುಕನ್ನು ಕೊನೆಗಾಣಿಸಿಕೊಂಡಿದ್ದಾರೆ.

    ಕರೊನಾ ವೈರಸ್​ ಬಿಕ್ಕಟ್ಟಿನಿಂದ ಮಾರ್ಚ್​ 19 ರಿಂದ ಎಲ್ಲ ಕಿರಿತೆರೆ ಹಾಗೂ ಹಿರಿತೆರೆಯ ಕಾರ್ಯಚಟುವಟಿಕೆಗಳು ಸ್ತಬ್ಧವಾಗಿವೆ. ಇದರಿಂದ ಅನೇಕ ನಟರು ಹಾಗೂ ತಂತ್ರಜ್ಞರು ಕೆಲಸ ಕಳೆದುಕೊಂಡಿದ್ದು, ಭವಿಷ್ಯದ ಬಗ್ಗೆ ಚಿಂತೆಗೀಡಾಗಿದ್ದಾರೆ. (ಏಜೆನ್ಸೀಸ್​)

    ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತೀಯ ಸಂಶೋಧಕನಿಗೆ ಪ್ರತಿಷ್ಠಿತ ಇನ್ವೆಂಟರ್​ ಪ್ರಶಸ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts