More

    ಕರೊನಾ ಭಯವಿಲ್ಲ, ಮನೆಯಲ್ಲಿ ಪೂಜೆ ಇರುವ ಕಾರಣ ಪಿವಿ ಸಿಂಧು ಉಬೆರ್ ಕಪ್ ಆಡಲ್ಲ

    ಹೈದರಾಬಾದ್: ವಿಶ್ವ ಚಾಂಪಿಯನ್ ಪಿವಿ ಸಿಂಧು ಮುಂದಿನ ತಿಂಗಳು ನಡೆಯಲಿರುವ ಉಬೆರ್ ಕಪ್ ಮಹಿಳಾ ಬ್ಯಾಡ್ಮಿಂಟನ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಅನಂತರ ಡೆನ್ಮಾರ್ಕ್‌ನಲ್ಲಿ ನಡೆಯಲಿರುವ ಸೂಪರ್ 750 ಟೂರ್ನಿಯಲ್ಲೂ ಅವರು ಆಡುವುದು ಅನುಮಾನವೆನಿಸಿದೆ. ಇದಕ್ಕೆ ಅವರು ವೈಯಕ್ತಿಕ ಕಾರಣ ನೀಡಿದ ಬೆನ್ನಲ್ಲೇ, ಕರೊನಾ ಭಯ ಅವರನ್ನು ಕಾಡುತ್ತಿರಬಹುದು ಎಂಬ ಅನುಮಾನ ಹುಟ್ಟಿಕೊಂಡಿತ್ತು. ಅದಕ್ಕೀಗ ಸ್ಪಷ್ಟನೆ ನೀಡಿರುವ ಪಿವಿ ಸಿಂಧು ಅವರ ತಂದೆ ಪಿವಿ ರಮಣ, ಟೂರ್ನಿ ತಪ್ಪಿಸಿಕೊಳ್ಳಲು ಇರುವ ಅಸಲಿ ಕಾರಣವನ್ನು ಬಿಚ್ಚಿಟ್ಟಿದ್ದಾರೆ.

    ‘ಮುಂದಿನ ತಿಂಗಳು ನಮ್ಮ ಮನೆಯಲ್ಲಿ ವಿಶೇಷ ಪೂಜೆಯೊಂದು ನಿಗದಿಯಾಗಿದೆ. ಮನೆಯಲ್ಲಿ ಕೆಲ ಸಮಾರಂಭಗಳೂ ನಡೆಯಲಿವೆ. ಹೀಗಾಗಿ ಪಿವಿ ಸಿಂಧುಗೆ ವಿದೇಶಕ್ಕೆ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ’ ಎಂದು ಅವರ ತಂದೆ ಪಿವಿ ರಮಣ ತಿಳಿಸಿದ್ದಾರೆ.

    ‘ಪೂಜಾ ಸಮಾರಂಭಗಳು ಅಕ್ಟೋಬರ್ 15ರೊಳಗೆ ಮುಕ್ತಾಯ ಕಂಡರಷ್ಟೇ ಡೆನ್ಮಾರ್ಕ್ ಓಪನ್‌ಗೆ ಸಿಂಧು ತೆರಳಲಿದ್ದಾಳೆ. ಆಗ ಕರೊನಾ ಹಾವಳಿಯೂ ಸಂಪೂರ್ಣ ನಿಯಂತ್ರಣಕ್ಕೆ ಬರಬಹುದು’ ಎಂದು ರಮಣ ತಿಳಿಸಿದ್ದಾರೆ.

    ಇದನ್ನೂ ಓದಿ: ನಂ. 1 ಪಟ್ಟಕ್ಕೆ ಇಂಗ್ಲೆಂಡ್-ಆಸೀಸ್ ಫೈಟ್, ಟಿ20 ಸರಣಿಯ ಫಲಿತಾಂಶ ಭಾರತಕ್ಕೂ ಲಾಭ ತರಬಹುದು!

    ಥಾಮಸ್ ಮತ್ತು ಉಬೆರ್ ಕಪ್ ಟೂರ್ನಿ ಅಕ್ಟೋಬರ್ 3ರಿಂದ 11ರವರೆಗೆ ಡೆನ್ಮಾರ್ಕ್‌ನಲ್ಲಿ ನಡೆಯಲಿದ್ದು, ಕರೊನಾ ಹಾವಳಿ ಶುರುವಾದ ಬಳಿಕ ನಡೆಯಲಿರುವ ಮೊದಲ ಬ್ಯಾಡ್ಮಿಂಟನ್ ಟೂರ್ನಿ ಎನಿಸಿದೆ. ಅದರ ಬೆನ್ನಲ್ಲೇ ಅಕ್ಟೋಬರ್ 20ರಿಂದ 25ರವರೆಗೆ ಡೆನ್ಮಾರ್ಕ್ ಓಪನ್ ನಡೆಯಲಿದೆ. ಪಿವಿ ಸಿಂಧು ಈಗಾಗಲೆ ಹೈದರಾಬಾದ್‌ನ ರಾಷ್ಟ್ರೀಯ ಶಿಬಿರದಲ್ಲಿ ಅಭ್ಯಾಸ ಆರಂಭಿಸಿದ್ದಾರೆ.

    ಕೊಹ್ಲಿ-ಅನುಷ್ಕಾ ದಂಪತಿಯ ಮಗುವಿನ ಬಗ್ಗೆ ಭವಿಷ್ಯ ನುಡಿದ ಜ್ಯೋತಿಷಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts